100 ಕೋಟಿ ಪಡೆಯುವ ಶಾರುಖ್​ ಖಾನ್​ರನ್ನೂ ಮೀರಿಸಿದ ಅಜಯ್​ ದೇವಗನ್​; ಹಾಗಾದ್ರೆ ಅವರ ಸಂಭಾವನೆ ಎಷ್ಟು?

ಶಾರುಖ್​ ಖಾನ್​ ಬಾಲಿವುಡ್​ನಲ್ಲಿ ಸತತ ಸೋಲು ಕಂಡಿದ್ದಾರೆ. ಆದಾಗ್ಯೂ, ಮುಂದಿನ ಚಿತ್ರಕ್ಕೆ ಅವರು 100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿತ್ತು. ಇದು ಅನೇಕರಲ್ಲಿ ಅಚ್ಚರಿ ಮೂಡಿಸಿತ್ತು. ಈಗ ಈ ಸಂಭಾವನೆಯನ್ನೂ ಮೀರಿಸಿ ಅಜಯ್​ ದೇವಗನ್​ ಅಚ್ಚರಿ ಮೂಡಿಸಿದ್ದಾರೆ. ಇವರು ಒಟಿಟಿಗೆ ಕಾಲಿಡುತ್ತಿರುವುದಕ್ಕೆ ಬರೋಬ್ಬರಿ 125 ಕೋಟಿ ರೂ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಹೌದು, ಅಜಯ್​ ದೇವಗನ್​ ‘ರುದ್ರ’ ಹೆಸರಿನ ವೆಬ್​ ಸೀರಿಸ್​ನಲ್ಲಿ ನಟಿಸುತ್ತಿದ್ದಾರೆ. ಇದು ಬ್ರಿಟಿಷ್ ವೆಬ್ ಸಿರೀಸ್ ‘ಲೂಥರ್​’ನ ಹಿಂದಿ ರಿಮೇಕ್ ಆಗಿರಲಿದೆ. ಇದರಲ್ಲಿ […]

100 ಕೋಟಿ ಪಡೆಯುವ ಶಾರುಖ್​ ಖಾನ್​ರನ್ನೂ ಮೀರಿಸಿದ ಅಜಯ್​ ದೇವಗನ್​; ಹಾಗಾದ್ರೆ ಅವರ ಸಂಭಾವನೆ ಎಷ್ಟು?
ರುದ್ರ ವೆಬ್​ ಸರಣಿಯಲ್ಲಿ ಅಜಯ್​ ದೇವಗನ್​
Rajesh Duggumane

|

Jun 18, 2021 | 6:31 PM

ಶಾರುಖ್​ ಖಾನ್​ ಬಾಲಿವುಡ್​ನಲ್ಲಿ ಸತತ ಸೋಲು ಕಂಡಿದ್ದಾರೆ. ಆದಾಗ್ಯೂ, ಮುಂದಿನ ಚಿತ್ರಕ್ಕೆ ಅವರು 100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿತ್ತು. ಇದು ಅನೇಕರಲ್ಲಿ ಅಚ್ಚರಿ ಮೂಡಿಸಿತ್ತು. ಈಗ ಈ ಸಂಭಾವನೆಯನ್ನೂ ಮೀರಿಸಿ ಅಜಯ್​ ದೇವಗನ್​ ಅಚ್ಚರಿ ಮೂಡಿಸಿದ್ದಾರೆ. ಇವರು ಒಟಿಟಿಗೆ ಕಾಲಿಡುತ್ತಿರುವುದಕ್ಕೆ ಬರೋಬ್ಬರಿ 125 ಕೋಟಿ ರೂ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಹೌದು, ಅಜಯ್​ ದೇವಗನ್​ ‘ರುದ್ರ’ ಹೆಸರಿನ ವೆಬ್​ ಸೀರಿಸ್​ನಲ್ಲಿ ನಟಿಸುತ್ತಿದ್ದಾರೆ. ಇದು ಬ್ರಿಟಿಷ್ ವೆಬ್ ಸಿರೀಸ್ ‘ಲೂಥರ್​’ನ ಹಿಂದಿ ರಿಮೇಕ್ ಆಗಿರಲಿದೆ. ಇದರಲ್ಲಿ ಅಜಯ್ ದೇವಗನ್ ಪೊಲೀಸ್ ಅಧಿಕಾರಿ ಪಾತ್ರ ಮಾಡಲಿದ್ದಾರೆ. ಈ ವೆಬ್​ ಸೀರಿಸ್​ ಶೂಟಿಂಗ್​ ಮುಂದಿನ ತಿಂಗಳಿಂದ ಆರಂಭಗೊಳ್ಳಲಿದೆ.

