AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಸುದೀಪ್​ ಎದುರಲ್ಲಿ ಆಡಿದ ಮಾತು ಉಳಿಸಿಕೊಂಡ ಮಂಜು; ದೊಡ್ಮನೆಯಲ್ಲಿ ದೊಡ್ಡ ಬದಲಾವಣೆ

BBK8: ಮೊದಲ ಇನ್ನಿಂಗ್ಸ್​​ನ ಆರಂಭದಲ್ಲಿ ಭಾರಿ ಮನರಂಜನೆ ನೀಡುತ್ತಿದ್ದ ಮಂಜು ಪಾವಗಡ ಅವರು ನಂತರದ ದಿನಗಳಲ್ಲಿ ದಿವ್ಯಾ ಸುರೇಶ್​ ಜೊತೆ ಸೇರಿಕೊಂಡು ಮಂಕಾಗಿದ್ದರು. ಅದು ಪ್ರೇಕ್ಷಕರಿಗೂ ನಿರಾಸೆ ಮೂಡಿಸಿತ್ತು.

Bigg Boss Kannada: ಸುದೀಪ್​ ಎದುರಲ್ಲಿ ಆಡಿದ ಮಾತು ಉಳಿಸಿಕೊಂಡ ಮಂಜು; ದೊಡ್ಮನೆಯಲ್ಲಿ ದೊಡ್ಡ ಬದಲಾವಣೆ
ಮಂಜು-ದಿವ್ಯಾ ಸುರೇಶ್​
ಮದನ್​ ಕುಮಾರ್​
|

Updated on:Jun 25, 2021 | 9:29 AM

Share

ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಎರಡನೇ ಇನ್ನಿಂಗ್ಸ್​ನಲ್ಲಿ ಹಲವು ಬದಲಾವಣೆ ಕಾಣುತ್ತಿದೆ. ಈಗಂತೂ ಆಟದ ಸ್ವರೂಪವೇ ಬದಲಾಗಿದೆ. ಕೊರೊನಾ ವೈರಸ್​ ಎರಡನೇ ಅಲೆಯ ಕಾರಣದಿಂದ ಶೋ ಅರ್ಧಕ್ಕೆ ನಿಂತಿತ್ತು. ಹಾಗಾಗಿ ಎಲ್ಲ 12 ಸ್ಪರ್ಧಿಗಳು ಒಂದೂವರೆ ತಿಂಗಳ ಕಾಲ ಗ್ಯಾಪ್​ ಪಡೆದುಕೊಂಡು ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಬಹುತೇಕರು ಹಳೇ ಎಪಿಸೋಡ್​ಗಳನ್ನು ನೋಡಿಕೊಂಡು ಬಂದಿದ್ದಾರೆ. ಅವರವರ ಪ್ಲಸ್​ ಮತ್ತು ಮೈನಸ್​ಗಳನ್ನು ಅರಿತುಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಮಂಜು ಪಾವಗಡ ಕೂಡ ಆಟದ ಪ್ಲ್ಯಾನ್​ ಬದಲಾಯಿಸಿದ್ದಾರೆ.

ಮೊದಲ ಇನ್ನಿಂಗ್ಸ್​​ನ ಆರಂಭದಲ್ಲಿ ಭಾರಿ ಮನರಂಜನೆ ನೀಡುತ್ತಿದ್ದ ಮಂಜು ಪಾವಗಡ ಅವರು ನಂತರದ ದಿನಗಳಲ್ಲಿ ದಿವ್ಯಾ ಸುರೇಶ್​ ಜೊತೆ ಸೇರಿಕೊಂಡು ಮಂಕಾಗಿದ್ದರು. ಅದು ಪ್ರೇಕ್ಷಕರಿಗೂ ನಿರಾಸೆ ಮೂಡಿಸಿತ್ತು. ಅದು ಸ್ವತಃ ಅವರ ಗಮನಕ್ಕೆ ಬಂದಿದ್ದರೂ ಕೂಡ ಸಮಯ ಕೈ ಮೀರಿ ಹೋಗಿತ್ತು. ಆದರೆ ಈಗ ಹೊಸ ಉತ್ಸಾಹದೊಂದಿಗೆ ಮಂಜು ಬಿಗ್​ ಬಾಸ್​ ಮನೆಗೆ ರೀ ಎಂಟ್ರಿ ಪಡೆದುಕೊಂಡಿದ್ದಾರೆ. ವೇದಿಕೆ ಮೇಲೆ ಕಿಚ್ಚ ಸುದೀಪ್ ಎದುರಲ್ಲಿ ತಾವು ಆ​ಡಿದ ಮಾತನ್ನ ಉಳಿಸಿಕೊಳ್ಳುತ್ತಿದ್ದಾರೆ.

