ವಾರ್ನಿಂಗ್ ನಂತರವೂ ಬಿಗ್ ಬಾಸ್ ಹೆಸರು ದುರ್ಬಳಕೆ ಮಾಡಿಕೊಂಡ 11 ಸ್ಪರ್ಧಿಗಳು; ಕಾದಿದೆಯಾ ದೊಡ್ಡ ಶಿಕ್ಷೆ?
ಸೆಕೆಂಡ್ ಇನ್ನಿಂಗ್ಸ್ನಲ್ಲಿ ಮನೆಯ ಸ್ಪರ್ಧಿಗಳಿಗೆ ಬಿಗ್ ಬಾಸ್ ಬಾಕ್ಸಿಂಗ್ ಗ್ಲೌಸ್, ಗುಲಾಬಿ ಹೂವು ಹಾಗೂ ಕಾಣಿಕೆ ಹುಂಡಿ ಕಳುಹಿಸಿದ್ದರು. ಎಲ್ಲಾ ಸ್ಪರ್ಧಿಗಳು ಇದನ್ನು ಏಕೆ ಕಳಿಸಿದ್ದರಬಹುದು ಎಂದು ತಲೆಕೆಡಿಸಿಕೊಂಡಿದ್ದರು.
ಬಿಗ್ ಬಾಸ್ ನೀಡದೇ ಇರುವ ಆದೇಶವನ್ನು ಬಿಗ್ ಬಾಸ್ ನೀಡಿದ್ದಾರೆ ಎಂದು ಹೇಳುವಂತಿಲ್ಲ. ಅದು ಬಿಗ್ ಬಾಸ್ ನಿಯಮ ಮುರಿದಂತೆ. ನೇರವಾಗಿ ಹೇಳುವುದಾದರೆ, ಬಿಗ್ ಬಾಸ್ ಹೆಸರು ದುರ್ಬಳಕೆ ಮಾಡಿಕೊಂಡಂತೆ. ‘ಕನ್ನಡ ಬಿಗ್ ಬಾಸ್ ಸೀಸನ್ 8’ ಮೊದಲ ಇನ್ನಿಂಗ್ಸ್ನಲ್ಲಿ ಇದೇ ವಿಚಾರಕ್ಕೆ ಪ್ರಶಾಂತ್ ಸಂಬರಗಿಗೆ ಸುದೀಪ್ ಎಚ್ಚರಿಕೆ ನೀಡಿದ್ದರು. ಈಗ ರಘು ಗೌಡ ಅವರನ್ನು ಬಿಟ್ಟು ಮನೆ ಮಂದಿ ಎಲ್ಲರೂ ಈ ತಪ್ಪನ್ನು ಮಾಡಿದ್ದಾರೆ.
ಸೆಕೆಂಡ್ ಇನ್ನಿಂಗ್ಸ್ನಲ್ಲಿ ಮನೆಯ ಸ್ಪರ್ಧಿಗಳಿಗೆ ಬಿಗ್ ಬಾಸ್ ಬಾಕ್ಸಿಂಗ್ ಗ್ಲೌಸ್, ಗುಲಾಬಿ ಹೂವು ಹಾಗೂ ಕಾಣಿಕೆ ಹುಂಡಿ ಕಳುಹಿಸಿದ್ದರು. ಎಲ್ಲಾ ಸ್ಪರ್ಧಿಗಳು ಇದನ್ನು ಏಕೆ ಕಳಿಸಿದ್ದರಬಹುದು ಎಂದು ತಲೆಕೆಡಿಸಿಕೊಂಡಿದ್ದರು. ಆ ಸಮಯದಲ್ಲಿ ರಘು ಅಲ್ಲಿರಲಿಲ್ಲ. ಈ ವೇಳೆ ಪ್ರ್ಯಾಂಕ್ ಮಾಡುವ ಆಲೋಚನೆ ಮನೆಮಂದಿಗೆ ಬಂದಿತ್ತು. ಈ ಕಾರಣಕ್ಕೆ ಮನೆ ಮಂದಿ ಎಲ್ಲರೂ ಸೇರಿ ರಘು ಅವರನ್ನು ಬಕ್ರಾ ಮಾಡೋಕೆ ಮುಂದಾದರು.
ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡಿದ್ದಾರೆ. ಅದರ ಅನುಸಾರ, ಈ ಕಾಣಿಕೆ ಹುಂಡಿಯನ್ನು ಯಾರಿಗೆ ಸಹಾಯ ಮಾಡಬೇಕು ಎಂದನಿಸುತ್ತದೆಯೋ ಅವರಿಗೆ ನೀಡಿ. ಗುಲಾಬಿ ಹೂವನ್ನು ಪ್ರೀತಿ ಪಾತ್ರರರಿಗೆ ನೀಡಿ. ಬಾಕ್ಸಿಂಗ್ ಗ್ಲೌಸ್ ನಿಮಗೆ ಯಾರು ಇಷ್ಟವಾಗುವುದಿಲ್ಲವೋ ಅವರಿಗೆ ಕೊಡಿ ಎಂದು ಚಕ್ರವರ್ತಿ ಚಂದ್ರಚೂಡ್ ಲೆಟರ್ ಓದಿದಂತೆ ನಟಿಸಿದರು.
ಈ ಬಗ್ಗೆ ತಿಳಿಯದ ರಘು, ಕಾಣಿಕೆ ಹುಂಡಿಯನ್ನು ಶುಭಾಗೆ, ಗುಲಾಬಿಯನ್ನು ವೈಷ್ಣವಿಗೆ ಹಾಗೂ ಬಾಕ್ಸಿಂಗ್ ಗ್ಲೌಸ್ ಪ್ರಶಾಂತ್ಗೆ ನೀಡಿದರು. ಈ ವೇಳೆ ಪ್ರಶಾಂತ್ ಬೇಕೆಂದೇ ಕಿರಿಕ್ ತೆಗೆದರು. ಆಗ ರಘು ತುಂಬಾನೇ ಗಂಭೀರವಾದರು. ನಂತರ ನಗುತ್ತಲೇ ಮನೆ ಮಂದಿ ಎಲ್ಲರೂ ಪ್ರ್ಯಾಂಕ್ ಮಾಡಿದ್ದೇವೆ ಎಂದು ಸತ್ಯ ಬಿಚ್ಚಿಟ್ಟರು.
ಮೊದಲ ಇನ್ನಿಂಗ್ಸ್ನಲ್ಲಿ ಪ್ರಶಾಂತ್ ಇದೇ ತಪ್ಪನ್ನು ಮಾಡಿದ್ದರು. ಆಗ ಸುದೀಪ್ ಎಚ್ಚರಿಕೆ ನೀಡಿದ್ದರು. ಬಿಗ್ ಬಾಸ್ ಹೇಳದೇ ಇರುವುದನ್ನು ಬಿಗ್ ಬಾಸ್ ಹೇಳಿದ್ದಾರೆ ಎಂದು ಹೇಳಬೇಡಿ. ಆ ರೀತಿ ಮಾಡಿದಾಗ ಸ್ಪರ್ಧಿಗಳು ಅದನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಇದು ಬಿಗ್ ಬಾಸ್ ಹೆಸರು ದುರ್ಬಳಕೆ ಮಾಡಿಕೊಂಡಂತೆ ಎಂದು ಅವರು ಹೇಳಿದ್ದರು. ಈಗ ಮನೆಯ 11 ಸ್ಪರ್ಧಿಗಳು ಈ ತಪ್ಪನ್ನು ಮತ್ತೆ ಮಾಡಿದ್ದು, ಬಿಗ್ ಬಾಸ್ ಯಾವ ರೀತಿಯ ಶಿಕ್ಷೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: 150 ಜೊತೆ ಬಟ್ಟೆಯೊಂದಿಗೆ ಬಿಗ್ ಬಾಸ್ ಮನೆಗೆ ಬಂದಿದ್ದಾರೆ ಪ್ರಶಾಂತ್ ಸಂಬರಗಿ; ಸುದೀಪ್ ರಿಯಾಕ್ಷನ್ ಹೇಗಿತ್ತು?