AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ್​ ಚರಣ್​ Vs ಜ್ಯೂ. ಎನ್​ಟಿಆರ್​; ಫ್ಯಾನ್ಸ್ ತಕರಾರು ಬಗೆಹರಿಸಲು ರಾಜಮೌಳಿ ಮಾಡಿದ ಪ್ಲ್ಯಾನ್​ ಏನು?

Jr NTR Ram Charan: ಮಲ್ಟಿಸ್ಟಾರರ್​ ಸಿನಿಮಾ ಮಾಡಿದಾಗ ಯಾವ ಹೀರೋಗೆ ಎಷ್ಟು ಸ್ಕ್ರೀನ್​ ಸ್ಪೇಸ್​ ಸಿಕ್ಕಿದೆ ಎಂಬ ಲೆಕ್ಕಾಚಾರ ಶುರುವಾಗುತ್ತದೆ. ಆರ್​ಆರ್​ಆರ್​ ವಿಚಾರದಲ್ಲೂ ಹಾಗೆಯೇ ಆಗುತ್ತಿದೆ. ರಾಮ್​ ಚರಣ್​ ಮತ್ತು ಜ್ಯೂ. ಎನ್​ಟಿಆರ್​ ಅಭಿಮಾನಿಗಳು ಇದೇ ವಿಚಾರವಾಗಿ ಜಿದ್ದಿಗೆ ಬಿದ್ದಿದ್ದಾರೆ.

ರಾಮ್​ ಚರಣ್​ Vs ಜ್ಯೂ. ಎನ್​ಟಿಆರ್​; ಫ್ಯಾನ್ಸ್ ತಕರಾರು ಬಗೆಹರಿಸಲು ರಾಜಮೌಳಿ ಮಾಡಿದ ಪ್ಲ್ಯಾನ್​ ಏನು?
ರಾಮ್​ ಚರಣ್​ Vs ಜ್ಯೂ. ಎನ್​ಟಿಆರ್​; ಫ್ಯಾನ್ಸ್ ತಕರಾರು ಬಗೆಹರಿಸಲು ರಾಜಮೌಳಿ ಮಾಡಿದ ಪ್ಲ್ಯಾನ್​ ಏನು?
TV9 Web
| Edited By: |

Updated on: Jul 14, 2021 | 5:39 PM

Share

ಬಹುನಿರೀಕ್ಷಿತ ಆರ್​ಆರ್​ಆರ್​ (RRR) ಸಿನಿಮಾ ಹಲವು ಕಾರಣಗಳಿಗಾಗಿ ಸದ್ದು ಮಾಡುತ್ತಿದೆ. ರಾಜಮೌಳಿ (Rajamouli) ನಿರ್ದೇಶನದ ಈ ಚಿತ್ರದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಅದ್ದೂರಿ ಬಜೆಟ್​ನಲ್ಲಿ ಸಿನಿಮಾ ಮೂಡಿಬರುತ್ತಿದೆ. ನಾಯಕರಾದ ರಾಮ್​ ಚರಣ್​ (Ram Charan) ಮತ್ತು ಜ್ಯೂ. ಎನ್​ಟಿಆರ್​ (Jr NTR) ಅಭಿಮಾನಿಗಳು ಈ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಅದರ ಜೊತೆಗೆ ನಿರ್ದೇಶಕ ರಾಜಮೌಳಿ ಅವರಿಗೆ ಒಂದು ತಲೆನೋವು ಕೂಡ ಶುರುವಾಗಿದೆ. ಅದು ಅಭಿಮಾನಿಗಳಿಂದ ಶುರುವಾಗಿರುವ ತಲೆನೋವು. ಅದನ್ನು ಪರಿಹರಿಸಿಕೊಳ್ಳುವತ್ತ ರಾಜಮೌಳಿ ಗಮನ ಹರಿಸಿದ್ದಾರೆ ಎನ್ನಲಾಗುತ್ತಿದೆ.

