AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಹೋಟೆಲ್ ಸಿಬ್ಬಂದಿಗೆ ಬೈದಿರುವುದು ನಿಜ, ಹಲ್ಲೆ ನಡೆಸಿಲ್ಲ; ಸಂದೇಶ್ ಮಾಹಿತಿ

ಬೈಯುವಾಗ ನಾನು ನಮ್ಮ ಸಿಬ್ಬಂದಿಗೆ ಬಯ್ಯಬೇಡ ಎಂದು ಹೇಳಿದ್ದೆ. ಸಂದೇಶ್ ಪ್ರಿನ್ಸ್ ಹೋಟೆಲ್ ನಡೆಸುತ್ತಿರುವುದು ನಾನು. ನಮ್ಮ ತಂದೆಗೆ ಇದರ ಬಗ್ಗೆ ಏನೂ ಗೊತ್ತಿಲ್ಲ. ದಯವಿಟ್ಟು ಇದನ್ನು ಇಲ್ಲಿಗೇ ಬಿಟ್ಟುಬಿಡಿ. ನಿನ್ನೆ, ಮೊನ್ನೆಯ ಘಟನೆಯ ಬಗ್ಗೆ ನನಗೆ ಏನೂ ಗೊತ್ತಿಲ್ಲ.

ದರ್ಶನ್ ಹೋಟೆಲ್ ಸಿಬ್ಬಂದಿಗೆ ಬೈದಿರುವುದು ನಿಜ, ಹಲ್ಲೆ ನಡೆಸಿಲ್ಲ; ಸಂದೇಶ್ ಮಾಹಿತಿ
ದರ್ಶನ್​
TV9 Web
| Edited By: |

Updated on: Jul 15, 2021 | 11:52 AM

Share

ಮೈಸೂರು: ಹೋಟೆಲ್ ಸಿಬ್ಬಂದಿಗೆ ಬೈದಿರುವುದು ನಿಜ. ಆದರೆ ಹಲ್ಲೆ ನಡೆಸಿಲ್ಲ ಎಂದು ಸಂದೇಶ್ ತಿಳಿಸಿದ್ದಾರೆ. ಸದ್ಯ ಹೋಟೆಲ್​ಗಳೆಲ್ಲ ಮುಚ್ಚಿ ನಾವೇ ಸಂಕಷ್ಟದಲ್ಲಿದ್ದೇವೆ. ಹೋಟೆಲ್ ನಮ್ಮ ಹೊಟ್ಟೆಪಾಡು. ಇಲ್ಲಿ ಗ್ರಾಹಕರು ಏನೇ ಹೇಳಿದ್ರೂ ನಾವು ಕೊಡಬೇಕಾಗುತ್ತೆ. ಅವರು ಏನೇ ಬೈದರೂ ನಾವು ಬೈಸಿಕೊಳ್ಳಬೇಕಾಗುತ್ತದೆ. ದರ್ಶನ್ ನಮ್ಮ ಸಿಬ್ಬಂದಿ ಮೇಲೆ ಸ್ವಲ್ಪ ಬೈದಿದ್ದಾರೆ, ಆದರೆ ಹೊಡೆದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಬೈಯುವಾಗ ನಾನು ನಮ್ಮ ಸಿಬ್ಬಂದಿಗೆ ಬಯ್ಯಬೇಡ ಎಂದು ಹೇಳಿದ್ದೆ. ಸಂದೇಶ್ ಪ್ರಿನ್ಸ್ ಹೋಟೆಲ್ ನಡೆಸುತ್ತಿರುವುದು ನಾನು. ನಮ್ಮ ತಂದೆಗೆ ಇದರ ಬಗ್ಗೆ ಏನೂ ಗೊತ್ತಿಲ್ಲ. ದಯವಿಟ್ಟು ಇದನ್ನು ಇಲ್ಲಿಗೇ ಬಿಟ್ಟುಬಿಡಿ. ನಿನ್ನೆ, ಮೊನ್ನೆಯ ಘಟನೆಯ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅವರು ಪಬ್ಲಿಸಿಟಿಗೋಸ್ಕರ ಏನೇನೋ ಮಾಡುತ್ತಿದ್ದಾರೆ ಎಂದು ಮೈಸೂರಿನಲ್ಲಿ ಸಂದೇಶ್ ಅಭಿಪ್ರಾಯಪಟ್ಟಿದ್ದಾರೆ.

