AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಪಮಾ ಪರಮೇಶ್ವರನ್​ ನಕಲಿ ಮಾರ್ಕ್ಸ್​ ಕಾರ್ಡ್​ ವೈರಲ್​; ಈ ಹಗರಣದ ಹಿಂದೆ ಯಾರೆಲ್ಲ ಇದ್ದಾರೆ?

ಇಂಟರ್​ನೆಟ್​ನಲ್ಲಿ ಅನುಪಮಾ ಪರಮೇಶ್ವರ್​ ಫೋಟೋ ಇರುವ ಒಂದು ಮಾರ್ಕ್ಸ್​ ಕಾರ್ಡ್​ ವೈರಲ್​ ಆಗುತ್ತಿದೆ. ಈ ಹಿಂದೆ ನಟಿ ಸನ್ನಿ ಲಿಯೋನ್​ ಅವರ ವಿಚಾರದಲ್ಲಿಯೂ ಹಾಗೇ ಆಗಿತ್ತು.

ಅನುಪಮಾ ಪರಮೇಶ್ವರನ್​ ನಕಲಿ ಮಾರ್ಕ್ಸ್​ ಕಾರ್ಡ್​ ವೈರಲ್​; ಈ ಹಗರಣದ ಹಿಂದೆ ಯಾರೆಲ್ಲ ಇದ್ದಾರೆ?
ಅನುಪಮಾ ಪರಮೇಶ್ವರನ್​
ಮದನ್​ ಕುಮಾರ್​
|

Updated on: Jun 25, 2021 | 9:58 AM

Share

ನಟಿ ಅನುಪಮಾ ಪರಮೇಶ್ವರನ್​ ಅವರು ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇಟ್ಟುಕೊಂಡಿದ್ದಾರೆ. ‘ನಟ ಸಾರ್ವಭೌಮ’ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಜೊತೆ ನಟಿಸುವ ಮೂಲಕ ಅವರು ಕನ್ನಡ ಸಿನಿಪ್ರಿಯರಿಗೂ ಪರಿಚಯ ಆಗಿದ್ದಾರೆ. ಸಿನಿಮಾಗಳ ಕಾರಣದಿಂದ ಅನುಪಮಾ ಆಗಾಗ ಸುದ್ದಿ ಆಗುತ್ತಾರೆ. ಆದರೆ ಅವರೀಗ ನಕಲಿ ಮಾರ್ಕ್ಸ್​ ಕಾರ್ಡ್​ ಕಾರಣದಿಂದ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದಾರೆ. ಆ ನಕಲಿ ಅಂಕಪಟ್ಟಿ ಯಾರದ್ದು? ಅದನ್ನೂ ಅನುಪಮಾಗೂ ಏನು ಸಂಬಂಧ? ಇಲ್ಲಿದೆ ಮಾಹಿತಿ.

ಇಂಟರ್​ನೆಟ್​ನಲ್ಲಿ ಅನುಪಮಾ ಪರಮೇಶ್ವರ್​ ಫೋಟೋ ಇರುವ ಒಂದು ಮಾರ್ಕ್ಸ್​ ಕಾರ್ಡ್​ ವೈರಲ್​ ಆಗುತ್ತಿದೆ. ಬಿಹಾರದ ಟೀಚರ್ಸ್​​ ಎಲಿಜಿಬಲಿಟಿ ಟೆಸ್ಟ್​ನಲ್ಲಿ (STET) ರಿಷಿಕೇಶ್​ ಕುಮಾರ್​ ಎಂಬುದವವರು ಪಾಸ್​ ಆಗಿದ್ದಾರೆ. ತಮ್ಮ ರಿಸಲ್ಟ್​ ನೋಡಲು ಅವರು ಆನ್​ಲೈನ್​ನಲ್ಲಿ ಲಾಗಿನ್​ ಆದಾಗ ಅವರಿಗೆ ತಮ್ಮ ಮಾರ್ಕ್ಸ್​ ಕಾರ್ಡ್​ ನೋಡಿ ಶಾಕ್​ ಆಗಿದೆ. ಅದಕ್ಕೆ ಕಾರಣ ಅನುಪಮಾ ಪರಮೇಶ್ವರನ್​ ಫೋಟೋ.

ಹೌದು, ರಿಷಿಕೇಶ್​ ಕುಮಾರ್​ ಅವರ ಹಾಲ್​ಟಿಕೆಟ್​ ಮತ್ತು ಮಾರ್ಕ್ಸ್​ ಕಾರ್ಡ್​ನಲ್ಲಿ ಅನುಪಮಾ ಪರಮೇಶ್ವರನ್​ ಫೋಟೋ ಕಾಣಿಸಿಕೊಂಡಿದೆ. ಹಾಗಾಗಿ ಇದರಲ್ಲಿ ದೊಡ್ಡ ಹಗರಣ ನಡೆದಿದೆ ಎಂದು ಆರೋಪಿಸಿದ್ದಾರೆ. ಅನುಪಮಾ ಪರಮೇಶ್ವರನ್​ ಫೋಟೋ ಇಲ್ಲಿ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಹಿಂದೆ ನಟಿ ಸನ್ನಿ ಲಿಯೋನ್​ ಅವರ ವಿಚಾರದಲ್ಲಿಯೂ ಹಾಗೇ ಆಗಿತ್ತು. ಕಾಲೇಜಿನ ಪರೀಕ್ಷೆಯೊಂದರ ಫಲಿತಾಂಶದ ಪಟ್ಟಿಯಲ್ಲಿ ಸನ್ನಿ ಲಿಯೋನ್​ ಹೆಸರು ಕಾಣಿಸಿಕೊಂಡು ವೈರಲ್​ ಆಗಿತ್ತು. ಯಾವುದೋ ವಿದ್ಯಾರ್ಥಿ ಮಾಡಿದ ಕಿತಾಪತಿಯಿಂದ ಆ ರೀತಿ ಆಗಿದೆ ಎಂದು ಊಹಿಸಲಾಗಿತ್ತು. ಆದರೆ ಈಗ ಅನುಪಮಾ ಪರಮೇಶ್ವರನ್​ ವಿಚಾರದಲ್ಲಿ ಏನಾಗಿದೆ ಎಂಬುದು ಗೊತ್ತಾಗಬೇಕಿದೆ.

ಇದನ್ನೂ ಓದಿ:

ಪರೀಕ್ಷೆಯ ಮೇಲ್ವಿಚಾರಕರಿಂದ ಅನುಚಿತ ವರ್ತನೆ: ಕ್ರೈಸ್ಟ್ ಯೂನಿವರ್ಸಿಟಿ ವಿದ್ಯಾರ್ಥಿಗಳಿಂದ ಆರೋಪ

SSLC Exam 2021: ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಸಂಬಂಧಿಸಿದ ಮಹತ್ವದ ಮಾರ್ಗಸೂಚಿ ಬಿಡುಗಡೆ: ವಿವರ ಇಲ್ಲಿದೆ

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More