ಬಿಗ್​ ಬಾಸ್​ ಕ್ಯಾಪ್ಟನ್​ ರೂಂನಲ್ಲಿ ಭೂತ? ಕಪ್ಪಗಿನ ಆಕೃತಿ ಕಂಡು ಬೆಚ್ಚಿಬಿದ್ದ ಶಮಂತ್​

Bigg Boss Kannada: ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್​ ರೂಂ ಇದೆ. ಈ ಕ್ಯಾಪ್ಟನ್​ ರೂಂನಲ್ಲಿ ಐಷಾರಾಮಿ ವ್ಯವಸ್ಥೆ ಇದೆ. ಅಲ್ಲಿಯ ಬೆಡ್​ ಕೂಡ ವಿಶೇಷವಾಗಿದೆ.

ಬಿಗ್​ ಬಾಸ್​ ಕ್ಯಾಪ್ಟನ್​ ರೂಂನಲ್ಲಿ ಭೂತ? ಕಪ್ಪಗಿನ ಆಕೃತಿ ಕಂಡು ಬೆಚ್ಚಿಬಿದ್ದ ಶಮಂತ್​
ಶಮಂತ್​ ಬ್ರೋ ಗೌಡ
Follow us
TV9 Web
| Updated By: Digi Tech Desk

Updated on:Jun 25, 2021 | 10:38 AM

ಬಿಗ್​ ಬಾಸ್​ ಮನೆಯಲ್ಲಿ ವಿಚಿತ್ರ ಶಕ್ತಿ ಇದೆಯಾ? ದೆವ್ವ ಇದೆಯಾ? ಹೀಗೊಂದು ಚರ್ಚೆಯನ್ನು ಹುಟ್ಟು ಹಾಕುವ ಕೆಲಸವನ್ನು ಶಮಂತ್​ ಹೇಳಿಕೆ ಮಾಡಿದೆ. ಎರಡನೇ ಇನ್ನಿಂಗ್ಸ್​ನ ಮೊದಲ ದಿನ ನಡೆದ ಭಯಾನಕ ಅನುಭವದ ಬಗ್ಗೆ ಶಮಂತ್​ ಹೇಳಿಕೊಂಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್​ ರೂಂ ಇದೆ. ಈ ಕ್ಯಾಪ್ಟನ್​ ರೂಂನಲ್ಲಿ ಐಷಾರಾಮಿ ವ್ಯವಸ್ಥೆ ಇದೆ. ಅಲ್ಲಿಯ ಬೆಡ್​ ಕೂಡ ವಿಶೇಷವಾಗಿದೆ. ಮನೆಯ ಕ್ಯಾಪ್ಟನ್​ಗೆ ಸಿಗುವ ವಿಶೇಷ ಸವಲತ್ತುಗಳಲ್ಲಿ ಇದು ಕೂಡ ಒಂದು. ಕ್ಯಾಪ್ಟನ್​ ಆಗಲು ಬಯಸೋಕೆ ಇದು ಕೂಡ ಒಂದು ಕಾರಣ. ಆದರೆ, ಕ್ಯಾಪ್ಟನ್​ ಆದಷ್ಟು ದಿನ ಶಮಂತ್​ಗೆ ಅಲ್ಲಿ ನಿದ್ದೇಯೆ ಬಂದಿಲ್ಲವಂತೆ.

ಮೊದಲ ದಿನದಂದು ಶಮಂತ್ ಹಾಗೂ ಪ್ರಿಯಾಂಕಾ ಮಾತನಾಡಿಕೊಂಡರು. ‘ನಾನು ಬೆಡ್​ರೂಂಗೆ ಹೋದೆ. ರಘು ಭೂತ-ಕೋಲ ಎಂದು ಏನೋ ಹೇಳುತ್ತಿದ್ದರು. ಆಗ ಕ್ಯಾಪ್ಟನ್​ ರೂಂನಲ್ಲಿ ವಿಚಿತ್ರ ಆಕೃತಿಯೊಂದು ಹಾದು ಹೋಯ್ತು. ನಾನು ಐದು ನಿಮಿಷ ತಲೆಕೆಡಿಸಿಕೊಂಡೆ. ಆದರೆ, ಈ ವಿಚಾರವನ್ನು ಯಾರಿಗೂ ಹೇಳಿಲ್ಲ. ನಿಮಗೇ ಮೊದಲು ಹೇಳುತ್ತಿದ್ದೇನೆ. ನಾನು ಪ್ರ್ಯಾಂಕ್​ ಮಾಡ್ತಿಲ್ಲ. ಈ ವಿಚಾರದಲ್ಲಿ ಪ್ರ್ಯಾಂಕ್’​ ಮಾಡಬಾರದು’ ಎಂದು ಪ್ರಿಯಾಂಕಾಗೆ ಶಮಂತ್​ ಹೇಳಿದರು.

‘ನಾನು ಕ್ಯಾಪ್ಟನ್​ ಆದಾಗ ನಿದ್ದೆಯೇ ಮಾಡಿಲ್ಲ. ಅಲ್ಲಿ ಮಲಗಿದವರಿಗೆ ಯಾರಿಗೂ ನಿದ್ದೆ ಬರಲ್ಲ. ಎರಡು ವಾರ ಅಲ್ಲಿ ಹೇಗೆ ಕಳೆದೆನೋ ಗೊತ್ತಿಲ್ಲ. ಜಾಸ್ತಿ ಹೊತ್ತು ಅದರ ಬಗ್ಗೆ ಮಾತನಾಡಬಾರದು’ ಎಂದು ಮಾತುಕತೆ ಮುಗಿಸಿದರು ಶಮಂತ್.  ​

ನಂತರ ಈ ಬಗ್ಗೆ ಚಕ್ರವರ್ತಿ ಚಂದ್ರಚೂಡ್​ ಜತೆ ಶಮಂತ್​ ಚರ್ಚೆ ಮಾಡಿದರು. ಚಕ್ರವರ್ತಿ ಕೆಲವು ಸಾಧ್ಯತೆಗಳ ಬಗ್ಗೆ ಹೇಳಿದರೂ ಶಮಂತ್​ಗೆ ಆ ಹೇಳಿಕೆ ತೃಪ್ತಿ ನೀಡಿಲ್ಲ. ನಂತರ ಅವರು​ ತಲೆಕೆಡಿಸಿಕೊಂಡು, ಬಿಗ್​ ಬಾಸ್ ಎದುರೂ ಅದನ್ನು ಹೇಳಿಕೊಂಡರು.

ಇದನ್ನೂ ಓದಿ: Divya Uruduga: ಕೊವಿಡ್​ನಿಂದ ಕುಟುಂಬದವರನ್ನು ಕಳೆದುಕೊಂಡಿದ್ದಾರೆ ದಿವ್ಯಾ ಉರುಡುಗ; ಬಿಗ್​ ಬಾಸ್​ ಮನೆಯಲ್ಲಿ ಭಾವುಕ ನುಡಿ

150 ಜೊತೆ ಬಟ್ಟೆಯೊಂದಿಗೆ ಬಿಗ್​ ಬಾಸ್​ ಮನೆಗೆ ಬಂದಿದ್ದಾರೆ ಪ್ರಶಾಂತ್ ಸಂಬರಗಿ; ಸುದೀಪ್​ ರಿಯಾಕ್ಷನ್​​ ಹೇಗಿತ್ತು?

Published On - 9:59 am, Fri, 25 June 21

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು