Sign In

By signing in or creating an account, you agree with Associated Broadcasting Company's Terms & Conditions and Privacy Policy.

Shah Rukh Khan: ‘ನೀವು ನಿರುದ್ಯೋಗಿ ಆಗಿಬಿಟ್ರಾ’ ಎಂದು ನೇರವಾಗಿ ಕೇಳಿದ ನೆಟ್ಟಿಗನಿಗೆ ಶಾರುಖ್​ ಖಾನ್​ ಕೊಟ್ಟ ಉತ್ತರ ಏನು?

1992ರಲ್ಲಿ ‘ದೀವಾನ’ ಸಿನಿಮಾ ಮೂಲಕ ಶಾರುಖ್​ ಖಾನ್​ ಬಾಲಿವುಡ್​ಗೆ ಎಂಟ್ರಿ ನೀಡಿದ್ದರು. ಮೊದಲ ಚಿತ್ರಕ್ಕೆ ಅವರಿಗೆ ಫಿಲ್ಮ್​ಫೇರ್​ ಪ್ರಶಸ್ತಿ ಸಿಕ್ಕಿತ್ತು. ನೋಡನೋಡುತ್ತಿದ್ದಂತೆಯೇ 29 ವರ್ಷ ಕಳೆದುಹೋಗಿದೆ.

Shah Rukh Khan: ‘ನೀವು ನಿರುದ್ಯೋಗಿ ಆಗಿಬಿಟ್ರಾ’ ಎಂದು ನೇರವಾಗಿ ಕೇಳಿದ ನೆಟ್ಟಿಗನಿಗೆ ಶಾರುಖ್​ ಖಾನ್​ ಕೊಟ್ಟ ಉತ್ತರ ಏನು?
ಶಾರುಖ್​ ಖಾನ್​
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: Jun 25, 2021 | 3:31 PM

ನಟ ಶಾರುಖ್​ ಖಾನ್​ ಅವರಿಗೆ ಬಾಲಿವುಡ್​​ನಲ್ಲಿ ದೊಡ್ಡ ಸ್ಟಾರ್​ಗಿರಿ ಇದೆ. ಬಹುಕೋಟಿ ಸಂಭಾವನೆ ಪಡೆಯುವ ಅವರು ಇತ್ತೀಚಿನ ವರ್ಷಗಳಲ್ಲಿ ಗೆಲುವು ಕಂಡಿಲ್ಲ. ಅದನ್ನೇ ಗುರಿಯಾಗಿ ಇಟ್ಟುಕೊಂಡು ಅವರನ್ನು ಅನೇಕರು ಹೀಯಾಳಿಸುತ್ತಿದ್ದಾರೆ. ಹಾಗಂತ ಅದಕ್ಕೆಲ್ಲ ಶಾರುಖ್​ ತುಂಬ ತಲೆ ಕೆಡಿಸಿಕೊಂಡಿಲ್ಲ. ತಮ್ಮ ಮುಂದಿನ ಸಿನಿಮಾ ‘ಪಠಾಣ್​’ ಬಗ್ಗೆ ಅವರು ಗಮನ ಹರಿಸಿದ್ದಾರೆ. ಇನ್ನೊಂದು ಮುಖ್ಯ ವಿಚಾರ ಏನೆಂದರೆ, ಶಾರುಖ್​ ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ (ಜೂ.25) ಬರೋಬ್ಬರಿ 29 ವರ್ಷ ಕಳೆದಿದೆ. ಈ ಸಲುವಾಗಿ ಅವರು ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸಿದ್ದಾರೆ.

1992ರಲ್ಲಿ ‘ದೀವಾನ’ ಸಿನಿಮಾ ಮೂಲಕ ಶಾರುಖ್​ ಖಾನ್​ ಬಾಲಿವುಡ್​ಗೆ ಎಂಟ್ರಿ ನೀಡಿದ್ದರು. ಮೊದಲ ಚಿತ್ರಕ್ಕೆ ಅವರಿಗೆ ಫಿಲ್ಮ್​ಫೇರ್​ ಪ್ರಶಸ್ತಿ ಸಿಕ್ಕಿತ್ತು. ನೋಡನೋಡುತ್ತಿದ್ದಂತೆಯೇ 29 ವರ್ಷ ಕಳೆದುಹೋಗಿದೆ. ಈ ಸಂದರ್ಭದಲ್ಲಿ ಅವರು #AskSrk ಹ್ಯಾಶ್​ಟ್ಯಾಗ್​ ಮೂಲಕ ಟ್ವಿಟರ್​ನಲ್ಲಿ ಅಭಿಮಾನಿಗಳಿಂದ ಪ್ರಶ್ನೆ ಸ್ವೀಕರಿಸಿದ್ದಾರೆ. ಈ ವೇಳೆ ಅವರಿಗೆ ಫ್ಯಾನ್ಸ್​ ವಿವಿಧ ವಿಚಾರಗಳ ಬಗ್ಗೆ ಪ್ರಶ್ನೆ ಕೇಳಿದ್ದಾರೆ.

