AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕ ಹುಡುಗನಿಂದ RRR​ ಚಿತ್ರದ ದೊಡ್ಡ ಸೀಕ್ರೆಟ್​ ಬಯಲು; ಅಜಯ್​ ದೇವಗನ್​ ಪಾತ್ರದ ಗುಟ್ಟು ರಟ್ಟು

RRR movie: ಅಜಯ್​ ದೇವಗನ್​ ಮಾಡುತ್ತಿರುವ ಪಾತ್ರದ ಬಗ್ಗೆ ಹೆಚ್ಚು ಮಾಹಿತಿ ಬಹಿರಂಗ ಆಗಿರಲಿಲ್ಲ. ಆದರೆ ಈ ಸಿನಿಮಾದಲ್ಲಿ ನಟಿಸುತ್ತಿರುವ ಚಕ್ರಿ ಎಂಬ ಬಾಲನಟ ಒಂದು ಗುಟ್ಟನ್ನು ರಟ್ಟು ಮಾಡಿದ್ದಾನೆ.

ಚಿಕ್ಕ ಹುಡುಗನಿಂದ RRR​ ಚಿತ್ರದ ದೊಡ್ಡ ಸೀಕ್ರೆಟ್​ ಬಯಲು; ಅಜಯ್​ ದೇವಗನ್​ ಪಾತ್ರದ ಗುಟ್ಟು ರಟ್ಟು
ಆರ್​ಆರ್​ಆರ್​ ಸಿನಿಮಾದಲ್ಲಿ ಅಜಯ್​ ದೇವಗನ್​
ಮದನ್​ ಕುಮಾರ್​
|

Updated on: Jun 27, 2021 | 8:16 AM

Share

ರಾಜಮೌಳಿ ನಿರ್ದೇಶನ ಮಾಡುತ್ತಿರುವ ಆರ್​ಆರ್​ಆರ್​ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಚಿತ್ರದಿಂದ ಸಿಗುವ ಎಲ್ಲ ಅಪ್​ಡೇಟ್​ಗಳಿಗಾಗಿ ಸಿನಿಪ್ರಿಯರು ಕಾಯುತ್ತಿರುತ್ತಾರೆ. ಅದೇ ರೀತಿ, ಯಾವುದೇ ಕಾರಣಕ್ಕೂ ಕಥೆ ಲೀಕ್​ ಆಗಬಾರದು ಎಂದು ಚಿತ್ರತಂಡ ಕೂಡ ಅವಿರತ ಪ್ರಯತ್ನ ಮಾಡುತ್ತಿರುತ್ತದೆ. ಚಿತ್ರೀಕರಣದ ಸ್ಥಳದಲ್ಲಿ ಮೊಬೈಲ್​ ಬಳಕೆಯನ್ನು ನಿಷೇಧ ಮಾಡಲಾಗಿರುತ್ತದೆ. ಹಾಗಿದ್ದರೂ ಈ ಸಿನಿಮಾ ಬಗೆಗಿನ ಒಂದು ದೊಡ್ಡ ಸೀಕ್ರೆಟ್​ ಬಯಲಾಗಿದೆ. ಅದಕ್ಕೆ ಕಾರಣ ಒಬ್ಬ ಚಿಕ್ಕ ಬಾಲಕ!

ಆರ್​ಆರ್​ಆರ್​ ಸಿನಿಮಾದಲ್ಲಿ ಜ್ಯೂ. ಎನ್​ಟಿಆರ್​, ರಾಮ್​ ಚರಣ್​, ಅಜಯ್​ ದೇವಗನ್​, ಆಲಿಯಾ ಭಟ್​ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಕೊಮರಾಮ್​ ಭೀಮ್​ ಪಾತ್ರದಲ್ಲಿ ಜ್ಯೂ. ಎನ್​ಟಿಆರ್​ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲುರಿ ಸೀತಾರಾಮ ರಾಜು ಪಾತ್ರಕ್ಕೆ ರಾಮ್​ ಚರಣ್​ ಬಣ್ಣ ಹಚ್ಚುತ್ತಿದ್ದಾರೆ. ಆಲಿಯಾ ಭಟ್​ಗೆ ಸೀತಾ ಎಂಬ ಪಾತ್ರ ನೀಡಲಾಗಿದೆ. ಅಜಯ್​ ದೇವಗನ್​ ಮಾಡುತ್ತಿರುವ ಪಾತ್ರದ ಬಗ್ಗೆ ಹೆಚ್ಚು ಮಾಹಿತಿ ಬಹಿರಂಗ ಆಗಿರಲಿಲ್ಲ. ಆದರೆ ಈ ಸಿನಿಮಾದಲ್ಲಿ ನಟಿಸುತ್ತಿರುವ ಚಕ್ರಿ ಎಂಬ ಬಾಲನಟ ಒಂದು ಗುಟ್ಟನ್ನು ರಟ್ಟು ಮಾಡಿದ್ದಾನೆ.

ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ವೊಂದನ್ನು ಹಾಕುವಾಗ ಚಕ್ರಿ ಈ ಸೀಕ್ರೆಟ್​ ಬಯಲು ಮಾಡಿದ್ದಾನೆ. ಜ್ಯೂ. ಎನ್​ಟಿಆರ್​ ನಿಭಾಯಿಸುತ್ತಿರುವ ಕೊಮರಾಮ್​ ಭೀಮ್​ ಪಾತ್ರದ ಬಾಲ್ಯಾವಸ್ಥೆಯ ದೃಶ್ಯಗಳಲ್ಲಿ ಚಕ್ರಿ ನಟಿಸಿದ್ದಾನೆ. ಅವನ ತಂದೆಯಾಗಿ ಅಜಯ್​ ದೇವಗನ್​ ಕಾಣಿಸಿಕೊಂಡಿದ್ದಾರಂತೆ. ಅಂದರೆ, ಈ ಸಿನಿಮಾದಲ್ಲಿ ಜ್ಯೂ. ಎನ್​ಟಿಆರ್​ ಮತ್ತು ಅಜಯ್​ ದೇವಗನ್​ ಅವರದ್ದು ತಂದೆ-ಮಗನ ಪಾತ್ರ ಎಂಬುದು ಈಗ ಜಗಜ್ಜಾಹೀರಾಗಿದೆ. ಸದ್ಯ ಚಕ್ರಿ ಮಾಡಿರುವ ಸೋಶಿಯಲ್​ ಮೀಡಿಯಾ ಪೋಸ್ಟ್​ ಕಾಣಿಸುತ್ತಿಲ್ಲ.

‘ಬಾಹುಬಲಿ 2’ ಬಳಿಕ ರಾಜಮೌಳಿ ನಿರ್ದೇಶಿಸುತ್ತಿರುವ ಸಿನಿಮಾ ಇದಾಗಿರುವುದರಿಂದ ಸಹಜವಾಗಿಯೇ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ. ದೊಡ್ಡ ಕ್ಯಾನ್ವಾಸ್​ನಲ್ಲಿ ಸಿನಿಮಾ ಮೂಡಿಬರುತ್ತಿದೆ. ಕನ್ನಡ ಸೇರಿ ಹಲವು ಭಾಷೆಗಳಿಗೆ ಈ ಸಿನಿಮಾ ಡಬ್​ ಆಗಿ ತೆರೆ ಕಾಣಲಿದೆ. ಕೊರೊನಾ ವೈರಸ್​ ಹರಡುವ ಭೀತಿ ಮತ್ತು ಲಾಕ್​ಡೌನ್​ ನಿಯಮಗಳ ಕಾರಣದಿಂದ ಚಿತ್ರದ ಶೂಟಿಂಗ್​ಗೆ ಬ್ರೇಕ್​ ಹಾಕಲಾಗಿತ್ತು. ಈಗ ಲಾಕ್​ಡೌನ್​ ಸಡಿಲಿಕೆ ಆಗಿರುವ ಹಿನ್ನೆಲೆಯಲ್ಲಿ ಮತ್ತೆ ಶೂಟಿಂಗ್​ಗೆ ಚಾಲನೆ ನೀಡಲಾಗಿದೆ.

2021ರ ಅಕ್ಟೋಬರ್​ 13ರಂದು ಆರ್​ಆರ್​ಆರ್​ ತೆರೆಕಾಣಿಸಬೇಕು ಎಂದು ಚಿತ್ರತಂಡ ಗುರಿ ಇಟ್ಟುಕೊಂಡಿದೆ. ಆದರೆ ಲಾಕ್​ಡೌನ್​ನಿಂದ ಚಿತ್ರದ ಕೆಲಸಗಳು ವಿಳಂಬ ಆಗಿರುವುದರಿಂದ ಬಿಡುಗಡೆ ದಿನಾಂಕ ಮುಂದೂಡಲ್ಪಡುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ:

RRR: ಬಹುದಿನಗಳಿಂದ ಕಾದಿದ್ದ ಅಭಿಮಾನಿಗಳಿಗೆ ಆರ್​ಆರ್​ಆರ್​ ತಂಡದಿಂದ ಸಿಕ್ತು ಬಿಗ್​ ನ್ಯೂಸ್​

ಆರ್​ಆರ್​ಆರ್​ ಚಿತ್ರದ ಒಂದು ಹಾಡಿನ ಶೂಟ್​ಗೆ 30 ದಿನ; ಹುಬ್ಬೇರಿಸಿದ ಸಿನಿಪ್ರಿಯರು

ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ
ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್