AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಶಾಂತ್​ ಸಿಂಗ್ ಸಾವಿನ​ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ? ಆರ್​ಟಿಐ ಅಡಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಬಿಐ

ಕೋರಿಯೋಗ್ರಾಫರ್​, ಸುಶಾಂತ್​ ಗೆಳೆಯ ಗಣೇಶ್​ ಹಿವಾರ್ಕರ್​ ಇತ್ತೀಚೆಗೆ ಆರ್​ಟಿಐ ಅಡಿಯಲ್ಲಿ ಪ್ರಶ್ನೆ ಕೇಳಿದ್ದರು. ‘ಸುಶಾಂತ್​ ಸಿಂಗ್​ ಸಾವಿನ ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ತಿಳಿಸಿ’ ಎಂದು ಕೋರಿದ್ದರು.

ಸುಶಾಂತ್​ ಸಿಂಗ್ ಸಾವಿನ​ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ? ಆರ್​ಟಿಐ ಅಡಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಬಿಐ
ಸುಶಾಂತ್​ ಸಿಂಗ್​ ರಜಪೂತ್​
ರಾಜೇಶ್ ದುಗ್ಗುಮನೆ
|

Updated on: Jun 24, 2021 | 8:34 PM

Share

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಮೃತಪಟ್ಟು ಒಂದು ವರ್ಷ ಕಳೆದಿದೆ. ಆದಾಗ್ಯೂ ಅವರ ಸಾವಿನ ವಿಚಾರ ಗುಟ್ಟಾಗಿಯೇ ಇದೆ. ಅವರದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಈ ತನಿಖೆ ಯಾವ ಹಂತದಲ್ಲಿದೆ ಎಂದು ಮಾಹಿತಿ ಹಕ್ಕು ಕಾಯ್ದೆ (ಆರ್​ಟಿಐ) ಅಡಿಯಲ್ಲಿ ಕೇಳಿದ ಪ್ರಶ್ನೆಗೆ ಸಿಬಿಐ ಉತ್ತರಿಸಿದೆ.

ಕೋರಿಯೋಗ್ರಾಫರ್​, ಸುಶಾಂತ್​ ಗೆಳೆಯ ಗಣೇಶ್​ ಹಿವಾರ್ಕರ್​ ಇತ್ತೀಚೆಗೆ ಆರ್​ಟಿಐ ಅಡಿಯಲ್ಲಿ ಪ್ರಶ್ನೆ ಕೇಳಿದ್ದರು. ‘ಸುಶಾಂತ್​ ಸಿಂಗ್​ ಸಾವಿನ ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ತಿಳಿಸಿ’ ಎಂದು ಕೋರಿದ್ದರು. ಇದಕ್ಕೆ, ಸಿಬಿಐ ಉತ್ತರ ಹೇಳಲು ನಿರಾಕರಿಸಿದೆ.

ಇತ್ತೀಚೆಗೆ ಟ್ವೀಟ್​ ಮಾಡಿದ್ದ ಗಣೇಶ್​, ‘ಸಿಬಿಐನಿಂದ ಸುಶಾಂತ್​ ಸಿಂಗ್ ತನಿಖೆ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ ಎನಿಸುತ್ತಿದೆ. ಹೀಗಾಗಿ, ಪ್ರಧಾನಮಂತ್ರಿ ಕಚೇರಿಯವರು ನನಗೆ ಅಮೆರಿಕ ವಿಸಾ ಕೊಡಿಸಿ. ನನಗೆ ಇಲ್ಲಿ ಸುರಕ್ಷಿತವಲ್ಲ ಎನ್ನುವ ಭಾವನೆ ಬರುತ್ತಿದೆ’ ಎಂದಿದ್ದರು. ನಂತರ ಅಮೆರಿಕ ಅಧ್ಯಕ್ಷ ಜೋ ಬೈಡನ್​ ಬಳಿ ‘ಮಾನವ ಹಕ್ಕುಗಳ ಆಧಾರದ ಮೇಲೆ ಅಮೆರಿಕ ವೀಸಾ ಕೊಡುವಂತೆ’ ಮನವಿ ಮಾಡಿದ್ದರು.

ಮೇ 16ರಂದು ಆರ್​ಟಿಐ ಅಡಿಯಲ್ಲಿ ಗಣೇಶ್​ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಮನವಿ ಜೂನ್​ 14ರಂದು ಸಿಬಿಐ ಕೈ ಸೇರಿತ್ತು. ಈಗ ಇದಕ್ಕೆ ಸಿಬಿಐ ಉತ್ತರಿಸಿದೆ. ತನಿಖೆ ಪ್ರಗತಿಯಲ್ಲಿದೆ. ಈಗ ಅರ್ಧ ತನಿಖೆಯಲ್ಲಿ ಮಾಹಿತಿ ಬಿಡುಗಡೆ ಮಾಡವುದು ತನಿಖೆಯ ಮೇಲೆ ಪರಿಣಾಮ ಬೀರಬಹುದು ಎಂದು ಸಿಬಿಐ ಹೇಳಿದೆ.

ಇದನ್ನೂ ಓದಿ: Sushant Singh Rajput: ಸುಶಾಂತ್​ ವಾಸವಾಗಿದ್ದ ಮನೆ ಈಗ ಬಾಡಿಗೆಗೆ ಲಭ್ಯ; ತಿಂಗಳ ಬಾಡಿಗೆ ಅಬ್ಬಬ್ಬಾ ಇಷ್ಟೊಂದಾ?

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More