AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಈ ನನ್ ಮಕ್ಳಿಗೆ..’; ಫೇಕ್ ಅಕೌಂಟ್ ಮಾಡಿದವರಿಗೆ ‘ಸೂರ್ಯವಂಶ’ ಸ್ಟೈಲ್​ನಲ್ಲಿ ಎಸ್. ನಾರಾಯಣ್ ಕೌಂಟರ್

ನಟ ಎಸ್. ನಾರಾಯಣ್ ಅವರ ಹೆಸರಿನಲ್ಲಿ ನಕಲಿ ಎಕ್ಸ್ (ಟ್ವಿಟರ್) ಖಾತೆಯನ್ನು ತೆರೆಯಲಾಗಿದೆ. ಇದರ ಮೂಲಕ ಇತರ ನಟರ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ . ಪೊಲೀಸ್ ಆಯುಕ್ತರಿಗೆ ದೂರು ನೀಡಿರುವ ಅವರು, ಈ ಖಾತೆಯಿಂದ ತಮ್ಮ ಹೆಸರಿಗೆ ಕೆಟ್ಟ ಹೆಸರು ತರುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದಾರೆ.

‘ಈ ನನ್ ಮಕ್ಳಿಗೆ..’; ಫೇಕ್ ಅಕೌಂಟ್ ಮಾಡಿದವರಿಗೆ ‘ಸೂರ್ಯವಂಶ’ ಸ್ಟೈಲ್​ನಲ್ಲಿ ಎಸ್. ನಾರಾಯಣ್ ಕೌಂಟರ್
ಎಸ್​. ನಾರಾಯಣ್ (ಚಿತ್ರ ಕೃಪೆ: SRS Media Vision )
ರಾಜೇಶ್ ದುಗ್ಗುಮನೆ
|

Updated on:Aug 01, 2025 | 2:11 PM

Share

ನಟ, ನಿರ್ದೇಶ, ನಿರ್ಮಾಪಕ ಎಸ್​. ನಾರಾಯಣ್ (S Narayan) ಅವರು ಇತ್ತೀಚೆಗೆ ದೂರು ದಾಖಲು ಮಾಡಿದ್ದಾರೆ. ಇದಕ್ಕೆ ಕಾರಣ ಅವರ ಖಾತೆಯಲ್ಲಿ ತೆರೆಯಲಾದ ಫೇಕ್ ಎಕ್ಸ್ (ಟ್ವಿಟರ್) ಖಾತೆ. ಕೆಲವರು ಫ್ಯಾನ್ ಪೇಜ್​ಗಳನ್ನು ಮಾಡಿಕೊಂಡು ನಟರ ಹೆಸರಲ್ಲಿ ಒಳ್ಳೆಯ ರೀತಿಯ ಪೋಸ್ಟ್​ಗಳನ್ನು ಮಾಡಿದ ಉದಾಹರಣೆ ಇದೆ. ಆದರೆ ನಾರಾಯಣ್ ಹೆಸರಲ್ಲಿ ಖಾತೆ ಮಾಡಿದವರು ಬೇರೆ ಹೀರೋಗಳ ಬಗ್ಗೆ ಅವಾಚ್ಯವಾಗಿ ಪೋಸ್ಟ್​ಗಳನ್ನು ಹಾಕುತ್ತಿದ್ದರು. ಇದು ನಾರಾಯಣ್ ಗಮನಕ್ಕೆ ಬಂದಿದ್ದು ಕಮಿಷನರ್​ಗೆ ದೂರು ನೀಡಿದ್ದಾರೆ. ಆ ಬಳಿಕ ಮಾತನಾಡುವಾಗ ಅವರು ವಿಷ್ಣುವರ್ಧನ್ ನಟನೆಯ ‘ಸೂರ್ಯವಂಶ’ ಸಿನಿಮಾ ಡೈಲಾಗ್ ಹೇಳಿದ್ದಾರೆ.

ನಾರಾಯಣ್ ಹೇಳಿದ್ದೇನು?

‘ನಾನು ಎಕ್ಸ್ ಖಾತೆ ಆರಂಭಿಸಿಲ್ಲ. ಆದರೆ, ನನ್ನ ಹೆಸರಲ್ಲಿ ಖಾತೆ ತೆಗೆದು, ಸ್ಟಾರ್ ನಟರನ್ನು ತೆಗಳುವ ಹಾಗೆ ಪೋಸ್ಟ್​ಗಳನ್ನು ಮಾಡಲಾಗುತ್ತಿದೆ. ನಾಲ್ಕು ದಿನಗಳ ಹಿಂದೆ ಈ ಬಗ್ಗೆ ಗೊತ್ತಾಯಿತು. ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇನೆ. ಪುನೀತ್ ರಾಜ್​ಕುಮಾರ್ ನಮ್ಮ ಜೊತೆ ಇಲ್ಲ. ನಮ್ಮ ಹಾಗೂ ಅವರ ಸಂಬಂಧ ತುಂಬಾ ಚೆನ್ನಾಗಿತ್ತು. ಅವರ ಬಗ್ಗೆಯೂ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಸುದೀಪ್ ಬಗ್ಗೆ, ಶಿವಣ್ಣನ ಬಗ್ಗೆ, ಎಕ್ಕ ಸಿನಿಮಾ ಬಗ್ಗೆ ನಾನು ಕೆಟ್ಟದಾಗಿ ಮಾತನಾಡಿರುವ ರೀತಿ ಪೋಸ್ಟ್ ಮಾಡಲಾಗಿದೆ. ನನ್ನ ಬಗ್ಗೆ ಎಲ್ಲಾ ಹೀರೋಗಳಿಗೂ ಗೊತ್ತು. ಹೀಗಾಗಿ, ಅವರು ಯಾರೂ ತಪ್ಪು ತಿಳಿದುಕೊಂಡಿಲ್ಲ ಎಂದು’ ಎಂದು ಎಸ್​. ನಾರಾಯಣ್ ಹೇಳಿದ್ದಾರೆ.

