ಚಾಲೆಂಜಿಂಗ್ ಸ್ಟಾರ್ ದರ್ಶನ್ ನೀಡಿದ ಆ ಒಂದು ಕರೆಗೆ ಪವಾಡವೇ ನಡೆದು ಹೋಯ್ತು
ಕರ್ನಾಟಕ ಸರ್ಕಾರ ಹೇರಿದ್ದ ಲಾಕ್‌ಡೌನ್‌ನಿಂದಾಗಿ ರಾಜ್ಯದ 9 ಮೃಗಾಲಯಗಳೂ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿವೆ. ಇದರಿಂದಾಗಿ ಪ್ರಾಣಿಗಳ ಆಹಾರಕ್ಕೂ ಹಣವಿಲ್ಲದೆ ಪರದಾಡುತ್ತಿರುವ ಸ್ಥಿತಿ ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಬಂದೊದಗಿತ್ತು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ಅವರು ಏನೇ ಮನವಿ ಮಾಡಿದರೂ ಅದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದನೆ ಸಿಗುತ್ತದೆ. ಇದು ಈಗ ಮತ್ತೊಮ್ಮೆ ಸಾಬೀತಾಗಿದೆ. ದರ್ಶನ್ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವಂತೆ ನೀಡಿದ ಕರೆಗೆ ಪವಾಡವೇ ನಡೆದು ಹೋಗಿದೆ.
ಕರ್ನಾಟಕ ಸರ್ಕಾರ ಹೇರಿದ್ದ ಲಾಕ್‌ಡೌನ್‌ನಿಂದಾಗಿ ರಾಜ್ಯದ 9 ಮೃಗಾಲಯಗಳೂ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿವೆ. ಇದರಿಂದಾಗಿ ಪ್ರಾಣಿಗಳ ಆಹಾರಕ್ಕೂ ಹಣವಿಲ್ಲದೆ ಪರದಾಡುತ್ತಿರುವ ಸ್ಥಿತಿ ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಬಂದೊದಗಿತ್ತು. ಹೀಗಾಗಿ ಮೃಗಾಲಯದ ಸಂಕಷ್ಟಕ್ಕೆ ನೆರವಾಗಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ನಟ ದರ್ಶನ್ ಅವರಿಗೆ ಮನವಿ ಮಾಡಿದ್ದರು. ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ನಟ ದರ್ಶನ್ ವಿಡಿಯೋ ಮೂಲಕ ಜನರಲ್ಲಿ ನೆರವು ನೀಡುವಂತೆ ತಿಂಗಳ ಹಿಂದೆ ಕೋರಿದ್ದರು. ಇದಕ್ಕೆ ಅದ್ಭುತ ಪ್ರತಿಕ್ರಿಯೆ ದೊರೆತಿದೆ.
ದರ್ಶನ್ ಕರೆ ನೀಡಿದ ನಂತರದಲ್ಲಿ ಕೆಲವರು ಲವ್ ಬರ್ಡ್ ದತ್ತು ಪಡೆದರೆ, ಇನ್ನೂ ಕೆಲವರು ಕಾಳಿಂಗ ಸರ್ಪ ತೆಗೆದುಕೊಂಡಿದ್ದಾರೆ. ಉಪೇಂದ್ರ ಅವರು ಆನೆಯನ್ನು ದತ್ತು ಪಡೆದರೆ, ನಿರ್ಮಾಪಕಿ ಶೈಲಜಾ ನಾಗ್ ಒಂದು ಹುಲಿಯ ನಿರ್ವಹಣೆ ಖರ್ಚನ್ನು ಭರಿಸಿದ್ದಾರೆ. ಇವರೆಲ್ಲರಿಗೂ ಧನ್ಯವಾದ ಅರ್ಪಿಸುವ ಕೆಲಸವನ್ನು ದರ್ಶನ್ ಮಾಡುತ್ತಿದ್ದಾರೆ.
ಶ್ರೀ ದರ್ಶನ್ ತೂಗುದೀಪರವರು @dasadarshan ಮಾಡಿದ ಮನವಿಯ ನಂತರ ದತ್ತು/ದೇಣಿಗೆ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ. ಕೆಲವೆ ದಿನಗಳಲ್ಲಿ #೨ಕೋಟಿ ತಲುಪಲಿದೆ. ಎಲ್ಲಾ ಪ್ರಾಣಿ ಪ್ರಿಯರಿಗೆ /ದಾನಿಗಳಿಗೆ ಧನ್ಯವಾದಗಳು. @aranya_kfd @ArvindLBJP @STSomashekarMLA @KarnatakaVarthe pic.twitter.com/ej2zjPrfPW
— Zoos of Karnataka (@ZKarnataka) June 22, 2021
ಅಂದಹಾಗೆ, ಮೃಗಾಲಯಗಳಿಗೆ ಈವರಗೆ 2 ಕೋಟಿ ರೂಪಾಯಿ ದೇಣಿಗೆ ಸಂದಾಯವಾಗಿದೆ. 6 ಸಾವಿರಕ್ಕೂ ಹೆಚ್ಚು ಜನರು ಪ್ರಾಣಿ ದತ್ತು ಸ್ವೀಕಾರ ಮಾಡಿದ್ದಾರೆ. ಇದರಿಂದ ಮೃಗಾಲಯ ನಿರ್ವಹಣೆಯ ಹೊರೆ ಕೊಂಚ ಕಡಿಮೆ ಆದಂತಾಗಿದೆ. ಇಂದಿನಿಂದ ಬೆಳಗಾವಿ, ಗದಗ ಹಂಪಿ ಮೃಗಾಲಯ ಓಪನ್ ಆಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ.
ಇದನ್ನೂ ಓದಿ: Darshan: ದರ್ಶನ್ ಹೇಳಿದ ಒಂದೇ ಮಾತಿಗೆ 6 ದಿನದಲ್ಲಿ ಹರಿದು ಬಂತು 1 ಕೋಟಿ ರೂ.! ಯಾವ ಮೃಗಾಲಯಕ್ಕೆ ಎಷ್ಟು ಲಕ್ಷ?
Darshan: ಸಿನಿಮಾ ಥಿಯೇಟರ್ಗೆ ಭವಿಷ್ಯ ಇಲ್ಲವೇ?; ಉದಾಹರಣೆ ಸಹಿತ ವಿವರಿಸಿದ ದರ್ಶನ್
Published On - 2:32 pm, Wed, 23 June 21