ಒಬ್ಬ ವ್ಯಕ್ತಿಯಂತೂ ನೇರವಾಗಿ, ‘ಸರ್​ ನೀವು ಕೂಡ ನಮ್ಮ ತರಹ ನಿರುದ್ಯೋಗಿ ಆಗಿದ್ದೀರಾ’ ಎಂದು ಕೇಳಿದ್ದಾನೆ. ಆ ಪ್ರಶ್ನೆಯನ್ನು ತುಂಬ ಶಾರುಖ್​ ಕೂಲ್​ ಆಗಿ ಸ್ವೀಕರಿಸಿದ್ದಾರೆ. ‘ಯಾರು ಏನೂ ಕೆಲಸ ಮಾಡುವುದಿಲ್ಲವೋ ಅವರು ನಿರುದ್ಯೋಗಿ’ ಎನ್ನುವ ಮೂಲಕ ಆ ಟೀಕೆಯನ್ನು ಶಾರುಖ್​ ತಳ್ಳಿ ಹಾಕಿದ್ದಾರೆ.

ಶಾರುಖ್​ ಅವರಿಗೆ ಎದುರಾದ ಕೆಲವು ಪ್ರಶ್ನೆಗಳು ಹೀಗಿವೆ:

ಫ್ಯಾನ್ಸ್​ ಪ್ರಶ್ನೆ: ನಿಮ್ಮ ಸಿನಿಮಾ ಬಗ್ಗೆ ಶೀಘ್ರದಲ್ಲೇ ಅನೌನ್ಸ್​ ಮಾಡುತ್ತೀರಾ?

ಶಾರುಖ್​: ಲೌಡ್​ಸ್ಪೀಕರ್​ನಿಂದ ಅನೌನ್ಸ್​ಮೆಂಟ್​ ಮಾಡಬಹುದು. ಆದರೆ ನನ್ನ ಸಿನಿಮಾಗಳು ನಿಮ್ಮ ಹೃದಯವನ್ನು ಸೌಮ್ಯವಾಗಿ ಪ್ರವೇಶಿಸುವಂತೆ ನಾನು ಮಾಡುತ್ತೇನೆ.

ಫ್ಯಾನ್ಸ್​ ಪ್ರಶ್ನೆ: ಬ್ರೇಕಪ್​ನಿಂದ ಹೇಗೆ ಹೊರಬರಬೇಕು? ಈಗ 15 ನಿಮಿಷದ ಹಿಂದೆ ಬ್ರೇಕಪ್​ ಆಯಿತು..

ಶಾರುಖ್​: ಅದರಿಂದ ಎಂದಿಗೂ ಹೊರಬರಲು ಸಾಧ್ಯವಿಲ್ಲ. ಅದನ್ನು ನೆನಪಾಗಿ ಇಟ್ಟುಕೊಳ್ಳಿ. ದುಃಖದಿಂದ ಕಲಿತ ಪಾಠ ನಿಮ್ಮನ್ನು ಗಟ್ಟಿಯಾಗಿಸುತ್ತದೆ.

ಫ್ಯಾನ್ಸ್​ ಪ್ರಶ್ನೆ: ಜೀವನದಲ್ಲಿ ನೀವು ಈಗ ಯಾವ ಘಟ್ಟದಲ್ಲಿ ಇದ್ದೀರಿ?

ಶಾರುಖ್​: ಬದುಕನ್ನು ಪುನಃ ಕಟ್ಟಿಕೊಳ್ಳುವ ಘಟ್ಟದಲ್ಲಿ.

ಫ್ಯಾನ್ಸ್​ ಪ್ರಶ್ನೆ: ಇಂದಿನ ನೆಗೆಟಿವ್​ ಯುಗದಲ್ಲಿ ನಾವು ಪಾಸಿಟಿವ್​ ಆಗಿರುವುದು ಹೇಗೆ?

ಶಾರುಖ್​: ನೆಗೆಟಿವ್​ ವಿಷಯಗಳಿಗೆ ಕಿವಿಗೊಡಬೇಡಿ. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ.

ಇದನ್ನೂ ಓದಿ:

100 ಕೋಟಿ ಪಡೆಯುವ ಶಾರುಖ್​ ಖಾನ್​ರನ್ನೂ ಮೀರಿಸಿದ ಅಜಯ್​ ದೇವಗನ್​; ಹಾಗಾದ್ರೆ ಅವರ ಸಂಭಾವನೆ ಎಷ್ಟು?

ಮೊಟ್ಟ ಮೊದಲ ಬಾರಿಗೆ ಪ್ರಿಯಾಮಣಿಗೆ ಶಾರುಖ್​ ನೀಡಿದ್ರು 300 ರೂಪಾಯಿ; ಆ ಹಣದ ಪ್ರಾಮುಖ್ಯತೆ ವಿವರಿಸಿದ ನಟಿ

ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