Bigg Boss Kannada: ಮಂಜು-ದಿವ್ಯಾ ಮದುವೆ ವಿಚಾರ ಸ್ಫೋಟ; ಸುದೀಪ್​ ಎದುರಲ್ಲೇ ಸಿಡಿದೆದ್ದ ಚಂದ್ರಚೂಡ್​

Manju Pavagada Divya Suresh: ಮಂಜು-ದಿವ್ಯಾ ಸುರೇಶ್​ ಮದುವೆ ಬಗ್ಗೆ ಚಕ್ರವರ್ತಿ ಚಂದ್ರಚೂಡ್​ ಹಾಗೂ ಮಂಜು ನಡುವೆ ಮಾತಿನ ಯುದ್ಧವೇ ನಡೆದಿದೆ. ‘ನನ್ನ ತಂದೆ-ತಾಯಿ ಇದನ್ನೆಲ್ಲ ಕಲಿಸಿಲ್ಲ’ ಎಂದು ಚಂದ್ರಚೂಡ್​ ತಿರುಗೇಟು ನೀಡಿದ್ದಾರೆ. ದಿವ್ಯಾ​ ಕಣ್ಣೀರು ಹಾಕಿದ್ದಾರೆ!

Bigg Boss Kannada: ಮಂಜು-ದಿವ್ಯಾ ಮದುವೆ ವಿಚಾರ ಸ್ಫೋಟ; ಸುದೀಪ್​ ಎದುರಲ್ಲೇ ಸಿಡಿದೆದ್ದ ಚಂದ್ರಚೂಡ್​
ಚಕ್ರವರ್ತಿ ಚಂದ್ರಚೂಡ್ - ಮಂಜು ಪಾವಗಡ
Follow us
TV9 Web
| Updated By: ಮದನ್​ ಕುಮಾರ್​

Updated on: Jun 27, 2021 | 9:42 AM

ಕೆಲವೇ ದಿನಗಳ ಹಿಂದೆ ಶುರು ಆಗಿರುವ ಬಿಗ್​ ಬಾಸ್​ ಕನ್ನಡದ ಎರಡನೇ ಇನ್ನಿಂಗ್ಸ್​ನಲ್ಲಿ ಈಗ ಅಸಮಾಧಾನದ ಬೆಂಕಿ ಹೊತ್ತಿಕೊಂಡಿದೆ. ಕೊರೊನಾ ಕಾರಣದಿಂದ ಈ ಶೋ 42 ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಆ ವೇಳೆ ಬಹುತೇಕ ಸ್ಪರ್ಧಿಗಳು ತಮ್ಮ ಹಳೇ ಎಪಿಸೋಡ್​ಗಳನ್ನು ನೋಡಿಕೊಂಡು ಬಂದಿದ್ದಾರೆ. ಬೆನ್ನ ಹಿಂದೆ ಯಾರು ಏನೆಲ್ಲ ಮಾತನಾಡಿದ್ದಾರೆ ಎಂಬುದು ತಿಳಿದುಕೊಂಡಿರುವ ಎಲ್ಲರೂ ಹೊಸ ತಂತ್ರದ ಮೂಲಕ ಆಟ ಮುಂದುವರಿಸಿದ್ದಾರೆ. ಎರಡನೇ ಇನ್ನಿಂಗ್ಸ್​ನ ಮೊದಲ ವೀಕೆಂಡ್​ನಲ್ಲೇ ಮಂಜು ಪಾವಗಡ ಮತ್ತು ಚಕ್ರವರ್ತಿ ಚಂದ್ರಚೂಡ್​ ನಡುವೆ ದೊಡ್ಡ ಜಟಾಪಟಿ ನಡೆದಿದೆ.

ಬಿಗ್​ ಬಾಸ್​ ಮನೆಯಲ್ಲಿರುವ ಜೋಡಿಗಳ ಬಗ್ಗೆ ಚಕ್ರವರ್ತಿ ಚಂದ್ರಚೂಡ್​ ಅವರು ಮಾಧ್ಯಮಗಳ ಸಂದರ್ಶನದಲ್ಲಿ ಮನಬಂದಂತೆ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಎರಡನೇ ಇನ್ನಿಂಗ್ಸ್​ ಶುರುವಾಗುತ್ತಿದ್ದಂತೆಯೇ ದೊಡ್ಮನೆಯೊಳಗೆ ಈ ವಿಚಾರ ಚರ್ಚೆಗೆ ಬಂದಿತ್ತು. ಈಗ ‘ಸೂಪರ್​ ಸಂಡೇ ವಿತ್​ ಸುದೀಪ’ ಎಪಿಸೋಡ್​ನಲ್ಲಿ ಮಂಜು ಮತ್ತು ದಿವ್ಯಾ ಸುರೇಶ್​ ಅವರ ಮದುವೆ ವಿಚಾರಕ್ಕೆ ದೊಡ್ಡ ವಾಗ್ವಾದ ನಡೆದು ಹೋಗಿದೆ.