ನನಗೆ ಅನ್ನ ಕೊಡುತ್ತಿರುವುದು ನನ್ನ ಕಾರ್ಮಿಕರು. ಅವರ ಮೇಲೆ ಹಲ್ಲೆ ನಡೆದರೆ ನಾನು ಸುಮ್ಮನಿರುತ್ತೇನಾ? ಎಂದು ಪ್ರಶ್ನಿಸಿದ ಸಂದೇಶ್ ನಾಗರಾಜ್ ಪುತ್ರ, ದರ್ಶನ್ ನಮ್ಮ ಕಾರ್ಮಿಕರಿಗೆ ಬೈದಿರುವುದು ನಿಜ. ಅದಕ್ಕೆ ನಾನೇ ನಮ್ಮ ಕಾರ್ಮಿಕರ ಬಳಿ ಕ್ಷಮೆ ಕೇಳಿದ್ದೇನೆ. ಇದು ಲಾಕ್ಡೌನ್ಗೂ ಮೊದಲೇ ನಡೆದಿರುವ ಘಟನೆ. ಹೋಟೆಲ್ಗಳಲ್ಲಿ ಈ ರೀತಿ ಸಣ್ಣ ಪುಟ್ಟದ್ದು ಆಗುತ್ತಿರುತ್ತದೆ. ದರ್ಶನ್ ಜತೆ ಯಾವಾಗಲೂ 15-20 ಜನ ಬರುತ್ತಾರೆ. ಗಲಾಟೆ ನಡೆದ ದಿನವೂ 15-20 ಜನರು ಇದ್ದರು. ಗ್ರಾಹಕರು ಕುಡಿದು ಬೈದರೆ ನಾವು ಬೈಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ನಮ್ಮ ಹೋಟೆಲ್ನಲ್ಲಿ ಇರುವುದೇ ತರಬೇತುದಾರರು. ಚೆನ್ನೈ, ಬಿಹಾರ, ಪಶ್ಚಿಮ ಬಂಗಾಳದಿಂದ ಬಂದವರಿದ್ದಾರೆ. ನಮ್ಮ ಹೋಟೆಲ್ನಲ್ಲಿ 10 ದಿನಗಳ ಫೂಟೇಜ್ ಇರುತ್ತದೆ. ಆಮೇಲೆ ಸಿಸಿ ಕ್ಯಾಮರಾದ ದೃಶ್ಯಗಳು ಡಿಲೀಟ್ ಆಗುತ್ತದೆ. ನಮಗೆ ಹೋಟೆಲ್ ಗ್ರಾಹಕರು, ಸಿಬ್ಬಂದಿ ಇಬ್ಬರೂ ಬೇಕು. ಅಂದಿನ ಘಟನೆಯಿಂದ ನಮಗೂ ಸ್ವಲ್ಪ ಸಮಸ್ಯೆಯಾಗಿದೆ ಎಂದು ಸಂದೇಶ್ ಹೇಳಿದ್ದಾರೆ.

ಇದನ್ನೂ ಓದಿ

ಇಂದ್ರಜಿತ್ ಲಂಕೇಶ್ ಮನವಿಗೆ ಸ್ಪಂದಿಸಿದ ಗೃಹ ಸಚಿವ ಬೊಮ್ಮಾಯಿ; ತನಿಖೆಗೆ ಸೂಚನೆ

Indrajit Lankesh Press Meet: ಮೈಸೂರು ಪೊಲೀಸ್ ಸ್ಟೇಷನ್​ಗಳು ಸೆಟಲ್ ಮೆಂಟ್ ಸ್ಟೇಷನ್​ಗಳಾಗಿವೆ; ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ

(Sandesh Nagaraj says Darshan abused hotel staff but not assaulted in Prince Hotel Mysore)

ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್