ಶಾರುಖ್ ಖಾನ್ ಈ ಮೂಢನಂಬಿಕೆಯನ್ನು ತುಂಬಾನೇ ನಂಬುತ್ತಾರೆ
ಶಾರುಖ್ ಖಾನ್ ತಮ್ಮ ಚಿತ್ರಗಳ ಯಶಸ್ಸಿಗೆ ಒಂದು ವಿಶೇಷ ಮೂಢನಂಬಿಕೆಯನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ. ಅವರ ಚಿತ್ರದಲ್ಲಿ ಆ ರೀತಿಯ ಒಂದು ದೃಶ್ಯಗಳಿದ್ದರೆ ಆ ಚಿತ್ರ ಹಿಟ್ ಆಗುತ್ತದೆ ಎಂದು ನಂಬುತ್ತಾರೆ. 'ಕೊಯ್ಲಾ' ಮತ್ತು 'ದಿಲ್ವಾಲೆ' ಮುಂತಾದ ಹಿಟ್ ಚಿತ್ರಗಳಲ್ಲಿ ಈ ರೀತಿಯ ದೃಶ್ಯಗಳು ಇದ್ದವು. ಆ ಬಗ್ಗೆ ಇಲ್ಲಿದೆ ವಿವರ.

ಬಾಲಿವುಡ್‌ನ ಕಿಂಗ್ ಶಾರುಖ್ ಖಾನ್ (Shah Rukh Khan) ತಮ್ಮ ವೃತ್ತಿಜೀವನದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅದರ ಹಿಂದೆ ಅವರ ಕಠಿಣ ಪರಿಶ್ರಮ ಇದೆ. ಆದರೆ ಪ್ರತಿ ಚಿತ್ರ ಯಶಸ್ವಿಯಾಗಲು ಒಂದು ವಿಷಯವನ್ನು ಅವರು ಖಂಡಿತವಾಗಿಯೂ ನಂಬುತ್ತಾರೆ. ಅವರ ಪ್ರಕಾರ, ಆ ಕೆಲಸ ಮಾಡಿದಾಗಲೆಲ್ಲಾ ಆ ಚಿತ್ರ ಖಂಡಿತವಾಗಿಯೂ ಹಿಟ್ ಆಗುತ್ತದೆ ಎಂದು ಹೇಳಿದ್ದಾರೆ.
1997ರಲ್ಲಿ ಬಿಡುಗಡೆಯಾದ ರಾಕೇಶ್ ರೋಷನ್ ನಿರ್ದೇಶನದ ‘ಕೊಯ್ಲಾ’ ಚಿತ್ರದಲ್ಲೂ ಇದೇ ರೀತಿಯ ಘಟನೆ ಸಂಭವಿಸಿತ್ತಂತೆ. ಕೊಯ್ಲಾ 90 ರ ದಶಕದ ಸೂಪರ್‌ಹಿಟ್ ಚಿತ್ರಗಳಲ್ಲಿ ಒಂದಾಗಿದೆ. ರಾಕೇಶ್ ರೋಷನ್ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್ ಖಾನ್, ಮಾಧುರಿ ದೀಕ್ಷಿತ್, ಅಮರೀಶ್ ಪುರಿ ಮತ್ತು ಜಾನಿ ಲಿವರ್ ಸೇರಿದಂತೆ ಅನೇಕ ದೊಡ್ಡ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿಯೂ ಯಶಸ್ವಿಯಾಯಿತು ಮತ್ತು ಇದರ ಹಿಂದಿನ ಕಾರಣವನ್ನು ಶಾರುಖ್ ಸ್ವತಃ ನೀಡಿದ್ದರು
‘ಕೊಯ್ಲಾ’ ಚಿತ್ರದ ಹಿಂದಿನ ಕಥೆಯನ್ನು ಶಾರುಖ್ ಖಾನ್ ಹೇಳಿದ್ದರು. ‘ದೇಖಾ ತುಜೆ ತೋ’ ಹಾಡಿನ ಚಿತ್ರೀಕರಣದ ಸಮಯದಲ್ಲಿ ಅವರು ತಮ್ಮ ಮೊಣಕಾಲಿಗೆ ಗಾಯ ಮಾಡಿಕೊಂಡರು. ‘ಆ ಹಾಡಿನಲ್ಲಿ, ನಾನು ಗಾಳಿಯಲ್ಲಿ ಹಾರುತ್ತೇನೆ. ರಾಕೇಶ್ ಜಿ ನನ್ನನ್ನು ತಡೆಯುತ್ತಾರೋ ಇಲ್ಲವೋ ಎಂದು ನನಗೆ ತಿಳಿದಿರಲಿಲ್ಲ. ಆದರೆ ನಾನು ಹಾಗೆ ಮಾಡಿದ ತಕ್ಷಣ, ನಾನು ನೆಲಕ್ಕೆ ಬಿದ್ದು ನನ್ನ ಮೊಣಕಾಲಿಗೆ ಗಾಯವಾಯಿತು’ ಎಂದಿದ್ದರು ಶಾರುಖ್ ಖಾನ್.
