ಎಲ್ಲಾ ಸರಿಯಿದ್ದಿದ್ದರೆ ಇಂದು ಕೆಜಿಎಫ್- 2 ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಬೇಕಿತ್ತು!

KGF Chapter 2 Release Date: ಎಲ್ಲವೂ ನಿಗದಿಯಂತೆ ನಡೆದಿದ್ದರೆ ವರ್ಷಗಳ ಕಾಲ ಕಾದಿದ್ದ ಅಭಿಮಾನಿಗಳ ಆಸೆ ಇಂದು ಈಡೇರಬೇಕಿತ್ತು. ಆದರೆ ಕೊರೊನಾ ಎರಡನೇ ಅಲೆಯ ಕಾರಣದಿಂದಾಗಿ ಆ ಆಕಾಂಕ್ಷೆ ಸಾಧ್ಯವಾಗಿಲ್ಲ. ಆದರೆ ಸದ್ಯದಲ್ಲೇ ಅದು ಈಡೇರುವ ಸಾಧ್ಯತೆ ಇದೆ. ಏನದು? ಮುಂದೆ ಓದಿ.

ಎಲ್ಲಾ ಸರಿಯಿದ್ದಿದ್ದರೆ ಇಂದು ಕೆಜಿಎಫ್- 2 ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಬೇಕಿತ್ತು!
ಚಿತ್ರತಂಡ ಬಿಡುಗಡೆ ಮಾಡಿರುವ ನೂತನ ಪೋಸ್ಟರ್


ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಚಿತ್ರ ಕೆಜಿಎಫ್ 2ಗೆ ದೇಶದಾದ್ಯಂತ ಸಿನಿ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಎಲ್ಲವೂ ಸರಿಯಾಗಿದ್ದಿದ್ದರೆ ಇಂದು ಕೆಜಿಎಫ್ 2 ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಬೇಕಿತ್ತು. ಹೌದು. 2020ರಲ್ಲಿ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ತಿಳಿಸಿದ್ದಂತೆ- 2021ರ ಜುಲೈ 16 ಕೆಜಿಎಫ್ 2 ಚಿತ್ರಮಂದಿರಗಳಿಗೆ ಅಪ್ಪಳಿಸಬೇಕಿತ್ತು. ಬರಿಯ ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ಹಲವು ಭಾಷೆಗಳಲ್ಲಿ ಚಿತ್ರವು ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಎರಡನೇ ಅಲೆಯು ಎಲ್ಲೆಡೆ ವ್ಯಾಪಿಸಿದ್ದರಿಂದ ಈ ಕಾಯುವಿಕೆ ಅನಿರ್ದಿಷ್ಟಾವಧಿಗೆ ಮುಂದೆ ಹೋಗಿದೆ. ಆದರೆ, ಸಂತಸದ  ಸುದ್ದಿಯೆಂದರೆ ಚಿತ್ರತಂಡವು ಸದ್ಯದಲ್ಲೇ ಕೆಜಿಎಫ್ 2 ಬಿಡುಗಡೆಗೆ ದಿನಾಂಕ ಘೋಷಿಸಲಿದೆ ಎಂಬುದು.

