Krrish 4: ಮತ್ತೆ ಬರಲಿದೆ ‘ಕೋಯಿ ಮಿಲ್​ ಗಯಾ’ ಜಾದೂ? ಹೃತಿಕ್​ ‘ಕ್ರಿಶ್​ 4’ ಚಿತ್ರದಲ್ಲಿ ಟೈಮ್​ ಟ್ರಾವೆಲಿಂಗ್​ ಕಥೆ

Hrithik Roshan: ಹೃತಿಕ್​ ರೋಷನ್​ ನಟನೆಯ ಬಹುನಿರೀಕ್ಷಿತ ‘ಕ್ರಿಶ್​ 4’ ಸಿನಿಮಾದಲ್ಲಿ ಟೈಮ್​ ಟ್ರಾವೆಲಿಂಗ್​ ಕಾನ್ಸೆಪ್ಟ್​ ಬಳಸಿಕೊಂಡು ಜಾದೂ ಪಾತ್ರವನ್ನು ಮತ್ತೆ ತೆರೆಮೇಲೆ ತರಲು ಚಿತ್ರತಂಡ ತೀರ್ಮಾನಿಸುತ್ತಿದೆ ಎಂಬ ಬಗ್ಗೆ ವರದಿ ಆಗಿದೆ.

Krrish 4: ಮತ್ತೆ ಬರಲಿದೆ ‘ಕೋಯಿ ಮಿಲ್​ ಗಯಾ’ ಜಾದೂ? ಹೃತಿಕ್​ ‘ಕ್ರಿಶ್​ 4’ ಚಿತ್ರದಲ್ಲಿ ಟೈಮ್​ ಟ್ರಾವೆಲಿಂಗ್​ ಕಥೆ
ಜಾದೂ, ಹೃತಿಕ್​ ರೋಷನ್​
Follow us
ಮದನ್​ ಕುಮಾರ್​
|

Updated on:Jun 25, 2021 | 12:56 PM

ಬಾಲಿವುಡ್ ಪ್ರೇಕ್ಷಕರಿಗೆ ಒಂದು ಹೊಸ ಅನುಭವ ನೀಡಿದ ಸಿನಿಮಾ ‘ಕೋಯಿ ಮಿಲ್​ ಗಯಾ’. ಆ ಚಿತ್ರದಲ್ಲಿ ಹೃತಿಕ್​ ರೋಷನ್​ ಅವರು ಎರಡು ಶೇಡ್​ನ ಪಾತ್ರ ಮಾಡಿದ್ದರು. ಒಂದರಲ್ಲಿ ಸೂಪರ್​ ಹೀರೋ ರೀತಿ ಕಾಣಿಸಿಕೊಂಡಿದ್ದರು. ಹೃತಿಕ್​ ನಿರ್ವಹಿಸಿದ್ದ ಆ ಪಾತ್ರಕ್ಕೆ ಸೂಪರ್​ ಹೀರೋ ಗುಣಗಳು ಬರಲು ಕಾರಣವಾಗಿದ್ದು ಜಾದೂ ಎಂಬ ಏಲಿಯನ್​. ಆ ಸಿನಿಮಾದಲ್ಲಿ ಜಾದೂ ಪಾತ್ರ ಸಖತ್​ ಇಂಟರೆಸ್ಟಿಂಗ್​ ಆಗಿತ್ತು. ಈಗ ಮತ್ತೆ ಅದೇ ಜಾದೂ ಜೊತೆ ಹೃತಿಕ್​ ನಟಿಸುತ್ತಾರೆ ಎಂಬ ಸುದ್ದಿ ಹರಡಿದೆ.

ಇತ್ತೀಚೆಗಷ್ಟೇ ‘ಕ್ರಿಶ್​​’ ಚಿತ್ರಕ್ಕೆ 14 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹೃತಿಕ್​ ರೋಷನ್​ ಅವರು ‘ಕ್ರಿಶ್​ 4’ ಸಿನಿಮಾದ ಒಂದು ಮಿನಿ ಟೀಸರ್​ ಹಂಚಿಕೊಂಡಿದ್ದರು. ಆ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವ ಕೆಲಸಕ್ಕೆ ಅವರು ಚಾಲನೆ ನೀಡಿದ್ದರು. ಅದರ ಬೆನ್ನಲ್ಲೇ ‘ಕ್ರಿಶ್​ 4’ ಬಗ್ಗೆ ಒಂದು ಗುಸುಗುಸು ಕೇಳಿಬಂದಿದೆ. ಈ ಸಿನಿಮಾದಲ್ಲಿ ಜಾದೂ ಪಾತ್ರ ಇರಲಿದೆ ಎಂದು ಹೇಳಲಾಗುತ್ತಿದೆ.

