ಸಂಜೆ 5 ಘಂಟೆಗೆ ಇಂದ್ರಜಿತ್ ಲಂಕೇಶ್​ ಮತ್ತೊಂದು ಸುದ್ದಿಗೋಷ್ಠಿ; ಈ ಮಧ್ಯೆ ದರ್ಶನ್ ಪ್ರತಿಕ್ರಿಯೆ ಸಾಧ್ಯತೆ

Indrajit Lankesh: ಇಂದು ಸಂಜೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿಯನ್ನು ನಡೆಸುವುದಾಗಿ ತಿಳಿಸಿದ್ದಾರೆ. ಇದರ ನಡುವೆ ನಟ ದರ್ಶನ್ ಮೈಸೂರಿನ ಘಟನೆಯ ಕುರಿತು ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.

ಸಂಜೆ 5 ಘಂಟೆಗೆ ಇಂದ್ರಜಿತ್ ಲಂಕೇಶ್​ ಮತ್ತೊಂದು ಸುದ್ದಿಗೋಷ್ಠಿ; ಈ ಮಧ್ಯೆ ದರ್ಶನ್ ಪ್ರತಿಕ್ರಿಯೆ ಸಾಧ್ಯತೆ
ಇಂದ್ರಜಿತ್ ಲಂಕೇಶ್
Follow us
TV9 Web
| Updated By: shivaprasad.hs

Updated on:Jul 16, 2021 | 11:54 AM

ಬೆಂಗಳೂರು: ಸಂದೇಶ್ ಪ್ರಿನ್ಸ್ ಹೋಟೆಲ್​ನ ಮಾಲೀಕನ ಪುತ್ರ ಮಾಧ್ಯಮಕ್ಕೆ ಸ್ಪಷ್ಟನೆ ಕೊಟ್ಟ ಬೆನ್ನಲ್ಲೇ ಇಂದ್ರಜಿತ್ ಲಂಕೇಶ್ ಇಂದು ಸಂಜೆ ಸುದ್ದಿಗೋಷ್ಠಿ ನಡೆಸುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ಮೈಸೂರಿನ ಹೋಟೆಲ್ ಒಂದರಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನೇಕ ಮಾಹಿತಿ ಸ್ಫೋಟವಾಗುವ ಸಾಧ್ಯತೆ ಇದೆ. ಈ ಮೊದಲು ಹೇಳಿಕೆ ನೀಡಿದ್ದ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಮಾಲೀಕರ ಪುತ್ರ , ದರ್ಶನ್ ಅವರು ಬೈದಿರುವುದು ನಿಜ. ಆದರೆ ಅದೇನು ದೊಡ್ಡ ವಿಷಯವಲ್ಲ ಎಂದಿದ್ದರು. ಹಾಗೆಯೇ ಹೋಟೆಲ್​ನ ಸಿಸಿಟಿವಿಯ ದೃಶ್ಯಾವಳಿಗಳು ಹತ್ತು ದಿನಗಳ ನಂತರ ಸಿಗುವುದಿಲ್ಲ ಎಂದಿದ್ದರು. 

ಈ ಮೊದಲು ಮಾತನಾಡಿದ್ದ ಇಂದ್ರಜಿತ್ ಲಂಕೇಶ್, ಪೊಲಿಸ್ ತನಿಖೆ ನಡೆಯಲಿ. ಅವರಿಗೆ ಸಾಕ್ಷ್ಯ ಲಭ್ಯವವಾಗದಿದ್ದಲ್ಲಿ ನಮ್ಮ ಬಳಿ ಇರುವ ಸಾಕ್ಷ್ಯ ನೀಡುತ್ತೇವೆ ಎಂದಿದ್ದರು. ಈಗ ಇಂದ್ರಜಿತ್ ಅವರು ಇಂದು ಸಂಜೆಯೇ ಪತ್ರಿಕಾಗೋಷ್ಠಿ ಕರೆದಿರುವುದರಿಂದ ದಾಖಲೆ ಬಿಡುಗಡೆ ಮಾಡುತ್ತಾರಾ ಎಂಬ ಕುತೂಹಲ ಮೂಡಿದೆ.

ಈ ನಡುವೆ ದರ್ಶನ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಹೇಳಿಕೆಗೆ ನಟ ದರ್ಶನ್ ಪ್ರತಿಕ್ರಿಯೆ ನೀಡುವ ಸಾಧ್ಯತೆ ಇದೆ. ಇಂದ್ರಜಿತ್ ಲಂಕೇಶ್ ಹಾಗೂ ಸಂದೇಶ್ ಹೋಟೆಲ್ ಮಾಲೀಕರ ಹೇಳಿಕೆಗೂ ಅಜಗಜಾಂತರ ವ್ಯತ್ಯಾಸ ಇರುವುದರಿಂದ ದರ್ಶನ್ ಹೇಳಿಕೆ ಕುತೂಹಲ ಕೆರಳಿಸಿದೆ. ಒಂದು ವೇಳೆ ಸಿಸಿಟಿವಿಯ ದೃಶ್ಯಾವಳಿ ಬಹಿರಂಗಗೊಂಡರೆ ಅಧಿಕೃತ ಮಾಹಿತಿ ದೊರೆಯುವ ಸಾಧ್ಯತೆ ಇದೆ.

ಸಂದೇಶ್ ದಿ ಪ್ರಿನ್ಸ್​ ಹೋಟೆಲ್ ಮಾಲಿಕರ ಪುತ್ರ ಹೇಳಿದ್ದೇನು?

ಹೋಟೆಲ್ ಸಿಬ್ಬಂದಿಗೆ ಬೈದಿರುವುದು ನಿಜ. ಆದರೆ ಹಲ್ಲೆ ನಡೆಸಿಲ್ಲ ಎಂದು ಸಂದೇಶ್ ತಿಳಿಸಿದ್ದಾರೆ. ಸದ್ಯ ಹೋಟೆಲ್​ಗಳೆಲ್ಲ ಮುಚ್ಚಿ ನಾವೇ ಸಂಕಷ್ಟದಲ್ಲಿದ್ದೇವೆ. ಹೋಟೆಲ್ ನಮ್ಮ ಹೊಟ್ಟೆಪಾಡು. ಇಲ್ಲಿ ಗ್ರಾಹಕರು ಏನೇ ಹೇಳಿದ್ರೂ ನಾವು ಕೊಡಬೇಕಾಗುತ್ತೆ. ಅವರು ಏನೇ ಬೈದರೂ ನಾವು ಬೈಸಿಕೊಳ್ಳಬೇಕಾಗುತ್ತದೆ. ದರ್ಶನ್ ನಮ್ಮ ಸಿಬ್ಬಂದಿ ಮೇಲೆ ಸ್ವಲ್ಪ ಬೈದಿದ್ದಾರೆ, ಆದರೆ ಹೊಡೆದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ನಮ್ಮ ಹೋಟೆಲ್ನಲ್ಲಿ ಇರುವುದೇ ತರಬೇತುದಾರರು. ಚೆನ್ನೈ, ಬಿಹಾರ, ಪಶ್ಚಿಮ ಬಂಗಾಳದಿಂದ ಬಂದವರಿದ್ದಾರೆ. ನಮ್ಮ ಹೋಟೆಲ್ನಲ್ಲಿ 10 ದಿನಗಳ ಫೂಟೇಜ್ ಇರುತ್ತದೆ. ಆಮೇಲೆ ಸಿಸಿ ಕ್ಯಾಮರಾದ ದೃಶ್ಯಗಳು ಡಿಲೀಟ್ ಆಗುತ್ತದೆ. ನಮಗೆ ಹೋಟೆಲ್ ಗ್ರಾಹಕರು, ಸಿಬ್ಬಂದಿ ಇಬ್ಬರೂ ಬೇಕು. ಅಂದಿನ ಘಟನೆಯಿಂದ ನಮಗೂ ಸ್ವಲ್ಪ ಸಮಸ್ಯೆಯಾಗಿದೆ ಎಂದು ಸಂದೇಶ್ ಹೇಳಿದ್ದಾರೆ.

ಇದನ್ನೂ ಓದಿ: ಇಂದ್ರಜಿತ್ ಲಂಕೇಶ್ ಮನವಿಗೆ ಸ್ಪಂದಿಸಿದ ಗೃಹ ಸಚಿವ ಬೊಮ್ಮಾಯಿ; ತನಿಖೆಗೆ ಸೂಚನೆ

ಇದನ್ನೂ ಓದಿ: ದರ್ಶನ್ ಹೋಟೆಲ್ ಸಿಬ್ಬಂದಿಗೆ ಬೈದಿರುವುದು ನಿಜ, ಹಲ್ಲೆ ನಡೆಸಿಲ್ಲ; ಸಂದೇಶ್ ಮಾಹಿತಿ

(Indrajit Lankesh will conduct press meet today evening meanwhile actor Darshan may give his statement)

Published On - 12:22 pm, Thu, 15 July 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್