ಮೊದಲ ಇನ್ನಿಂಗ್ಸ್​ ಶುರುವಾದಾಗ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ಅವರು ತಮಾಷೆಗೆ ಗಂಡ-ಹೆಂಡತಿ ರೀತಿ ನಾಟಕ ಆಡಿದ್ದರು. ಅದೇ ವಿಚಾರ ಇಟ್ಟುಕೊಂಡು ಚಕ್ರವರ್ತಿ ಚಂದ್ರಚೂಡ್​ ಈಗ ಆಕ್ಷೇಪ ಎತ್ತಿದ್ದಾರೆ. ‘ಶ್ರೀಮಾನ್​ ಮಂಜು ಪಾವಗಡ, ಒಂದು ಶೋಗೋಸ್ಕರ ಒಬ್ಬಳು ಹೆಣ್ಣನ್ನು ಹೆಂಡತಿಯಾಗಿ ಹೇಗೆ ಮಾಡಿಕೊಳ್ಳುತ್ತಾನೆ’ ಎಂದು ಚಂದ್ರಚೂಡ್​ ತೀವ್ರವಾಗಿ ಕಿಡಿಕಾರಿದ್ದಾರೆ.

ಚಂದ್ರಚೂಡ್​ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಮಂಜು, ‘ಅದು ನಾಟಕ ಎಂಬುದು ಇಡೀ ಮನೆಯವರಿಗೆ ಗೊತ್ತಿತ್ತು’ ಎಂದಿದ್ದಾರೆ. ‘ನನ್ನ ತಂದೆ-ತಾಯಿ ಇದನ್ನೆಲ್ಲ ಕಲಿಸಿಲ್ಲ ಸರ್​’ ಎಂದು ಇನ್ನಷ್ಟು ಗರಂ ಆಗಿ ಚಂದ್ರಚೂಡ್​ ತಿರುಗೇಟು ನೀಡಿದ್ದಾರೆ. ‘ಇಲ್ಲಿದ್ದಾಗ ನಕ್ಕು, ಮಜಾ ಮಾಡಿ, ಹೊರಗೆ ಹೋದಮೇಲೆ ಇದೆಲ್ಲ ನಿಮಗೆ ನೆನಪಾಯ್ತಾ’ ಎಂದು ಮಂಜು ಮರುಪ್ರಶ್ನೆ ಹಾಕಿದ್ದಾರೆ. ಒಟ್ಟಾರೆ ಕಿಚ್ಚ ಸುದೀಪ್​ ಎದುರಿನಲ್ಲೇ ನಡೆದ ಈ ಮಾತಿನ ಯುದ್ಧದಲ್ಲಿ ದಿವ್ಯಾ ಸುರೇಶ್​ ಕಣ್ಣೀರು ಹಾಕಿದ್ದಾರೆ!

ಜೂ.27ರ ‘ಸೂಪರ್​ ಸಂಡೇ ವಿತ್​ ಸುದೀಪ’ ಎಪಿಸೋಡ್​ನಲ್ಲಿ ಈ ಘಟನೆಗಳು ಪ್ರಸಾರ ಆಗಲಿವೆ. ಇದರ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದ್ದು, ವೀಕ್ಷಕರಲ್ಲಿ ತೀವ್ರ ಕೌತುಕ ಕೆರಳಿಸಿದೆ.

ಇದನ್ನೂ ಓದಿ:

ನಿಂಗೂ, ನಿನ್ನ ಫ್ರೆಂಡ್​ಶಿಪ್​ಗೂ ದೊಡ್ಡ ನಮಸ್ಕಾರ; ಮಂಜುಗೆ ಗುಡ್​ ಬೈ ಹೇಳಿದ ದಿವ್ಯಾ ಸುರೇಶ್​

Bigg Boss Kannada: ಸುದೀಪ್​ ಎದುರಲ್ಲಿ ಆಡಿದ ಮಾತು ಉಳಿಸಿಕೊಂಡ ಮಂಜು; ದೊಡ್ಮನೆಯಲ್ಲಿ ದೊಡ್ಡ ಬದಲಾವಣೆ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