AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Roar of RRR: ಅಬ್ಬಬ್ಬಾ… ಆರ್​ಆರ್​ಆರ್​ ಮೇಕಿಂಗ್​ ಹೀಗಿದೆ, ಇನ್ನು ಸಿನಿಮಾ ಹೇಗಿರಬಹುದು?

RRR Making Video: ತೆರೆ ಹಿಂದೆ ಆರ್​ಆರ್​ಆರ್​ ತಂಡ ಎಷ್ಟು ಕಷ್ಟಪಟ್ಟಿದೆ ಎಂಬುದನ್ನು ಈ ಮೇಕಿಂಗ್​ ವಿಡಿಯೋ ಮೂಲಕ ನೋಡಬಹುದಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.

Roar of RRR: ಅಬ್ಬಬ್ಬಾ... ಆರ್​ಆರ್​ಆರ್​ ಮೇಕಿಂಗ್​ ಹೀಗಿದೆ, ಇನ್ನು ಸಿನಿಮಾ ಹೇಗಿರಬಹುದು?
ಆರ್​ಆರ್​ಆರ್​ ಚಿತ್ರದ ಮೇಕಿಂಗ್​ ವಿಡಿಯೋ ಬಿಡುಗಡೆ
TV9 Web
| Edited By: |

Updated on:Jul 15, 2021 | 1:12 PM

Share

ರಾಮ್​ ಚರಣ್​ ಮತ್ತು ಜ್ಯೂ. ಎನ್​ಟಿಆರ್​ ನಟನೆಯ ‘ಆರ್​ಆರ್​ಆರ್​’ ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಲಾಕ್​ಡೌನ್​ ಮುಗಿದ ಬಳಿಕ ಚಿತ್ರದ ಶೂಟಿಂಗ್​ಗೆ ಚುರುಕು ಮುಟ್ಟಿಸಲಾಗಿದೆ. ರಾಜಮೌಳಿ (Rajamouli) ಸಾರಥ್ಯದಲ್ಲಿ ಆರ್​ಆರ್​ಆರ್​ (RRR) ಮೂಡಿಬರುತ್ತಿದ್ದು, ಈಗ ಅದರ ಮೇಕಿಂಗ್​ ವಿಡಿಯೋ ಬಿಡುಗಡೆ ಮಾಡಲಾಗಿದೆ. ಜು.15ರಂದು ಬೆಳಗ್ಗೆ 11 ಗಂಟೆಗೆ ಬಿಡುಗಡೆ ಆಗಿರುವ ಈ ವಿಡಿಯೋ (Roar of RRR) ಕಂಡು ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದರಿಂದ ಸಿನಿಮಾ ಮೇಲಿರುವ ನಿರೀಕ್ಷೆ ದುಪ್ಪಟ್ಟಾಗಿದೆ.

ರಾಜಮೌಳಿ ನಿರ್ದೇಶನದ ಸಿನಿಮಾ ಎಂದರೆ ಅದ್ದೂರಿತನಕ್ಕೆ ಹೆಸರುವಾಸಿ ಆಗಿರುತ್ತವೆ. ಬೃಹತ್​ ಸೆಟ್​ಗಳು​, ದೊಡ್ಡ ತಾರಾಗಣ, ಬಹುಕೋಟಿ ರೂ. ಬಜೆಟ್​ನಲ್ಲಿ ಸಿನಿಮಾ ತಯಾರಾಗುತ್ತದೆ. ಹಾಗಾಗಿ ತೆರೆಹಿಂದಿನ ವಿಷಯಗಳನ್ನು ತಿಳಿದುಕೊಳ್ಳಲು ಸಿನಿಪ್ರಿಯರು ಸದಾ ಆಸಕ್ತಿ ತೋರುತ್ತಾರೆ. ಅಂಥವರ ಮನ ತಣಿಸಲು ಈ ಮೇಕಿಂಗ್​ ವಿಡಿಯೋ ಬಿಡುಗಡೆ ಮಾಡಲಾಗಿದೆ.