ಇದನ್ನೂ ಓದಿ
Image
ವಾರದ ಮಧ್ಯವೂ ‘ಸು ಫ್ರಮ್ ಸೋ’ ಅಬ್ಬರದ ಕಲೆಕ್ಷನ್; ಹಲವು ದಾಖಲೆಗಳು ಉಡೀಸ್
Image
ಬಂಡುಕೋರನ ಅವತಾರದಲ್ಲಿ ರಿಷಬ್; ರಾಜಮೌಳಿ ಗರಡಿಯ ನಿರ್ದೇಶಕನ ಜೊತೆ ಸಿನಿಮಾ
Image
ಸೋನು ಸೂದ್ ಜನ್ಮದಿನ; ನಟನೆ ಕಡಿಮೆ ಮಾಡಿದರೂ ತಗ್ಗಿಲ್ಲ ನಟನ ಆಸ್ತಿ
Image
ಹೀನಾಯ ಸ್ಥಿತಿ ತಲುಪಿದ ‘ಹರಿ ಹರ ವೀರ ಮಲ್ಲು’ ಕಲೆಕ್ಷನ್; ಪವನ್ ಕನಸು ಭಗ್ನ

ಎಸ್ ನಾರಾಯಣ್ ಮಾತನಾಡಿದ ವಿಡಿಯೋ

ಮನೆಯಲ್ಲಿ ಏನೂ ಕೆಲಸ ಇರಲ್ಲ..

‘ಸೂರ್ಯವಂಶ’ ಸಿನಿಮಾದಲ್ಲಿ ಬಸ್​ನಲ್ಲಿ ಪ್ರಯಾಣಿಸುವ ಪರಿಚಯ ಇಲ್ಲದವರನ್ನು ಕರೆದು, ಮಾತನಾಡಿಸಿ ತಲೆಗೆ ಹುಳ ಬಿಡೋದು ದೊಡ್ಡಣ್ಣನ ಕೆಲಸ. ಎಸ್. ನಾರಾಯಣ್ ಬಸ್​ನಲ್ಲಿ ಪ್ರಯಾಣಿಸುವಾಗ, ಕೆಳಗೆ ದೊಡ್ಡಣ್ಣ ಕರೆದು ಮಾತನಾಡಿಸುತ್ತಾರೆ. ಆಗ ಎಸ್ ನಾರಾಯಣ್, ಪರಿಚಯ ಇರುವವರಂತೆ ಮಾತನಾಡಿಸಿ ದೊಡ್ಡಣ್ಣನ ತಲೆಗೆ ಹುಳ ಬಿಡುತ್ತಾರೆ. ಆ ಬಳಿಕ ‘ಈ ನನ್ ಮಕ್ಳಿಗೆ ತಿಂದುಬಿಟ್ಟು ಮನೆಯಲ್ಲಿ ಏನು ಕೆಲಸ ಇರಲ್ಲ. ಇಲ್ಲಿ ಬಂದು ಬಿಟ್ಟು ಹೋಗಿ ಬರೋವರಿಗೆಲ್ಲ ತರ್ಲೆ ಮಾಡ್ತಾ ಇರ್ತಾರೆ’ ಎಂದು ಹೇಳುತ್ತಾರೆ. ಈಗಲೂ ಅವರು ಅದೇ ರೀತಿ ಡೈಲಾಗ್ ಹೇಳಿದ್ದಾರೆ.

ಟ್ವಿಟರ್ ಪೋಸ್ಟ್

‘ನನಗೆ ಕೆಟ್ಟ ಹೆಸರು ತರಬೇಕು ಎಂಬುದು ಒಂದಾದರೆ. ಇವರ್ಯಾರಿಗೂ ಕೆಲಸ ಇರಲ್ಲ, ಸುಮ್ಮನೆ ಕೂತ್ಗೊಂಡು ಈ ರೀತಿ ಮಾಡ್ತಾರೆ’ ಎಂದು ಅವರು ಹೇಳಿದ್ದಾರೆ. ‘ಚಿತ್ರರಂಗದಲ್ಲಿ ನಾನು 3 ದಶಕಗಳಿಂದ ಇದ್ದೇನೆ. ನನ್ನ ಹೆಸರಿಗೆ ಮಸಿ ಬಳಿಯಲು ಸಾಧ್ಯವಿಲ್ಲ’ ಎಂದು ನಾರಾಯಣ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:35 am, Thu, 31 July 25