AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sushant Singh Rajput: ಸುಶಾಂತ್​ ವಾಸವಾಗಿದ್ದ ಮನೆ ಈಗ ಬಾಡಿಗೆಗೆ ಲಭ್ಯ; ತಿಂಗಳ ಬಾಡಿಗೆ ಅಬ್ಬಬ್ಬಾ ಇಷ್ಟೊಂದಾ?

Sushant Singh Rajput Death Anniversary: ಸಮುದ್ರಕ್ಕೆ ಮುಖ ಮಾಡಿರುವ ಈ ಅಪಾರ್ಟ್​ಮೆಂಟ್​ನ ಎರಡು ಮಹಡಿಗಳನ್ನು ಸುಶಾಂತ್​ ಪಡೆದುಕೊಂಡಿದ್ದರು. ಅವರ ನಿಧನದ ಬಳಿಕ ಅದು ಖಾಲಿ ಉಳಿದುಕೊಂಡಿತ್ತು.

Sushant Singh Rajput: ಸುಶಾಂತ್​ ವಾಸವಾಗಿದ್ದ ಮನೆ ಈಗ ಬಾಡಿಗೆಗೆ ಲಭ್ಯ; ತಿಂಗಳ ಬಾಡಿಗೆ ಅಬ್ಬಬ್ಬಾ ಇಷ್ಟೊಂದಾ?
ಸುಶಾಂತ್​ ಸಿಂಗ್​ ರಜಪೂತ್​
ಮದನ್​ ಕುಮಾರ್​
|

Updated on: Jun 15, 2021 | 1:23 PM

Share

ನಟ ಸುಶಾಂತ್​ ಸಿಂಗ್​ ರಜಪೂತ್​ ನಿಧನರಾಗಿ ಒಂದು ವರ್ಷ ಕಳೆದಿದೆ. ಹಾಗಿದ್ದರೂ ಅಭಿಮಾನಿಗಳು ಅವರನ್ನು ಮರೆತಿಲ್ಲ. ಪ್ರತಿದಿನ ಒಂದಿಲ್ಲೊಂದು ರೀತಿಯಲ್ಲಿ ಅವರನ್ನು ನೆನಪು ಮಾಡಿಕೊಳ್ಳಲಾಗುತ್ತದೆ. ಜೂ.14ರಂದು ಸುಶಾಂತ್​ ಅವರ ಮೊದಲ ವರ್ಷದ ಪುಣ್ಯತಿಥಿ. ಸರಿಯಾಗಿ ಒಂದು ವರ್ಷದ ಹಿಂದೆ ಆ ಕರಾಳ ದಿನದಂದು ಮುಂಬೈನ ತಮ್ಮ ಅಪಾರ್ಟ್​ಮೆಂಟ್​ನಲ್ಲಿ ಸುಶಾಂತ್​ ನಿಧನರಾಗಿದ್ದರು. ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್​ ಮೃತದೇಹ ಪತ್ತೆಯಾಗಿತ್ತು. ಅಚ್ಚರಿ ಎಂದರೆ, ಈಗ ಅದೇ ಮನೆ ಬಾಡಿಗೆಗೆ ಲಭ್ಯವಿದೆ!

ಸಮುದ್ರಕ್ಕೆ ಮುಖ ಮಾಡಿರುವ ಈ ಅಪಾರ್ಟ್​ಮೆಂಟ್​ನ ಎರಡು ಮಹಡಿಗಳನ್ನು ಸುಶಾಂತ್​ ಪಡೆದುಕೊಂಡಿದ್ದರು. ಅವರ ನಿಧನದ ಬಳಿಕ ಅದು ಖಾಲಿ ಉಳಿದುಕೊಂಡಿತ್ತು. ಲಾಕ್​ಡೌನ್​ ಕಾರಣದಿಂದಾಗಿ ಹೊಸ ಬಾಡಿಗೆದಾರರು ಬಂದಿರಲಿಲ್ಲ. ಆ ಎರಡೂ ಫ್ಲೋರ್​ಗೆ ಸುಶಾಂತ್​ ಅವರು ನಾಲ್ಕೂವರೆ ಲಕ್ಷ ರೂ. ಬಾಡಿಗೆ ಕಟ್ಟುತ್ತಿದ್ದರು. 2022ರ ಡಿಸೆಂಬರ್​ ತಿಂಗಳವರೆಗೆ ಅವರು ಅಗ್ರೀಮೆಂಟ್​ ಮಾಡಿಕೊಂಡಿದ್ದರು.

