AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dhanush: ‘ಕರ್ಣನ್’​ ಗೆದ್ದ ಬಳಿಕ ಧನುಷ್​ ಸಂಭಾವನೆ ಏರಿಕೆ; ಖ್ಯಾತ ನಟನಿಗೆ ಈಗ ಸಿಗುತ್ತಿರುವ ಹಣ ಎಷ್ಟು?

Dhanush Remuneration: ಟಾಲಿವುಡ್​ನಲ್ಲಿ ಹಲವು ಹಿಟ್​ ಸಿನಿಮಾಗಳನ್ನು ನೀಡಿರುವ ಶೇಖರ್​ ಕಮ್ಮುಲ ಜೊತೆ ಧನುಷ್​ ಕೈ ಜೋಡಿಸುತ್ತಿರುವುದರಿಂದ ಸಹಜವಾಗಿಯೇ ಈ ಸಿನಿಮಾ ಮೇಲೆ ಹೈಪ್​ ಸೃಷ್ಟಿ ಆಗಿದೆ. ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಈ ಸಿನಿಮಾ ಮೂಡಿಬರಲಿದೆ.

Dhanush: ‘ಕರ್ಣನ್’​ ಗೆದ್ದ ಬಳಿಕ ಧನುಷ್​ ಸಂಭಾವನೆ ಏರಿಕೆ; ಖ್ಯಾತ ನಟನಿಗೆ ಈಗ ಸಿಗುತ್ತಿರುವ ಹಣ ಎಷ್ಟು?
ಧನುಷ್​
ಮದನ್​ ಕುಮಾರ್​
|

Updated on: Jun 25, 2021 | 8:09 AM

Share

ಕಾಲಿವುಡ್​ನ ಖ್ಯಾತ ನಟ ಧನುಷ್​ ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ತಮಿಳು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿರದೇ ಅವರು ಬೇರೆ ಬೇರೆ ಭಾಷೆಗಳಲ್ಲಿ ಅಭಿನಯಿಸುವ ಮೂಲಕ ದೊಡ್ಡ ಫ್ಯಾನ್​ ಫಾಲೋಯಿಂಗ್​ ಹೊಂದಿದ್ದಾರೆ. ಸದ್ಯ ಅವರ ಕೈಯಲ್ಲಿ ಹಲವು ಪ್ರಾಕೆಜ್ಟ್​ಗಳಿವೆ. ಈ ವರ್ಷ ತೆರೆಕಂಡ ‘ಕರ್ಣನ್​’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದುಕೊಂಡಿತು. ಆ ಬಳಿಕ ಧನುಷ್ ಸಂಭಾವನೆಯಲ್ಲಿ ದೊಡ್ಡ ಮಟ್ಟದ ಏರಿಕೆ ಆಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

ಇಷ್ಟು ದಿನಗಳವರೆಗೆ ಪ್ರತಿ ಸಿನಿಮಾಗೆ ಧನುಷ್​ 10ರಿಂದ 15 ಕೋಟಿ ರೂ. ಪಡೆದುಕೊಳ್ಳುತ್ತಿದ್ದರು. ಆದರೆ ಹೊಸದೊಂದು ಸಿನಿಮಾಗೆ ಅವರು 50 ಕೋಟಿ ರೂ. ಡಿಮ್ಯಾಂಡ್​ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಅವರು ಸಂಭಾವನೆಯಲ್ಲಿ ಏಕಾಏಕಿ ಇಷ್ಟು ಏರಿಕೆ ಮಾಡಿಕೊಳ್ಳಲು ಕಾರಣ ಏನು? ಖ್ಯಾತ ನಿರ್ದೇಶಕ ಶೇಖರ್​ ಕಮ್ಮುಲ ಜೊತೆ ಸೇರಿ ಧನುಷ್​ ಒಂದು ಹೊಸ ಸಿನಿಮಾ ಮಾಡಲಿದ್ದಾರೆ. ಆ ಚಿತ್ರ ಮೂರು ಭಾಷೆಯಲ್ಲಿ ತಯಾರಾಗಲಿದೆ. ಹಾಗಾಗಿ ಧನುಷ್​ ಇಷ್ಟು 50 ಕೋಟಿ ರೂ. ಚಾರ್ಜ್​ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಡಿದೆ.

