AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲೇಜು ಹೋಗೋ ವಯಸ್ಸಲ್ಲಿ ‘ಸು ಫ್ರಮ್ ಸೋ’ಗೆ ಮ್ಯೂಸಿಕ್​ ಮಾಡಿದ ​ಸುಮೇಧ್; ಇಲ್ಲಿದೆ ಹಿನ್ನೆಲೆ

‘ಸು ಫ್ರಮ್ ಸೋ’ ಚಿತ್ರದ ಯಶಸ್ಸಿಗೆ ಸಂಗೀತದ ಪಾತ್ರ ಅತ್ಯಂತ ಪ್ರಮುಖ. ಕಾಲೇಜು ವಿದ್ಯಾರ್ಥಿ ಸುಮೇಧ್ ಕೆ. ಅವರ ಸಂಗೀತ ಸಂಯೋಜನೆಯು ಚಿತ್ರಕ್ಕೆ ಹೊಸ ಆಯಾಮ ನೀಡಿದೆ. ರಾಜ್ ಬಿ. ಶೆಟ್ಟಿ ಅವರ ಮಾರ್ಗದರ್ಶನದೊಂದಿಗೆ ಸುಮೇಧ್ ಅವರು ಚಿತ್ರದ ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ.

ಕಾಲೇಜು ಹೋಗೋ ವಯಸ್ಸಲ್ಲಿ ‘ಸು ಫ್ರಮ್ ಸೋ’ಗೆ ಮ್ಯೂಸಿಕ್​ ಮಾಡಿದ ​ಸುಮೇಧ್; ಇಲ್ಲಿದೆ ಹಿನ್ನೆಲೆ
ಸುಮೇಧ್
ರಾಜೇಶ್ ದುಗ್ಗುಮನೆ
|

Updated on:Jul 31, 2025 | 1:00 PM

Share

ರಾಜ್ ಬಿ. ಶೆಟ್ಟಿ ನಿರ್ಮಾಣದ, ಜೆಪಿ ತುಮಿನಾಡ್ ನಿರ್ದೇಶನದ ‘ಸು ಫ್ರಮ್ ಸೋ’ (Su Form So Movie) ಯಶಸ್ಸು ಕಾಣಲು ಸಿನಿಮಾದ ಹಾಡುಗಳು ಕೂಡ ಪ್ರಮುಖ ಕಾರಣ. ಎಲ್ಲಾ ಹಾಡುಗಳು ಸಾಕಷ್ಟು ಗಮನ ಸೆಳೆದಿವೆ. ಮೆಲೋಡಿ, ಭರ್ಜರಿ ಸ್ಟೆಪ್ ಹಾಕೋ ಸಾಂಗ್​ಗಳು ಚಿತ್ರದಲ್ಲಿ ಇವೆ. ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು ಸುಮೇಧ್ ಕೆ. ಅವರು. ಅವರಿನ್ನೂ ಕಾಲೇಜು ಓದುತ್ತಿದ್ದಾರೆ. ಅವರು ಚಿತ್ರದಲ್ಲಿ ಕೆಲಸ ಮಾಡಿದ ಅನುಭವನ್ನು ಟಿವಿ9 ಕನ್ನಡ ಡಿಜಿಟಲ್ ಜೊತೆ ಬಿಚ್ಚಿಟ್ಟಿದ್ದಾರೆ.

ರಾಜ್ ಬಿ. ಶೆಟ್ಟಿ ಹಾಗೂ ತಂಡ ಹಾಡನ್ನು ಕಂಪೋಸ್ ಮಾಡಲು ಹೇಗೆ ಸಹಾಯ ಮಾಡಿತು ಎಂಬುದನ್ನು ಸುಮೇಧ್ ವಿವರಿಸಿದ್ದಾರೆ. ‘ಸಿನಿಮಾದ ಗೆಲುವು ತುಂಬಾನೆ ಖುಷಿ ಕೊಟ್ಟಿದೆ. ಕಷ್ಟಪಟ್ಟಿದ್ದಕ್ಕೆ ಪ್ರತಿಫಲ ಸಿಕ್ಕಿದೆ. ಜನ ಸಾಂಗ್​ಗೆ ರಿಯಾಕ್ಟ್ ಮಾಡಿದ್ದು ನೋಡಿದಾಗ ಖುಷಿ ಆಗುತ್ತದೆ. ರಾಜ್​ ಹಾಗೂ ತಂಡಕ್ಕೆ ಸಿನಿಮಾದಲ್ಲಿ ಏನು ಬೇಕು ಎಂಬ ಕ್ಲ್ಯಾರಿಟಿ ಇತ್ತು. ಸಿಚ್ಯುವೇಶನ್ ಹೀಗೆ ಎಂದು ವಿವರಿಸುತ್ತಿದ್ದರು. ಕಥೆ ಎಲ್ಲೂ ಬ್ರೇಕ್ ಆಗಬಾರದು ಆ ರೀತಿಯಲ್ಲಿ ಮ್ಯೂಸಿಕ್ ಮಾಡಬೇಕು ಎಂದು ಹೇಳುತ್ತಿದ್ದರು. ಅದರ ಆಧಾರದ ಮೇಲೆ ನಾನು ಎಕ್ಸ್​ಪ್ಲೋರ್ ಮಾಡಲು ಅವಕಾಶ ಇತ್ತು’ ಎಂದಿದ್ದಾರೆ ಅವರು.