ನಿಧನರಾಗುವುದಕ್ಕೂ ಮುನ್ನ ತನ್ನ ಸ್ನೇಹಿತರು ಹಾಗೂ ಪ್ರೇಯಸಿ ರಿಯಾ ಚಕ್ರವರ್ತಿ ಜೊತೆ ಈ ಮನೆಯಲ್ಲಿ ಸುಶಾಂತ್​ ವಾಸಿಸುತ್ತಿದ್ದರು. ಆಗಾಗ ಅವರ ಅಕ್ಕ, ಭಾವ ಕೂಡ ಬಂದು ಹೋಗುತ್ತಿದ್ದರು. ಸುಶಾಂತ್ ಸಾವಿನ ಸುದ್ದಿ ಹೊರಬಿದ್ದ ನಂತರ ಆ ಅಪಾರ್ಟ್​ಮೆಂಟ್​ ಇಡೀ ಪ್ರಕರಣದ ಕೇಂದ್ರ ಬಿಂದು ಆಗಿತ್ತು. ಪೊಲೀಸ್​ ತನಿಖೆ ನಡೆದಿತ್ತು. ಈಗ ಅದೇ ಮನೆ ಬಾಡಿಗೆಗೆ ಲಭ್ಯವಾಗಿದೆ. ತಿಂಗಳ ಬಾಡಿಗೆ 4 ಲಕ್ಷ ರೂ. ಎಂದು ತಿಳಿದುಬಂದಿದೆ.

ಸುಶಾಂತ್​ ಸಿಂಗ್​ ರಜಪೂತ್​ ಪುಣ್ಯ ಸ್ಮರಣೆ ಅಂಗವಾಗಿ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಅವರಿಗೆ ನಮನ ಸಲ್ಲಿಸಿದ್ದಾರೆ. ಸುಶಾಂತ್​ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಪ್ರೇಯಸಿ ರಿಯಾ ಚಕ್ರವರ್ತಿ ಕೂಡ ದೀರ್ಘವಾದ ಪೋಸ್ಟ್​ ಹಾಕಿಕೊಂಡಿದ್ದಾರೆ. ‘ನೀನು ಬಂದು ನನ್ನನ್ನು ಕರೆದುಕೊಂಡು ಹೋಗುತ್ತೀಯ ಎಂದು ನಾನು ಪ್ರತಿದಿನ ನಿನಗಾಗಿ ಕಾಯುತ್ತಿದ್ದೇನೆ’ ಎಂದು ಅವರು ಇನ್​​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

ಸುಶಾಂತ್​ ಇಹಲೋಕ ತ್ಯಜಿಸಿ ಒಂದು ವರ್ಷ ಕಳೆದರೂ ತನಿಖೆ ಇನ್ನೂ ಜಾರಿಯಲ್ಲಿದೆ. ಸಿಬಿಐ ಅಧಿಕಾರಿಗಳು ಅಂತಿಮ ವರದಿ ಸಲ್ಲಿಸುವುದು ಬಾಕಿ ಇದೆ. ಮಾದಕ ವಸ್ತು ಜಾಲದ ಜೊತೆ ಸುಶಾಂತ್​ ನಂಟು ಹೊಂದಿದ್ದರು ಎಂಬ ಅನುಮಾನ ಕೂಡ ಇರುವುದರಿಂದ ಎನ್​ಸಿಬಿ ಅಧಿಕಾರಿಗಳು ಆ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಸುಶಾಂತ್​ ಅವರ ಹಣಕಾಸಿನ ವ್ಯವಹಾರಗಳ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ಮಾಡಿದೆ.

ಇದನ್ನೂ ಓದಿ:

SSR Death Anniversary: ಸಾಯುವುದಕ್ಕೂ ಮೊದಲು ಎರಡು ಗಂಟೆಗಳ ಕಾಲ ತಮ್ಮ ಹೆಸರನ್ನೇ ಗೂಗಲ್​ ಮಾಡಿದ್ದ ಸುಶಾಂತ್​?

SSR Case: ಸುಶಾಂತ್​ ಸಿಂಗ್​ ರಜಪೂತ್​ ನಿಧನರಾಗಿ ಒಂದು ವರ್ಷ ಕಳೆಯುವುದರೊಳಗೆ ಆದ 30 ಪ್ರಮುಖ ಘಟನೆಗಳೇನು?

ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ
ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ
ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು, ನಿಧಿ ಪತ್ತೆ!
ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು, ನಿಧಿ ಪತ್ತೆ!