ಮಣ್ಣಿನಲ್ಲಿ ಸ್ನಾನ ಮಾಡಿದ ದರ್ಶನ್​ ಸಿನಿಮಾ ಹೀರೋಯಿನ್​; ಇವರು ಯಾರೆಂದು ಗುರುತಿಸಬಲ್ಲಿರಾ?

ಸಾಮಾನ್ಯವಾಗಿ ನಟಿಮಣಿಯರು ಚರ್ಮದ ಆರೋಗ್ಯ ಕಾಪಾಡಿಕೊಳ್ಳೋಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಹೀಗಾಗಿ, ಧೂಳು, ಬಿಸಿಲಿಗೆ ದೇಹ ತಾಗದಂತೆ ನೋಡಿಕೊಳ್ಳುತ್ತಾರೆ. ಆದರೆ, ಊವರ್ಶಿ ಮಣ್ಣಿನಲ್ಲೇ ಸ್ನಾನ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ

ಮಣ್ಣಿನಲ್ಲಿ ಸ್ನಾನ ಮಾಡಿದ ದರ್ಶನ್​ ಸಿನಿಮಾ ಹೀರೋಯಿನ್​; ಇವರು ಯಾರೆಂದು ಗುರುತಿಸಬಲ್ಲಿರಾ?
ಊರ್ವಶಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jun 15, 2021 | 4:11 PM

ಕೆಲವು ವಿಧದ ಮಣ್ಣನ್ನು ಬಳಕೆ ಮಾಡಿಕೊಂಡು ಸ್ನಾನ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬುದು  ಅನೇಕರ ನಂಬಿಕೆ. ಈ ಬಗ್ಗೆ ಆಯುರ್ವೇದದಲ್ಲೂ ಕೂಡ ಹೇಳಲಾಗಿದೆ. ಇದೇ ಕಾರಣಕ್ಕೆ ಅನೇಕರು ಮಣ್ಣಿನ ಥೆರೆಪಿಗೆ ಒಳಗಾಗುತ್ತಾರೆ. ಇದನ್ನು ದರ್ಶನ್​ ನಟನೆಯ ‘ಮಿಸ್ಟರ್​ ಐರಾವತ’ ಚಿತ್ರದ ನಟಿ ಊರ್ವಶಿ ರೌಟೆಲ್ಲಾ ಕೂಡ ಇದನ್ನು ನಂಬಿದ್ದಾರೆ. ಅವರು ಈಗ ಮಣ್ಣಿನಿಂದ ಸ್ನಾನ ಮಾಡಿದ ಫೋಟೋ ಸಾಕಷ್ಟು ವೈರಲ್​ ಆಗಿದೆ.

ಸಾಮಾನ್ಯವಾಗಿ ನಟಿಮಣಿಯರು ಚರ್ಮದ ಆರೋಗ್ಯ ಕಾಪಾಡಿಕೊಳ್ಳೋಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಹೀಗಾಗಿ, ಧೂಳು, ಬಿಸಿಲಿಗೆ ದೇಹ ತಾಗದಂತೆ ನೋಡಿಕೊಳ್ಳುತ್ತಾರೆ. ಆದರೆ, ಊವರ್ಶಿ ಮಣ್ಣಿನಲ್ಲೇ ಸ್ನಾನ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇನ್​ಸ್ಟಾಗ್ರಾಂ ಪೋಸ್ಟ್​ ಹಾಕಿ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ.

ಮಣ್ಣು ನಿಜವಾಗಿಯೂ ಅದ್ಭುತವಾಗಬಹುದು. ಮಣ್ಣಿನ ಸ್ನಾನದಿಂದ ದೇಹದಲ್ಲಿರುವ ಕಲ್ಮಶಗಳೂ ನಾಶವಾಗುತ್ತವೆ. ಚರ್ಮವನ್ನು ಮೃದುಗೊಳ್ಳುತ್ತದೆ, ರಕ್ತ ಸಂಚಾರ ಸುಧಾರಿಸುತ್ತದೆ ಮತ್ತು ನೋವು ನಿವಾರಕವಾಗಿ ಇದು ಕೆಲಸ ಮಾಡುತ್ತದೆ ಎಂದು ಊರ್ವಶಿ ಬರೆದುಕೊಂಡಿದ್ದಾರೆ.

ಲಾಕ್​ಡೌನ್​ ಇದ್ದ ಕಾರಣ ಸೆಲೆಬ್ರಿಟಿಗಳು ಸೇರಿದಂತೆ ಎಲ್ಲರೂ ಮನೆಯಲ್ಲೇ ಇದ್ದರು. ಈ ವೇಳೆ ಫಿಟ್​ನೆಸ್​ ಕಾಯ್ದುಕೊಳ್ಳೋಕೆ ಏನೆಲ್ಲ ಮಾಡಬೇಕೋ ಅದೆಲ್ಲವನ್ನೂ ಮಾಡಿದ್ದರು. ಊರ್ವಶಿ ಕೂಡ ಅಭಿಮಾನಿಗಳಿಗೆ ಫಿಟ್​ನೆಸ್​ ಕಾಯ್ದುಕೊಳ್ಳೋಕೆ ಏನು ಮಾಡಬೇಕು ಎಂಬ ಬಗ್ಗೆ ಟಿಪ್ಸ್​ ನೀಡಿದ್ದರು.

2013ರಲ್ಲಿ ತೆರೆಗೆ ಬಂದ ಹಿಂದಿಯ ‘ಸಿಂಗ್​ ಸಾಬ್​ ದಿ ಗ್ರೇಟ್’​ ಚಿತ್ರದಲ್ಲಿ ಊರ್ವಷಿ ನಟಿಸಿದ್ದರು. ಇದಾದ ನಂತರ 2015ರಲ್ಲಿ ತೆರೆಗೆ ಬಂದ ಕನ್ನಡದ ಮಿಸ್ಟರ್​. ಐರಾವತ ಚಿತ್ರದಲ್ಲಿ ದರ್ಶನ್​ಗೆ ಜತೆಯಾಗಿ ನಟಿಸಿದರು. ಎ.ಪಿ. ಅರ್ಜುನ್​ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ನಂತರ ಅವರು ಕನ್ನಡಕ್ಕೆ ಮರಳಲೇ ಇಲ್ಲ. ಸದ್ಯ, ‘ಬ್ಲ್ಯಾಕ್​ ರೋಸ್​’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಹಿಂದಿ, ತೆಲುಗು ಎರಡೂ ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಹಿಂದಿ ಮತ್ತು ತಮಿಳಲ್ಲಿ ಒಟ್ಟಿಗೆ ಸಿದ್ಧವಾಗುತ್ತಿರುವ ಚಿತ್ರದಲ್ಲೂ ಊರ್ವಶಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: Sanchari Vijay Death: ‘ಕನ್ನಡಿಗರು ಸಂಚಾರಿ ವಿಜಯ್​ ಅವರನ್ನು ಕಡೆಗಣಿಸಿದರು’; ನೋವಿನಿಂದ ಮಾತನಾಡಿದ್ದ ದರ್ಶನ್​

Published On - 3:06 pm, Tue, 15 June 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