Vikram First Look: ವಿಕ್ರಮ್​ ಪೋಸ್ಟರ್​ನಲ್ಲಿ ಮೂರು ಸ್ಟಾರ್​ಗಳ ಸಮಾಗಮ; ಭಯ ಹುಟ್ಟಿಸುತ್ತಿದೆ ಹೊಸ ಪೋಸ್ಟರ್​

Kamal Haasan: ವಿಕ್ರಮ್​ ಸಿನಿಮಾದಲ್ಲಿ ತಮಿಳಿನ ವಿಜಯ್​ ಸೇತುಪತಿ, ಮಲಯಾಳಂ ಖ್ಯಾತ ನಟ ಫಹಾದ್​ ಫಾಸಿಲ್​ ನಟಿಸುತ್ತಿದ್ದಾರೆ. ಈಗ ರಿಲೀಸ್​ ಆಗಿರೋ ಪೋಸ್ಟರ್​ನಲ್ಲಿ ಮೂವರ ದರ್ಶನ ಒಟ್ಟಿಗೆ ಆಗಿದೆ.

Vikram First Look: ವಿಕ್ರಮ್​ ಪೋಸ್ಟರ್​ನಲ್ಲಿ ಮೂರು ಸ್ಟಾರ್​ಗಳ ಸಮಾಗಮ; ಭಯ ಹುಟ್ಟಿಸುತ್ತಿದೆ ಹೊಸ ಪೋಸ್ಟರ್​
ವಿಕ್ರಮ್​ ಪೋಸ್ಟರ್​ನಲ್ಲಿ ಮೂರು ಸ್ಟಾರ್​ಗಳ ಸಮಾಗಮ; ಭಯ ಹುಟ್ಟಿಸುತ್ತಿದೆ ಹೊಸ ಪೋಸ್ಟರ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 10, 2021 | 7:14 PM

ಬಹುಭಾಷಾ ನಟ ಕಮಲ್​ ಹಾಸನ್​ ಯಾವುದೇ ಸಿನಿಮಾ ಘೋಷಣೆ ಮಾಡಿದರೂ ಅಲ್ಲೊಂದು ಕುತೂಹಲ ಇದ್ದೇ ಇರುತ್ತದೆ. ಅವರ ನಟನೆಯ ವಿಕ್ರಮ್ ಸಿನಿಮಾ ಟೈಟಲ್​ ಟೀಸರ್​ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಈಗ ರಿಲೀಸ್​ ಆಗಿರುವ ಚಿತ್ರದ ಹೊಸ ಟೀಸರ್ ಈ ಕುತೂಹಲವನ್ನು ದುಪಟ್ಟು ಮಾಡಿದೆ. ಇದನ್ನು ನೋಡಿದ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ವಿಕ್ರಮ್​ ಸಿನಿಮಾದಲ್ಲಿ ತಮಿಳಿನ ವಿಜಯ್​ ಸೇತುಪತಿ, ಮಲಯಾಳಂ ಖ್ಯಾತ ನಟ ಫಹಾದ್​ ಫಾಸಿಲ್​ ನಟಿಸುತ್ತಿದ್ದಾರೆ. ಈಗ ರಿಲೀಸ್​ ಆಗಿರೋ ಪೋಸ್ಟರ್​ನಲ್ಲಿ ಮೂವರ ದರ್ಶನ ಒಟ್ಟಿಗೆ ಆಗಿದೆ. ಬ್ಲ್ಯಾಕ್​ ಆ್ಯಂಡ್​ ವೈಟ್​ನಲ್ಲಿ ಪೋಸ್ಟರ್​ ಮೂಡಿ ಬಂದಿದೆ. ಇದನ್ನು ನೋಡಿದ ಸಿನಿಪ್ರಿಯರು ಸಾಕಷ್ಟು ಖುಷಿಯಾಗಿದ್ದಾರೆ.

ವಿಕ್ರಮ್​ ಸಿನಿಮಾದಲ್ಲಿ ವಿಜಯ್​ ಸೇತುಪತಿ ವಿಲನ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಫಹಾದ್​ ಭ್ರಷ್ಟ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೂಲಗಳ ಪ್ರಕಾರ, ಸಾಕ್ಷಿ ಹೇಳಲು ಹೊರಟಿರುವ ವ್ಯಕ್ತಿಯನ್ನು ಸಾಯಿಸಲು ರೌಡಿಗೆ (ವಿಜಯ್​ ಸೇತುಪತಿ) ಈ ಪೊಲೀಸ್​ ಅಧಿಕಾರಿ ಸಹಕಾರ ನೀಡುತ್ತಾನೆ. ಈ ಸಾಕ್ಷ್ಯವನ್ನು ಹೀರೋ (ಕಮಲ್​ ಹಾಸನ್​) ಕಾಪಾಡುತ್ತಿರುತ್ತಾನೆ. ಇದು ಸಿನಿಮಾದ ಒಂದೆಳೆ.

ತಮಿಳಿನಲ್ಲಿ ಸಿದ್ಧಗೊಳ್ಳುತ್ತಿರುವ ಈ ಸಿನಿಮಾದ ಮೇಲೆ ಹೆಚ್ಚು ನಿರೀಕ್ಷೆ ಇದೆ. ಜಲ್ಲಿಕಟ್ಟು ಸಿನಿಮಾದಲ್ಲಿ ಕ್ಯಾಮೆರಾ ಕೈಚಳಕ ತೋರಿದ್ದ ಗಿರೀಶ್​ ಗಂಗಾಧರನ್​ ಈ ಸಿನಿಮಾಗೆ ಛಾಯಾಗ್ರಹಣ ಮಾಡಲಿದ್ದಾರೆ ಎನ್ನಲಾಗಿದೆ. ಹೀಗಾಗಿ, ಸಿನಿಮಾದ ಫ್ರೇಮ್​ ಮತ್ತಷ್ಟು ಅದ್ಭುತವಾಗಿ ಮೂಡಿಬರುವ ನಿರೀಕ್ಷೆ ಇದೆ. ಅನಿರುದ್ಧ್​ ರವಿಚಂದರ್​​​ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ದಳಪತಿ ವಿಜಯ್​ ನಟನೆಯ ಮಾಸ್ಟರ್​ ಸಿನಿಮಾ ನಿರ್ದೇಶನ ಮಾಡಿದ್ದ ಲೋಕೇಶ್​ ಕನಗರಾಜ್​ ಈ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ.

ಇದನ್ನೂ ಓದಿ: ಪ್ರಜಾಕೀಯದ ಹೈಕಮಾಂಡ್​ ಯಾರು ಎಂಬುದನ್ನು ಬಹಿರಂಗಪಡಿಸಿದ ಉಪೇಂದ್ರ

Published On - 7:12 pm, Sat, 10 July 21

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್