ಎರಡನೇ ಇನ್ನಿಂಗ್ಸ್​ ಶುರುವಾಗುವಾಗ ಎಲ್ಲ ಸ್ಪರ್ಧಿಗಳನ್ನು ವೇದಿಕೆಗೆ ಕರೆದು ಸುದೀಪ್ ಮಾತನಾಡಿಸಿದ್ದರು. ‘ಬಿಗ್​ ಬಾಸ್​ ಮನೆಯ ಜರ್ನಿಯಲ್ಲಿ​ ಸಿಂಗಲ್​ ರೈಡ್​ ಇರುತ್ತೋ ಅಥವಾ ಡಬಲ್​ ರೈಡ್​ ಇರುತ್ತದೆಯೋ’ ಎಂದು ಸುದೀಪ್ ನೇರವಾಗಿ ಪ್ರಶ್ನೆ ಮಾಡಿದ್ದರು. ಆಗ ಮಂಜು, ‘ನಾನು ಸಿಂಗಲ್​ ರೈಡ್​ ಹೋಗುತ್ತೇನೆ’ ಎಂದು ಹೇಳುವ ಮೂಲಕ ದಿವ್ಯಾ ಅವರಿಂದ ಅಂತರ ಕಾಯ್ದುಕೊಳ್ಳುವ ಸೂಚನೆ ನೀಡಿದ್ದರು. ಆ ಮಾತಿಗೆ ತಕ್ಕಂತೆಯೇ ಅವರೀಗ ನಡೆದುಕೊಳ್ಳುತ್ತಿದ್ದಾರೆ. ಎಲ್ಲರನ್ನೂ ನಗಿಸುತ್ತ, ಭರ್ಜರಿ ಮನರಂಜನೆ ನೀಡುತ್ತ ದೊಡ್ಮನೆಯ ರಂಗನ್ನು ಅವರು ಹೆಚ್ಚಿಸಿದ್ದಾರೆ. ಅದಕ್ಕೆ ಇತ್ತೀಚೆಗೆ ನಡೆದ ಒಂದು ಘಟನೆಯೇ ಸಾಕ್ಷಿ.

ಟಾಸ್ಕ್​ ಆಡುವಾಗ ದಿವ್ಯಾ ಸುರೇಶ್ ಕಾಲಿಗೆ ಪೆಟ್ಟಾಗಿದೆ. ಹಾಗಿದ್ದರೂ ಕೂಡ ಮಂಜು ಅತೀ ಉತ್ಸಾಹ ತೋರಿಸುತ್ತ ಅವರನ್ನು ಸಮಾಧಾನ ಮಾಡಲು ಹೋಗಿಲ್ಲ. ಎಲ್ಲರಂತೆ ತಾವೂ ಒಬ್ಬರಾಗಿ ಆ ಸಂದರ್ಭವನ್ನು ನಿಭಾಯಿಸಿದ್ದಾರೆ. ದಿವ್ಯಾಗೆ ಸಮಾಧಾನ ಮಾಡು ಎಂದು ಬೇರೆ ಸ್ಪರ್ಧಿಗಳೆಲ್ಲ ಒತ್ತಾಯಿಸಿದರೂ ಕೂಡ ಅವರು ಅತಿಯಾಗಿ ನಡೆದುಕೊಂಡಿಲ್ಲ.

ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಈ ವಿಚಾರ ಗೊತ್ತಾಗಿದೆ. ಶನಿವಾರದ (ಜೂ.25) ಎಪಿಸೋಡ್​ನಲ್ಲಿ ಈ ದೃಶ್ಯಗಳು ಪ್ರಸಾರ ಆಗಲಿವೆ.

ಇದನ್ನೂ ಓದಿ:

ಬಿಗ್​ ಬಾಸ್​ ಮನೆಯಿಂದ ಹೊರಗಿದ್ದಾಗ ಮಂಜು ಪಾವಗಡಗೆ ಬಂದಿತ್ತು ಒಂದು ವಿಚಿತ್ರ ಕರೆ

150 ಜೊತೆ ಬಟ್ಟೆಯೊಂದಿಗೆ ಬಿಗ್​ ಬಾಸ್​ ಮನೆಗೆ ಬಂದಿದ್ದಾರೆ ಪ್ರಶಾಂತ್ ಸಂಬರಗಿ; ಸುದೀಪ್​ ರಿಯಾಕ್ಷನ್​​ ಹೇಗಿತ್ತು?

Published On - 9:28 am, Fri, 25 June 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್