ಮಲ್ಟಿಸ್ಟಾರರ್​ ಸಿನಿಮಾ ಮಾಡಿದಾಗ ಯಾವ ಹೀರೋಗೆ ಎಷ್ಟು ಸ್ಕ್ರೀನ್​ ಸ್ಪೇಸ್​ ಸಿಕ್ಕಿದೆ ಎಂಬ ಲೆಕ್ಕಾಚಾರ ಶುರುವಾಗುತ್ತದೆ. ಆರ್​ಆರ್​ಆರ್​ ವಿಚಾರದಲ್ಲೂ ಹಾಗೆಯೇ ಆಗುತ್ತಿದೆ. ರಾಮ್​ ಚರಣ್​ ಮತ್ತು ಜ್ಯೂ. ಎನ್​ಟಿಆರ್​ ಅಭಿಮಾನಿಗಳು ಇದೇ ವಿಚಾರವಾಗಿ ಜಿದ್ದಿಗೆ ಬಿದ್ದಿದ್ದಾರೆ. ಇಬ್ಬರು ಸ್ಟಾರ್​ ನಟರ ಪೈಕಿ ಯಾರೊಬ್ಬರಿಗೆ ಹೆಚ್ಚು ಸ್ಕ್ರೀನ್​ ಸ್ಪೇಸ್​ ಸಿಕ್ಕರೂ ಇನ್ನೊಬ್ಬ ಸ್ಟಾರ್​ ನಟನ ಅಭಿಮಾನಿಗಳು ಸಿಡಿದೇಳುವುದು ಸಹಜ. ಅದನ್ನು ತಪ್ಪಿಸಲು ರಾಜಮೌಳಿ ಅವರು ಈಗಲೇ ಎಚ್ಚರಿಕೆ ವಹಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ರಾಮ್​ ಚರಣ್​ ಮತ್ತು ಜ್ಯೂ. ಎನ್​ಟಿಆರ್​ಗೆ ಆರ್​ಆರ್​ಆರ್​ ಸಿನಿಮಾದಲ್ಲಿ ಸರಿಸಮನಾಗಿ ಸ್ಕ್ರೀನ್​ ಸ್ಪೇಸ್​ ನೀಡಲು ರಾಜಮೌಳಿ ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆಯೇ ಚಿತ್ರಕಥೆ ಹೆಣೆದಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರದಲ್ಲಿ ಅವರು ಎಷ್ಟರಮಟ್ಟಿಗೆ ಸಫಲರಾಗಿದ್ದಾರೆ ಎಂಬುದು ಚಿತ್ರ ಬಿಡುಗಡೆ ಆದ ನಂತರವೇ ಗೊತ್ತಾಗಬೇಕಿದೆ. ಈಗಾಗಲೇ ಇಬ್ಬರೂ ನಟರ ಪೋಸ್ಟರ್​ಗಳು ಬಿಡುಗಡೆಯಾಗಿ ಭಾರಿ ಕೌತುಕ ಮೂಡಿಸಿವೆ.

ಆರ್​ಆರ್​ಆರ್​ ಬಳಗದಿಂದ ಗುರುವಾರ (ಜು.15) ಮೇಕಿಂಗ್​ ವಿಡಿಯೋ ಬಿಡುಗಡೆ ಆಗುತ್ತಿದೆ. ರಾಜಮೌಳಿ ನಿರ್ದೇಶನದ ಸಿನಿಮಾ ಎಂದರೆ ಅದ್ದೂರಿತನಕ್ಕೆ ಹೆಸರುವಾಸಿ ಆಗಿರುತ್ತವೆ. ಬೃಹತ್​ ಸೆಟ್​ಗಳು​, ದೊಡ್ಡ ತಾರಾಗಣ, ಬಹುಕೋಟಿ ರೂ. ಬಜೆಟ್​ನಲ್ಲಿ ಸಿನಿಮಾ ತಯಾರಾಗುತ್ತದೆ. ಹಾಗಾಗಿ ತೆರೆಹಿಂದಿನ ವಿಷಯಗಳನ್ನು ತಿಳಿದುಕೊಳ್ಳಲು ಸಿನಿಪ್ರಿಯರು ಸದಾ ಕುತೂಹಲಿಗಳಾಗಿರುತ್ತಾರೆ. ಅಂಥವರ ಮನತಣಿಸಲು ಮೇಕಿಂಗ್​ ವಿಡಿಯೋ ಬಿಡುಗಡೆ ಮಾಡಲಾಗುತ್ತಿದ್ದು, ಅದಕ್ಕೆ ‘ರೋರ್​ ಆಫ್​​ ಆರ್​ಆರ್​ಆರ್​’ ಎಂದು ಹೆಸರಿಡಲಾಗಿದೆ.

ಈ ಸಿನಿಮಾದಲ್ಲಿ ನಾಯಕಿಯಾಗಿ ಆಲಿಯಾ ಭಟ್​ ಅಭಿನಯಿಸುತ್ತಿದ್ದಾರೆ. ಮತ್ತೊಂದು ಮುಖ್ಯಭೂಮಿಕೆಯಲ್ಲಿ ಬಾಲಿವುಡ್​ ನಟ ಅಜಯ್​ ದೇವಗನ್​ ಕೂಡ ನಟಿಸುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಆರ್​ಆರ್​ಆರ್​ ಚಿತ್ರದ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರಬೇಕು ಎಂಬ ಉದ್ದೇಶದೊಂದಿಗೆ ಇಡೀ ತಂಡ ಕಾರ್ಯನಿರತವಾಗಿದೆ. ಲಾಕ್​ಡೌನ್​ನಿಂದಾಗಿ ಚಿತ್ರದ ಕೆಲಸಗಳು ವಿಳಂಬ ಆಗಿದ್ದವು. ಈಗ ಮತ್ತೆ ಬಿರುಸಿನಿಂದ ಶೂಟಿಂಗ್​ ಮಾಡಲಾಗುತ್ತಿದೆ.

ಇದನ್ನೂ ಓದಿ:

ರಾಜಮೌಳಿ ಸಹವಾಸ ಮಾಡಿದವರಿಗೆ ಸೋಲು ಖಚಿತ; ಟಾಲಿವುಡ್​ನಲ್ಲಿದೆ ದೊಡ್ಡ ಮೂಢನಂಬಿಕೆ

ಚಿಕ್ಕ ಹುಡುಗನಿಂದ RRR​ ಚಿತ್ರದ ದೊಡ್ಡ ಸೀಕ್ರೆಟ್​ ಬಯಲು; ಅಜಯ್​ ದೇವಗನ್​ ಪಾತ್ರದ ಗುಟ್ಟು ರಟ್ಟು

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್