ಐತಿಹಾಸಿಕ ಕಥಾಹಂದರ ಇರುವ ಈ ಚಿತ್ರ ದೊಡ್ಡ ಕ್ಯಾನ್ವಾಸ್​ನಲ್ಲಿ ಮೂಡಿಬರುತ್ತಿದೆ. ‘ಬಾಹುಬಲಿ’ ರೀತಿಯ ದೈತ್ಯ ಸಿನಿಮಾವನ್ನು ಕಟ್ಟಿಕೊಟ್ಟ ತಂಡವೇ ‘ಆರ್​ಆರ್​ಆರ್​’ ಚಿತ್ರಕ್ಕಾಗಿ ಶ್ರಮಿಸುತ್ತಿದೆ. ಭರ್ಜರಿ ಆ್ಯಕ್ಷನ್​ ಸನ್ನಿವೇಶಗಳು ಈ ಸಿನಿಮಾದಲ್ಲಿ ಹೈಲೈಟ್​ ಆಗಲಿದೆ. ವಿದೇಶಿ ಕಲಾವಿದರು ಕೂಡ ಬಣ್ಣ ಹಚ್ಚಿದ್ದಾರೆ. ಈ ಎಲ್ಲ ಅಂಶಗಳ ಝಲಕ್​ ತೋರಿಸಲು ಮೇಕಿಂಗ್​ ವಿಡಿಯೋ ಹೊರಬಂದಿದೆ. ತೆರೆ ಹಿಂದೆ ಇಡೀ ತಂಡ ಎಷ್ಟು ಕಷ್ಟಪಟ್ಟಿದೆ ಎಂಬುದನ್ನು ಈ ಮೇಕಿಂಗ್​ ವಿಡಿಯೋ ಮೂಲಕ ನೋಡಬಹುದಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.

ಕೊಮರಾಮ್​ ಭೀಮ್​ ಪಾತ್ರಕ್ಕೆ ಜ್ಯೂ. ಎನ್​ಟಿಆರ್​ ಬಣ್ಣ ಹಚ್ಚಿದ್ದಾರೆ. ಅಲ್ಲುರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್​ ಚರಣ್​ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಆಲಿಯಾ ಭಟ್​ ಅಭಿನಯಿಸುತ್ತಿದ್ದು, ಇದು ದಕ್ಷಿಣ ಭಾರತದಲ್ಲಿ ಅವರಿಗೆ ಮೊದಲ ಸಿನಿಮಾ. ಅಜಯ್​ ದೇವಗನ್​ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅ.13ರಂದು ಆರ್​ಆರ್​ಆರ್​ ರಿಲೀಸ್​ ಮಾಡಲು ಉದ್ದೇಶಿಸಲಾಗಿದೆ. ಅಂದುಕೊಂಡ ದಿನಾಂಕದಲ್ಲೇ ಸಿನಿಮಾವನ್ನು ತೆರೆಕಾಣಿಸಬೇಕು ಎಂದು ಇಡೀ ತಂಡ ಶ್ರಮವಹಿಸುತ್ತಿದೆ.

ಇದನ್ನೂ ಓದಿ:

ರಾಮ್​ ಚರಣ್​ Vs ಜ್ಯೂ. ಎನ್​ಟಿಆರ್​; ಫ್ಯಾನ್ಸ್ ತಕರಾರು ಬಗೆಹರಿಸಲು ರಾಜಮೌಳಿ ಮಾಡಿದ ಪ್ಲ್ಯಾನ್​ ಏನು?

ಆರ್​ಆರ್​ಆರ್​ ಚಿತ್ರದ ಒಂದು ಹಾಡಿನ ಶೂಟ್​ಗೆ 30 ದಿನ; ಹುಬ್ಬೇರಿಸಿದ ಸಿನಿಪ್ರಿಯರು

Published On - 12:49 pm, Thu, 15 July 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್