ಅಂದಹಾಗೆ, ಈ ವೆಬ್​ ಸೀರಿಸ್​ ಶೂಟಿಂಗ್​ ಸತತ ಎರಡು ತಿಂಗಳ ಕಾಲ ನಡೆಯಲಿದೆ. ಕೇವಲ 60 ದಿನಗಳಲ್ಲಿ ಇದರ ಶೂಟಿಂಗ್​ ಪೂರ್ಣಗೊಳಿಸಬೇಕು ಎಂಬುದು ಚಿತ್ರತಂಡದ ನಿರ್ಧಾರ. ಕೇವಲ ಎರಡು ತಿಂಗಳಿಗೆ ಅಜಯ್​ ಈ ಮಟ್ಟದ ಗಳಿಕೆ ಮಾಡಿಕೊಳ್ಳುತ್ತಿರುವುದು ಅಚ್ಚರಿ ಮೂಡಿಸಿದೆ.

ಅಜಯ್​ ದೇವಗನ್​ ‘ತಾನ್ಹಾಜಿ’ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಅವರು ಪ್ರತಿ ಸಿನಿಮಾಗೂ ಕಥೆ ಭಿನ್ನವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈಗ ಒಟಿಟಿಗೆ ಕಾಲಿಡುತ್ತಿರುವ ಅವರು ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹಣ ಕೊಡ್ತಿರೋದು ಕೇವಲ ಶೂಟಿಂಗ್​ಗಾಗಿ ಮಾತ್ರವಲ್ಲ. ವೆಬ್​ ಸೀರಿಸ್​ ಪ್ರಚಾರಕ್ಕೆ, ಸೋಶಿಯಲ್​ ಮೀಡಿಯಾ ಪ್ರಮೋಷನ್​, ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳೋದು ಕೂಡ ಆಗಿದೆ ಎನ್ನಲಾಗಿದೆ.

ರಾಜೇಶ್​ ಮಪುಸ್ಕರ್​ ರುದ್ರ ವೆಬ್​ ಸೀರಿಸ್​ ನಿರ್ದೇಶನ ಮಾಡಲಿದ್ದಾರೆ. ಅಪ್ಲಾಸ್​ ಎಂಟರ್​ಟೇನ್​ಮೆಂಟ್​ ಮತ್ತು ಬಿಬಿಸಿ ಸ್ಟುಡಿಯೂ ಇಂಡಿಯಾ ಜೊತೆಯಾಗಿ ಇದನ್ನು ನಿರ್ಮಾಣ ಮಾಡಲಿವೆ. ‘ಬೇಗ ಶೂಟಿಂಗ್​ ಶುರುವಾಗಲಿ ಎಂದು ನಾನು ಕಾಯುತ್ತಿದ್ದೇನೆ. ಪೊಲೀಸ್​ ಪಾತ್ರ ಮಾಡುವುದು ನನಗೆ ಹೊಸದೇನೂ ಅಲ್ಲ. ಆದರೆ ಈ ಬಾರಿ ನಾನು ಮಾಡುತ್ತಿರುವ ಪಾತ್ರ ಹೆಚ್ಚು ತೀಕ್ಷ್ಣ, ಕಠಿಣ ಮತ್ತು ಗಾಢವಾಗಿದೆ’ ಎಂದು ತಮ್ಮ ಪಾತ್ರದ ಬಗ್ಗೆ ಅಜಯ್​ ದೇವಗನ್​ ಬರೆದುಕೊಂಡಿದ್ದರು.

ಇದನ್ನೂ ಓದಿ: ಬಾಲಿವುಡ್​ ಮಂದಿಗೆ ಬಂಗಲೆ ಖರೀದಿಸೋ ಕ್ರೇಜ್​; 60 ಕೋಟಿ ಕೊಟ್ಟು ಅಜಯ್​ ದೇವಗನ್​ ಮನೆ ಖರೀದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada