ಅಭಿಮಾನವನ್ನು ಹೀಗೂ ತೋರಿಸಬಹುದು; ಪ್ರಾಣಿಪ್ರಿಯ ದರ್ಶನ್ ಇದನ್ನು ನೋಡಿದ್ರೆ ಖುಷಿಯಾಗೋದು ಗ್ಯಾರಂಟಿ
ಉತ್ತರ ಕರ್ನಾಟಕದಲ್ಲಿ ಕಾರ ಹುಣ್ಣಿಮೆಯನ್ನು ರೈತರ ಹಬ್ಬ ಎಂದು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಎತ್ತುಗಳನ್ನು ನಾನಾ ರೀತಿಯಲ್ಲಿ ಶೃಂಗರಿಸಲಾಗುತ್ತದೆ. ಈ ವೇಳೆ ಎತ್ತುಗಳ ಮೇಲೆ ದರ್ಶನ್ ಫೋಟೋ ಬರೆಯಲಾಗಿದೆ.

ದರ್ಶನ್ ಅಭಿಮಾನಿ ಬಳಗ ಎಷ್ಟು ದೊಡ್ಡದಾಗಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಅವರಿಗೋಸ್ಕರ ಅಭಿಮಾನಿಗಳು ಏನು ಮಾಡೋಕೂ ರೆಡಿ ಇರುತ್ತಾರೆ. ಈಗಾಗಲೇ ಅನೇಕರು ದರ್ಶನ್ ಮೇಲಿರುವ ಅಭಿಮಾನವನ್ನು ನಾನಾ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಈಗ ದರ್ಶನ್ ಅಭಿಮಾನಿಗಳು ಅವರ ಮೇಲಿರುವ ಪ್ರೀತಿಯನ್ನು ಭಿನ್ನ ರೀತಿಯಲ್ಲಿ ಹೊರ ಹಾಕಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಕಾರ ಹುಣ್ಣಿಮೆಯನ್ನು ರೈತರ ಹಬ್ಬ ಎಂದು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಎತ್ತುಗಳನ್ನು ನಾನಾ ರೀತಿಯಲ್ಲಿ ಶೃಂಗರಿಸಲಾಗುತ್ತದೆ. ಶಮೆವಾಡಿ ಗ್ರಾಮದ ನಾಗರಾಜ್ ಮಾಲಗತ್ತೆ ಎಂಬುವವರು ಎತ್ತಿನ ಮೇಲೆ ದರ್ಶನ್ ಫೋಟೋ ಬಿಡಿಸಿದ್ದಾರೆ. ಅವರ ಗೆಳೆಯರು ಇದಕ್ಕೆ ಸಾತ್ ನೀಡಿದ್ದಾರೆ. ಈ ಮೂಲಕ ಅವರು ದರ್ಶನ್ ಮೇಲಿನ ಪ್ರೀತಿ ವ್ಯಕ್ತಪಡಿಸಿದ್ದಾರೆ. ಇಲ್ಲೊಂದು ವಿಶೇಷತೆ ಇದೆ. ಈ ಎತ್ತುಗಳಿಗೆ ರಾಬರ್ಟ್ ಹಾಗೂ ಸಾರಥಿ ಎಂದು ಹೆಸರಿಡಲಾಗಿದೆ. ಇದೆರಡೂ ದರ್ಶನ್ ನಟನೆಯ ಚಿತ್ರಗಳು.

ದರ್ಶನ್ ಪ್ರಾಣಿ ಪ್ರಿಯರು. ಪ್ರಾಣಿಗಳ ಬಗ್ಗೆ ಅವರು ಸಾಕಷ್ಟು ಕಾಳಜಿ ತೋರುತ್ತಾರೆ. ದರ್ಶನ್ ಇಷ್ಟಪಡುವ ಪ್ರಾಣಿಗಳ ಮೇಲೆಯೇ ಡಿ ಬಾಸ್ ಚಿತ್ರ ಬಿಡಿಸಿ ಇವರು ಅಭಿಮಾನ ಮೆರೆದಿದ್ದಾರೆ. ಈ ಫೋಟೋ ನೋಡಿದರೆ ದರ್ಶನ್ ಖುಷಿಪಡೋದು ಗ್ಯಾರಂಟಿ ಎಂದು ಅಭಿಮಾನಿಗಳು ಮಾತನಾಡಿಕೊಂಡಿದ್ದಾರೆ.
ಇನ್ನು, ಇತ್ತೀಚೆಗೆ ದರ್ಶನ್ ಪ್ರಾಣಿ ದತ್ತು ಪಡೆಯುವಂತೆ ಕೋರಿದ್ದರು. ಕರ್ನಾಟಕ ಸರ್ಕಾರ ಹೇರಿದ್ದ ಲಾಕ್‌ಡೌನ್‌ನಿಂದಾಗಿ ರಾಜ್ಯದ 9 ಮೃಗಾಲಯಗಳೂ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿವೆ. ಇದರಿಂದಾಗಿ ಪ್ರಾಣಿಗಳ ಆಹಾರಕ್ಕೂ ಹಣವಿಲ್ಲದೆ ಪರದಾಡುತ್ತಿರುವ ಸ್ಥಿತಿ ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಬಂದೊದಗಿತ್ತು. ಹೀಗಾಗಿ ಮೃಗಾಲಯದ ಸಂಕಷ್ಟಕ್ಕೆ ನೆರವಾಗಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ನಟ ದರ್ಶನ್ ಅವರಿಗೆ ಮನವಿ ಮಾಡಿದ್ದರು. ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ನಟ ದರ್ಶನ್ ವಿಡಿಯೋ ಮೂಲಕ ಜನರಲ್ಲಿ ನೆರವು ನೀಡುವಂತೆ ತಿಂಗಳ ಹಿಂದೆ ಕೋರಿದ್ದರು. ಇದಕ್ಕೆ ಅದ್ಭುತ ಪ್ರತಿಕ್ರಿಯೆ ದೊರೆತಿದೆ. ಮೃಗಾಲಯಗಳಿಗೆ ಈವರೆಗೆ 2 ಕೋಟಿ ರೂಪಾಯಿ ದೇಣಿಗೆ ಸಂದಾಯವಾಗಿದೆ. 6 ಸಾವಿರಕ್ಕೂ ಹೆಚ್ಚು ಜನರು ಪ್ರಾಣಿ ದತ್ತು ಸ್ವೀಕಾರ ಮಾಡಿದ್ದಾರೆ.
ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ನೀಡಿದ ಆ ಒಂದು ಕರೆಗೆ ಪವಾಡವೇ ನಡೆದು ಹೋಯ್ತು
Published On - 4:35 pm, Fri, 25 June 21