ಇದನ್ನೂ ಓದಿ: ‘ನಾನು ಒಳ್ಳೆಯ ತಂದೆಯಲ್ಲ’; ಶಾರುಖ್ ಖಾನ್ ಬೇಸರ
ಶಾರುಖ್ ಖಾನ್ ಒಂದು ಮೂಢನಂಬಿಕೆಯಲ್ಲಿ ನಂಬಿಕೆ ಇಟ್ಟಿದ್ದಾರೆ. ‘ನನಗೆ ಒಂದು ಮೂಢನಂಬಿಕೆ ಇದೆ. ನಾನು ಓಡುವ ದೃಶ್ಯ ಇದ್ದರೆ, ಚಿತ್ರ ದೊಡ್ಡ ಹಿಟ್ ಆಗುತ್ತದೆ. ನಾನು ಡರ್ ಚಿತ್ರದಲ್ಲಿ ಸನ್ನಿಯಿಂದ ಓಡಿಹೋದಾಗ ಆ ಚಿತ್ರ ದೊಡ್ಡ ಹಿಟ್ ಆಯಿತು. ‘ಕರಣ್ ಅರ್ಜುನ್’ ಚಿತ್ರದಲ್ಲಿ ನಾನು ಓಡಿದೆ. ಅದು ಹಿಟ್ ಆಯಿತು. ‘ದಿಲ್ವಾಲೆ’ಯಲ್ಲಿ ನಾನು ಹುಡುಗಿಯ ಹಿಂದೆ ಓಡುತ್ತಲೇ ಇದ್ದೆ, ಅದು ಕೂಡ ದೊಡ್ಡ ಹಿಟ್ ಆಯಿತು. ಹಾಗಾಗಿ, ನಾನು ಎಲ್ಲಾ ಸಿನಿಮಾಗಳನ್ನು ಅದು ಮಾಡಿದ್ದೇನೆ. ಈ ಚಿತ್ರದಲ್ಲಿ (ಕೊಯ್ಲಾ) ನಾನು ಬಹಳಷ್ಟು ಓಡಿದ್ದೇನೆ. ಕೆಲವೊಮ್ಮೆ ನಾಯಿಗಳ ಹಿಂದೆ, ಕೆಲವೊಮ್ಮೆ ಖಳನಾಯಕರ ಹಿಂದೆ, ಕೆಲವೊಮ್ಮೆ ಖಳನಾಯಕರ ಭಯದಿಂದ ಮತ್ತು ಕೆಲವೊಮ್ಮೆ ರೈಲುಗಳ ಹಿಂದೆ’ ಎಂದಿದ್ದರು ಅವರು. ಈ ಮೊದಲು ರಿಲೀಸ್ ಆದ ‘ಚೆನ್ನೈ ಎಕ್ಸ್ಪ್ರೆಸ್’ನಲ್ಲೂ ಅವರು ಓಡುತ್ತಾರೆ ಮತ್ತು ಆ ಚಿತ್ರ ಹಿಟ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