ಟಾಲಿವುಡ್​ನಲ್ಲಿ ಹಲವು ಹಿಟ್​ ಸಿನಿಮಾಗಳನ್ನು ನೀಡಿರುವ ಶೇಖರ್​ ಕಮ್ಮುಲ ಜೊತೆ ಧನುಷ್​ ಕೈ ಜೋಡಿಸುತ್ತಿರುವುದರಿಂದ ಸಹಜವಾಗಿಯೇ ಈ ಸಿನಿಮಾ ಮೇಲೆ ಹೈಪ್​ ಸೃಷ್ಟಿ ಆಗಿದೆ. ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಈ ಸಿನಿಮಾ ಮೂಡಿಬರಲಿದೆ. ಚಿತ್ರಕ್ಕಿನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಅಂದಾಜು 120 ಕೋಟಿ ರೂ. ಬಜೆಟ್​ನಲ್ಲಿ ಈ ಸಿನಿಮಾ ತಯಾರಾಗಲಿದೆ ಎಂಬುದು ಕೇಳಿಬರುತ್ತಿರುವ ಮಾಹಿತಿ.

ಕಾಲಿವುಡ್​ಗೆ ಮಾತ್ರ ಸೀಮಿತವಾಗದ ಧನುಷ್​ ಅವರು ಬಾಲಿವುಡ್​ನಲ್ಲೂ ಸಿನಿಮಾ ಮಾಡಿದ್ದಾರೆ. ರಾಂಜಣಾ, ಶಮಿತಾಬ್​ ಬಳಿಕ ಈಗ ಹಿಂದಿಯಲ್ಲಿ ಅವರು ಅತರಂಗಿ ರೇ ಸಿನಿಮಾ ಮಾಡುತ್ತಿದ್ದಾರೆ. ಅದರಲ್ಲಿ ಅಕ್ಷಯ್​ ಕುಮಾರ್​ ಮತ್ತು ಸಾರಾ ಅಲಿ ಖಾನ್​ ಜೊತೆ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ, ಹಾಲಿವುಡ್​ನ ದಿ ಗ್ರೇ ಮ್ಯಾನ್​ ಚಿತ್ರದಲ್ಲಿ ಧನುಷ್​​ ನಟಿಸುತ್ತಿದ್ದು, ಆ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಸದ್ಯ ತಮ್ಮ ಹಾಲಿವುಡ್​ ಚಿತ್ರದ ಶೂಟಿಂಗ್​ಗಾಗಿ ಅವರು ಅಮೆರಿಕಕ್ಕೆ ತೆರಳಿದ್ದಾರೆ. ಇದೇ ವೇಳೆ ನಟ ರಜನಿಕಾಂತ್​ ಅವರ ಆರೋಗ್ಯ ತಪಾಸಣೆ ಕೂಡ ಅಮೆರಿಕದಲ್ಲಿ ನಡೆಯುತ್ತಿದ್ದು, ಅವರಿಗೆ ಧನುಷ್​ ನೆರವಾಗುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:

ಧನುಷ್​ ನಟನೆಯ ಕರ್ಣನ್​ ಸಿನಿಮಾ ಮೇಲೆ ಕಣ್ಣಿಟ್ಟ ಟಾಲಿವುಡ್​; ರಿಮೇಕ್​ನಲ್ಲಿ ಹೀರೋ ಯಾರು?

ರಿಲೀಸ್ ಆಯ್ತು ‘ಜಗಮೇ ತಂಧೀರಮ್’ ಟ್ರೇಲರ್​; ಸಿನಿಮಾದಿಂದ ಧನುಷ್ ಅಂತರ ಕಾಯ್ದುಕೊಂಡಿದ್ದೇಕೆ?

ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!