ಇದನ್ನೂ ಓದಿ
Image
‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ಬಾವ ಹೇಳೋದೇನು? ಯಾರಿವರು?
Image
ಈ ಫೋಟೋದಲ್ಲಿರೋ ಬಾಲಕಿ ಈಗ ಸ್ಟಾರ್ ನಟಿ; ಯಾರೆಂದು ಗುರುತಿಸಿ
Image
ಫೇಕ್ ಅಕೌಂಟ್ ಮಾಡಿದವರಿಗೆ ಸೂರ್ಯವಂಶ ಸ್ಟೈಲ್​ನಲ್ಲಿ ಎಸ್. ನಾರಾಯಣ್ ಕೌಂಟರ್
Image
ವಾರದ ಮಧ್ಯವೂ ‘ಸು ಫ್ರಮ್ ಸೋ’ ಅಬ್ಬರದ ಕಲೆಕ್ಷನ್; ಹಲವು ದಾಖಲೆಗಳು ಉಡೀಸ್

‘ಡ್ಯಾಂಕ್ಸ್ ಆ್ಯಂಥಮ್​ಗೆ ನಾನು ಹಲವು ವರ್ಷನ್​​ಗಳನ್ನು ಕಂಪೋಸ್ ಮಾಡಿದ್ದೆ. ಅದರಲ್ಲಿ ಈಗ ಬಳಕೆ ಆಗಿರುವ ಮ್ಯೂಸಿಕ್​ನ ಫೈನಲ್ ಮಾಡಲಾಯಿತು. ಮೆಲೋಡಿ ಹಾಡುಗಳನ್ನು ಕಂಪೋಸ್ ಮಾಡುವಾಗಲೂ ರಾಜ್ ಅವರು ಸಿಚ್ಯುವೇಶನ್ ಎಕ್ಸ್​ಪ್ಲೇನ್ ಮಾಡಿದ್ದರು. ಆ ರೀತಿಯಲ್ಲಿ ನಾನು ಮ್ಯೂಸಿಕ್ ಮಾಡಿದೆ’ ಎನ್ನುತ್ತಾರೆ ಅವರು.

View this post on Instagram

A post shared by Sumedh K (@sumedhk119)

ಈ ಗೆಲುವಿನ ಬಳಿಕ ಸುಮೇಧ್​ಗೆ ಹಲವು ಆಫರ್​ಗಳು ಬರುತ್ತಿವೆಯಂತೆ. ‘ಈ ಗೆಲುವು ನನ್ನ ವೃತ್ತಿ ಜೀವನಕ್ಕೆ ಚಾಲೆಂಜ್ ಹಾಗೂ ಪಾಸಿಟಿವ್ ಎರಡೂ ಹೌದು. ಕಲಿಯೋಕೆ ಇನ್ನು ಸಾಕಷ್ಟಿದೆ. ನಾನು ನಿಧಾನವಾಗಿ ಸಿನಿಮಾಗಳನ್ನು ಒಪ್ಪಿ ಮ್ಯೂಸಿಕ್ ಮಾಡೋಣ ಎಂದುಕೊಂಡಿದ್ದೇನೆ. ಇನ್ನುಮುಂದೆ ಹೆಚ್ಚು ಜಾಗೃತೆ ಬೇಕು. ಸಾಕಷ್ಟು ಆಫರ್​ಗಳು ಬರುತ್ತಿವೆ ಎನ್ನುತ್ತಾರೆ’ ಸುಮೇಧ್.

ಇದನ್ನೂ ಓದಿ: ‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ಬಾವ ಹೇಳೋದೇನು? ಯಾರಿವರು?

‘ನಾನಿನ್ನು ಕಾಲೇಜ್ ಓದುತ್ತಿದ್ದೇನೆ. ಸಿನಿಮಾ ಕೆಲಸ ಹಾಗೂ ಕಾಲೇಜ್​​ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕಿದೆ. ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ನನ್ನ ಕುಟುಂಬದ ಮೂಲ ಉತ್ತರ ಕರ್ನಾಟಕ’ ಎಂದು ಖುಷಿಯಿಂದ ಹೇಳುತ್ತಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:58 pm, Thu, 31 July 25