‘ಕ್ರಿಶ್​ 4’ ಸಿನಿಮಾದಲ್ಲಿ ಟೈಮ್​ ಟ್ರಾವೆಲಿಂಗ್​ ಕಾನ್ಸೆಪ್ಟ್​ ಬಳಸಿಕೊಂಡು ಜಾದೂ ಪಾತ್ರವನ್ನು ಮತ್ತೆ ತೆರೆಮೇಲೆ ತರಲು ಚಿತ್ರತಂಡ ತೀರ್ಮಾನಿಸುತ್ತಿದೆ ಎಂಬ ಬಗ್ಗೆ ವರದಿ ಆಗಿದೆ. ಆದರೆ ಈ ಕುರಿತು ಯಾರೂ ಅಧಿಕೃತ ಹೇಳಿಕೆ ನೀಡಿಲ್ಲ. ‘ಭೂತಕಾಲ ಮುಗಿಯಿತು. ಭವಿಷ್ಯ ಕಾಲ ಏನನ್ನು ತರುತ್ತದೆ ಅಂತ ನೋಡೋಣ’ ಎಂಬ ಕ್ಯಾಪ್ಷನ್​ ಜೊತೆಗೆ ಕ್ರಿಶ್​ 4 ಚಿತ್ರದ ಟೀಸರ್​ ಅನ್ನು ಹೃತಿಕ್​ ಹಂಚಿಕೊಂಡಿದ್ದರು. ಆ ಕ್ಯಾಪ್ಷನ್​ನಲ್ಲಿ ಭೂತ-ಭವಿಷ್ಯದ ಬಗ್ಗೆ ಅವರು ಪ್ರಸ್ತಾಪ ಮಾಡಿರುವುದರಿಂದ ಟೈಮ್​ ಟ್ರಾವೆಲಿಂಗ್​ ಬಗೆಗಿನ ಅನುಮಾನಕ್ಕೆ ಪುಷ್ಠಿ ಸಿಕ್ಕಂತಾಗಿದೆ. ಈ ಟೀಸರ್​ನಲ್ಲಿ ಹೃತಿಕ್​ ರೋಷನ್​ ಅವರು ಮಾಸ್ಕ್​ ಕಿತ್ತು ಎಸೆಯುವ ದೃಶ್ಯ ಇದೆ. ಇಷ್ಟು ವರ್ಷಗಳ ಕಾಲ ಕಾಣಿಸಿಕೊಂಡಿದ್ದ ಕಪ್ಪು ಮಾಸ್ಕ್​ ಬದಲಿಗೆ ನೀಲಿ ಬಣ್ಣದ ಮಾಸ್ಕ್​ ಬಳಸಲಾಗಿರುವುದು ಕೂಡ ಕೌತುಕಕ್ಕೆ ಕಾರಣ ಆಗಿದೆ.

2020ರಲ್ಲಿಯೇ ‘ಕ್ರಿಶ್​ 4’ ಸಿನಿಮಾ ತೆರೆಕಾಣಬೇಕಿತ್ತು. ಆದರೆ ನಿರ್ದೇಶಕ, ಹೃತಿಕ್​ ರೋಷನ್​ ತಂದೆ ರಾಕೇಶ್​ ರೋಷನ್​ ಅವರು ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯಲು ಆರಂಭಿಸಿದ್ದರಿಂದ ಚಿತ್ರದ ಕೆಲಸಗಳು ನಿಂತಿದ್ದವು. ಅಲ್ಲದೆ, ಲಾಕ್​ಡೌನ್​ ಮತ್ತು ಕೊರೊನಾ ವೈರಸ್​ ಕಾರಣದಿಂದಾಗಿಯೂ ವಿಳಂಬ ಆಗಿತ್ತು. ಆದರೆ ಈಗ ಕಾಲ ಕೂಡಿಬಂದಂತೆ ಕಾಣುತ್ತಿದೆ.

ಇದನ್ನೂ ಓದಿ:

ಹೃತಿಕ್​ ಜತೆ ಕೈ ಜೋಡಿಸಲಿದ್ದಾರೆ ದಕ್ಷಿಣ ಭಾರತದ ಹೀರೋ: 150 ಕೋಟಿ ದಾಟಲಿದೆ ಸಿನಿಮಾ ಬಜೆಟ್​!

ಹೃತಿಕ್​ ಜೊತೆ ರೊಮ್ಯಾನ್ಸ್​ ಮಾಡಲಿದ್ದಾರೆ ದೀಪಿಕಾ ಪಡುಕೋಣೆ: ಈ ಚಿತ್ರಕ್ಕೆ ನಿರ್ದೇಶಕರಾರು ಗೊತ್ತಾ?

Published On - 12:53 pm, Fri, 25 June 21

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್