Hombale Films and Rakshith Shetty: ಅಭಿಮಾನಿಗಳ ಕಾಯುವಿಕೆಗೆ ಕೊನೆ ಹಾಡೇ ಬಿಟ್ರು ರಕ್ಷಿತ್​ ಶೆಟ್ಟಿ, ಡೈರೆಕ್ಟರ್ ಕ್ಯಾಪ್​ ಹಾಕ್ಕೊಳ್ಳೋ ಟೈಮ್ ಬಂದೇ ಬಿಡ್ತು!

ಹೊಂಬಾಳೆ ಫಿಲ್ಮ್ಸ್‘ ನಿರ್ಮಾಣ ಸಂಸ್ಥೆಯು ಜುಲೈ 11ಕ್ಕೆ ಸರ್ಪ್ರೈಸ್ ನೀಡುವುದಾಗಿ ಹೇಳಿತ್ತು. ಅದರಂತೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ.

Hombale Films and Rakshith Shetty: ಅಭಿಮಾನಿಗಳ ಕಾಯುವಿಕೆಗೆ ಕೊನೆ ಹಾಡೇ ಬಿಟ್ರು ರಕ್ಷಿತ್​ ಶೆಟ್ಟಿ, ಡೈರೆಕ್ಟರ್ ಕ್ಯಾಪ್​ ಹಾಕ್ಕೊಳ್ಳೋ ಟೈಮ್ ಬಂದೇ ಬಿಡ್ತು!
ಹೊಂಬಾಳೆ ಫಿಲ್ಮ್ಸ್ ಬಿಡುಗಡೆಗೊಳಿಸಿರುವ ರಕ್ಷಿತ್ ಶೆಟ್ಟಿ ನಿರ್ದೇಶನದ ರಿಚರ್ಡ್ ಆಂಟನಿ ಚಿತ್ರದ ಟೈಟಲ್ ಪೋಸ್ಟರ್
Follow us
TV9 Web
| Updated By: shivaprasad.hs

Updated on:Jul 11, 2021 | 1:37 PM

ಎಲ್ಲರ ನಿರೀಕ್ಷೆಯಂತೆ ಹೊಂಬಾಳೆ ಫಿಲ್ಮ್ಸ್ ಅಭಿಮಾನಿಗಳಿಗೆ ಭರ್ಜರಿ ನ್ಯೂಸ್ ನೀಡಿದೆ. ಅದೂ ಒಂದಲ್ಲಾ, ಎರಡಲ್ಲಾ… ಹತ್ತಾರು! ಹೌದು. ಹೊಂಬಾಳೆ ಫಿಲ್ಮ್ಸ್ ತನ್ನ ಹತ್ತನೇ ಚಿತ್ರದ ನಿರ್ಮಾಣದ ಟೀಸರ್ ಅನ್ನು ಬಿಡುಗಡೆಗೊಳಿಸಿದ್ದಲ್ಲದೇ ಹಲವು ಅಚ್ಚರಿಗಳನ್ನು ನೀಡಿದೆ. ಉಳಿದವರು ಕಂಡಂತೆ ಚಿತ್ರದ ನಂತರ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದ್ದಾರೆ. ಮತ್ತೊಂದು ಭರ್ಜರಿ ನ್ಯೂಸ್ ಏನೆಂದರೆ, ಇದು ಉಳಿದವರು ಕಂಡಂತೆ ಚಿತ್ರದ ಹಿಂದು, ಮುಂದಿನ ಕತೆಯನ್ನು ಒಳಗೊಂಡಿದೆ. ಚಿತ್ರಕ್ಕೆ ರಿಚರ್ಡ್ ಆಂಟನಿ: ಲಾರ್ಡ್ ಆಫ್ ದಿ ಸೀ (Richard Antony: Lord Of the Sea) ಎಂದು ಹೆಸರಿಡಲಾಗಿದೆ.

ಟೀಸರ್​ನಲ್ಲಿ ಏನಿದೆ?

‘ಕೆಲವು ಕಂಡಿದ್ದು, ಕೆಲವು ಕಾಣದ್ದು, ಉಳಿದವು ಅಂತೆ ಕಂತೆಗಳು ಮತ್ತು ಇತರ ಸುಳ್ಳುಗಳು’ ಎಂದು ಟೀಸರ್​ನಲ್ಲಿ ಹೇಳಲಾಗಿದೆ. ಜೊತೆಗೆ ರಿಚ್ಚಿಯ ಜನ್ಮ ದಿನಾಂಕ ಮತ್ತು ಮರಣ ದಿನಾಂಕವನ್ನೂ ತಿಳಿಸಲಾಗಿದೆ. ಅಲ್ಲಿಗೆ ಚಿತ್ರವು ರಿಚ್ಚಿಯ ಜೀವನದ ಮತ್ತೊಂದು ಮಗ್ಗುಲನ್ನು ತೆರೆದಿಡಲಿದೆಯೇ ಎಂಬ ಕುತೂಹಲವನ್ನು ಹುಟ್ಟಿಸಿದೆ. ಅಚ್ಯುತ್ ಕುಮಾರ್ ನಿರೂಪಿಸಿರುವ ಈ ಟೀಸರ್ ಅನ್ನು ನೋಡಿ ಏನೇನಿರಬಹುದು ಎಂದು ಊಹಿಸಿ.

ಚಿತ್ರತಂಡದಲ್ಲಿ ಯಾರ್ಯಾರಿದ್ದಾರೆ?

ರಕ್ಷಿತ್ ಶೆಟ್ಟಿ ಕತೆ ಮತ್ತು ನಿರ್ದೇಶನದ ಜವಾಬ್ದಾರಿಯ ಜೊತೆಗೆ ಮುಖ್ಯಪಾತ್ರವನ್ನೂ ನಿಭಾಯಿಸಲಿದ್ಧಾರೆ. ವಿಜಯ್ ಕಿರಗಂದೂರು ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಬಿ.ಅಜನೀಶ್ ಲೋಕನಾಥ್ ಸಂಗೀತ ಹಾಗೂ ಕರಮ್ ಚಾವ್ಲಾ ಛಾಯಾಗ್ರಹಣ ಚಿತ್ರಕ್ಕಿರಲಿದೆ.

ಚಿತ್ರತಂಡ ಬಿಡುಗಡೆಗೊಳಿಸಿರುವ ಪೋಸ್ಟರ್:

ಹಳೆಯ ಪೋಸ್ಟರ್​ನಲ್ಲಿ ಏನಿತ್ತು?

ಜುಲೈ8ಕ್ಕೆ ಹಂಚಿಕೊಂಡ ಪೋಸ್ಟರ್​ನಲ್ಲಿ ದಡಕ್ಕೆ ಬಡಿಯುತ್ತಿರುವ ಸಮುದ್ರದ ಅಲೆಗಳು, ಕೆಂಪಾದ ಬಂಡೆ ಹಾಗೂ ಮರಳಿನ ಮೇಲೆ ನಡೆದು ಹೋದ ಒಬ್ಬ ಮನುಷ್ಯನ ರಕ್ತಸಿಕ್ತ ಹೆಜ್ಜೆ ಗುರುತುಗಳನ್ನು ತೋರಿಸಲಾಗಿತ್ತು. ಹಾಗೆಯೇ ‘(ಸಮುದ್ರದ) ಉಬ್ಬರವಿಳಿತವು ದೇಹವನ್ನು ಮರಳಿ ಹೊತ್ತು ತಂದಾಗ, ಇಡಿಯ ತೀರವೇ ರಕ್ತಮಯವಾಗುತ್ತದೆ’ ಎಂಬರ್ಥದಲ್ಲಿ ‘When tgetide brings back the DEAD, the shores bleed RED’ ಎಂದು ಚಿತ್ರಕ್ಕೆ ಅಡಿಬರಹವನ್ನು ನೀಡಲಾಗಿತ್ತು. ಇದರಿಂದಾಗಿ ಕತೆಯು ಸಮುದ್ರದಲ್ಲಿ ನಡೆಯಲಿದೆಯೇ ಎಂಬ ಕುತೂಹಲವನ್ನೂ ಚಿತ್ರದ ಪೋಸ್ಟರ್ ಹಾಗೂ ಚಿತ್ರದ ಅಡಿ ಬರಹವು ಮೂಡಿಸಿತ್ತು. ಹಾಗೆಯೇ ಈ ಚಿತ್ರವು ಪ್ಯಾನ್ ಇಂಡಿಯಾ ಚಿತ್ರವೇ ಎಂಬ ಚರ್ಚೆಯೂ ಆರಂಭವಾಗಿತ್ತು. ಆ ನಿರೀಕ್ಷೆಗಳೆಲ್ಲವೂ ಇದೀಗ ನಿಜವಾಗಿದೆ.

ಹೊಂಬಾಳೆ ಫಿಲ್ಮ್ಸ್ ಈ ಮೊದಲು ಹಂಚಿಕೊಂಡಿದ್ದ ಪೋಸ್ಟರ್:

ಇದನ್ನೂ ಓದಿ: Kannada Movies: ಯೂಟ್ಯೂಬ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದಾದ ಕನ್ನಡದ ಅತ್ಯುತ್ತಮ ಸಿನಿಮಾಗಳ ಪಟ್ಟಿ ಬೇಕೆ?

ಇದನ್ನೂ ಓದಿ: Vikram First Look: ವಿಕ್ರಮ್​ ಪೋಸ್ಟರ್​ನಲ್ಲಿ ಮೂರು ಸ್ಟಾರ್​ಗಳ ಸಮಾಗಮ; ಭಯ ಹುಟ್ಟಿಸುತ್ತಿದೆ ಹೊಸ ಪೋಸ್ಟರ್​

(Hombale Films launches it’s 10th production name called Richard Antony written and directed by Rakshith Shetty)

Published On - 1:21 pm, Sun, 11 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