ಕೆಜಿಎಫ್ 2 ಚಿತ್ರಕ್ಕೆ ಅಭಿಮಾನಿಗಳು ಎಷ್ಟು ಕಾತರದಿಂದ ಕಾಯುತ್ತಿದ್ದಾರೆ ಎಂಬುದಕ್ಕೆ ಉದಾಹರಣೆಯೆಂದರೆ ಈ ಚಿತ್ರವು ಐಎಮ್​ಡಿಬಿಯಲ್ಲಿ ಅತ್ಯಂತ ದೀರ್ಘಕಾಲದಿಂದ ಕಾಯುತ್ತಿರುವ ಮೊದಲ ಚಿತ್ರವಾಗಿದೆ. ಹಾಗೆಯೇ ಸಿನಿಪ್ರೇಮಿಗಳು ಅತ್ಯಂತ ಹೆಚ್ಚು ನಿರೀಕ್ಷೆ ಹೊಂದಿರುವುದು ಇದೇ ಚಿತ್ರದ ಮೇಲೆ  ಎಂದು ಐಎಮ್​ಡಿಬಿ ಹೇಳುತ್ತಿದೆ. ಸಂಜಯ್ ದತ್, ಪ್ರಕಾಶ್ ರಾಜ್, ರವೀನಾ ಟಂಡನ್ ಸೇರಿದಂತೆ ಅತ್ಯಂತ ದೊಡ್ಡ ತಾರಾಗಣ ಹೊಂದಿರುವ ಈ ಚಿತ್ರದ ಮೇಲೆ ದಿನದಿಂದ ದಿನಕ್ಕೆ ನಿರೀಕ್ಷೆ ದುಪ್ಪಟ್ಟಾಗುತ್ತಿರುವುದಂತೂ ಹೌದು.

ಚಿತ್ರತಂಡವು ಇಂದು ಬಿಡುಗಡೆ ಮಾಡಿರುವ ಪೋಸ್ಟರ್:

ಈ ನಡುವೆ ನಟ, ಕೆಜಿಎಫ್ ಚಿತ್ರದ ನಾಯಕ ಯಶ್ ಜನ್ಮದಿನದಂದು (ಜನವರಿ 8) ಚಿತ್ರತಂಡವು ಟೀಸರ್ ಬಿಡುಗಡೆ ಮಾಡಿತ್ತು. ವಿಶ್ವದಲ್ಲೇ ಅತ್ಯಂತ ಹೆಚ್ಚು ವೀಕ್ಷಣೆಗೊಳಗಾದ ಟೀಸರ್ ಎಂಬ ಖ್ಯಾತಿ ಇದಕ್ಕಿತ್ತು. ಅದೀಗ ಮತ್ತೊಂದು ಮೈಲಿಗಲ್ಲನ್ನು ತಲುಪಲು ಸಿದ್ಧವಾಗಿದೆ. ಹೌದು. ಕೆಜಿಎಫ್ 2 ಟೀಸರ್ 200ಮಿಲಿಯನ್ ವೀಕ್ಷಣೆಯ ಸನಿಹ ಬಂದು ನಿಂತಿದೆ. ಅಂದರೆ  20ಕೋಟಿ ವೀಕ್ಷಣೆಯ ಆಸುಪಾಸಿನಲ್ಲಿ ಕೆಜಿಎಫ್ 2 ಟೀಸರ್ ಇದೆ. ಇದೊಂದೇ ದೃಷ್ಟಾಂತ ಸಾಕಲ್ಲವೇ ಈ ಚಿತ್ರದ ನಿರೀಕ್ಷೆಯನ್ನು ಗುರುತಿಸಲು!

ಆ ಟೀಸರ್ ಇಲ್ಲಿದೆ:

ಇದನ್ನೂ ನೋಡಿ: Roar of RRR: ಅಬ್ಬಬ್ಬಾ… ಆರ್​ಆರ್​ಆರ್​ ಮೇಕಿಂಗ್​ ಹೀಗಿದೆ, ಇನ್ನು ಸಿನಿಮಾ ಹೇಗಿರಬಹುದು?

ಇದನ್ನೂ ನೋಡಿ: Hombale Films and Rakshith Shetty: ಅಭಿಮಾನಿಗಳ ಕಾಯುವಿಕೆಗೆ ಕೊನೆ ಹಾಡೇ ಬಿಟ್ರು ರಕ್ಷಿತ್​ ಶೆಟ್ಟಿ, ಡೈರೆಕ್ಟರ್ ಕ್ಯಾಪ್​ ಹಾಕ್ಕೊಳ್ಳೋ ಟೈಮ್ ಬಂದೇ ಬಿಡ್ತು!

(If everything is alright then KGF 2 is roaring in theaters from today but fans still waiting for that magic  moment)

Click on your DTH Provider to Add TV9 Kannada