AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sanchari Vijay Death: ‘ಕನ್ನಡಿಗರು ಸಂಚಾರಿ ವಿಜಯ್​ ಅವರನ್ನು ಕಡೆಗಣಿಸಿದರು’; ನೋವಿನಿಂದ ಮಾತನಾಡಿದ್ದ ದರ್ಶನ್​

Sanchari Vijay: ‘ನಾನು ಅವನಲ್ಲ ಅವಳು’ ಸಿನಿಮಾ ನೋಡಿದ ಮೇಲೆ ಅವರ ನಟನೆಗೆ ನಾನು ಫಿದಾ ಆಗಿಹೋದೆ. ತುಂಬ ಒಳ್ಳೆಯ ಪ್ರಯತ್ನ ಮಾಡಿದ್ದಾರೆ ಎಂದು ಸಂಚಾರಿ ವಿಜಯ್​ ಬಗ್ಗೆ ದರ್ಶನ್​ ಮೆಚ್ಚುಗೆ ವ್ಯಕ್ತಪಡಿಸಿದ್ದರು.

Sanchari Vijay Death: ‘ಕನ್ನಡಿಗರು ಸಂಚಾರಿ ವಿಜಯ್​ ಅವರನ್ನು ಕಡೆಗಣಿಸಿದರು’; ನೋವಿನಿಂದ ಮಾತನಾಡಿದ್ದ ದರ್ಶನ್​
ದರ್ಶನ್​ - ಸಂಚಾರಿ ವಿಜಯ್​
ಮದನ್​ ಕುಮಾರ್​
|

Updated on: Jun 15, 2021 | 7:31 AM

Share

ನಟ ಸಂಚಾರಿ ವಿಜಯ್​ ಅವರ ದುರಂತ ಅಂತ್ಯವನ್ನು ಯಾರೂ ಊಹಿಸಿರಲಿಲ್ಲ. ಕನ್ನಡ ಚಿತ್ರರಂಗದಲ್ಲಿ ಅಪ್ರತಿಮ ಕಲಾವಿದನಾಗಿದ್ದ ಅವರು ರಸ್ತೆ ಅಪಘಾತದಿಂದ ನಿಧನರಾಗಿದ್ದು, ತೀವ್ರ ನೋವಿನ ಸಂಗತಿ. ನಿಜಕ್ಕೂ ಸ್ಯಾಂಡಲ್​ವುಡ್​ಗೆ ಇದು ದೊಡ್ಡ ನಷ್ಟ. ‘ನಾನು ಅವನಲ್ಲ ಅವಳು’, ‘ಹರಿವು’ ಮುಂತಾದ ಸಿನಿಮಾಗಳ ಮೂಲಕ ಸಂಚಾರಿ ವಿಜಯ್​ ಅವರು ತಮ್ಮ ಪ್ರತಿಭೆ ಏನೆಂಬುದನ್ನು ಸಾಬೀತು ಪಡಿಸಿದ್ದರು. ಆದರೆ ಅಂಥ ಕಲಾವಿದನಿಗೆ ಕನ್ನಡಿಗರು ಸೂಕ್ತ ಮನ್ನಣೆ ನೀಡಲಿಲ್ಲ ಎಂದು ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಕೂಡ ಹೇಳಿದ್ದರು.

ಅದು ಕನ್ನಡದ ‘ಜೆಂಟಲ್​ ಮನ್​’ ಸಿನಿಮಾದ ಪ್ರೀ ರಿಲೀಸ್​ ಕಾರ್ಯಕ್ರಮದ ವೇದಿಕೆ. ಅಂದು ದರ್ಶನ್​ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಪ್ರಜ್ವಲ್​ ದೇವರಾಜ್​ ನಟನೆಯ ಆ ಸಿನಿಮಾದಲ್ಲಿ ಸಂಚಾರಿ ವಿಜಯ್ ಕೂಡ ಒಂದು ಪ್ರಮುಖ ಪಾತ್ರ ಮಾಡಿದ್ದರು. ಅಂದಿನ ವೇದಿಕೆಯಲ್ಲಿ ವಿಜಯ್​ ಅವರನ್ನು ದರ್ಶನ್​ ಮನಸಾರೆ ಹೊರಗಳಿದ್ದರು. ಅಲ್ಲದೆ, ಕರ್ನಾಟಕದಲ್ಲಿ ವಿಜಯ್​ ಅವರ ಪ್ರತಿಭೆಯನ್ನು ಜನರು ಪ್ರೋತ್ಸಾಹಿಸಿಲ್ಲ ಎಂಬುದನ್ನು ತುಂಬ ಬೇಸರಿಂದ ದರ್ಶನ್​ ಹೇಳಿದ್ದರು.

‘ದಯವಿಟ್ಟು ನಮ್ಮ ಕನ್ನಡದ ಜನರು ಸ್ವಲ್ಪ ಎದ್ದೇಳಿ ಎಂದು ನಾನು ಕೇಳಿಕೊಳ್ಳುತ್ತೇನೆ. ಸಂಚಾರಿ ವಿಜಯ್​ ಅವರಿಂದ ನಾನು ಮಾತು ಆರಂಭಿಸುತ್ತೇನೆ. ಅವರು ಬಹಳ ದೊಡ್ಡ ನಟ. ಯಾಕೆಂದರೆ, ‘ನಾನು ಅವನಲ್ಲ ಅವಳು’ ಸಿನಿಮಾ ನೋಡಿದ ಮೇಲೆ ಅವರ ನಟನೆಗೆ ನಾನು ಫಿದಾ ಆಗಿಹೋದೆ. ತುಂಬ ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಇದೇ ಸಿನಿಮಾ ಪರಭಾಷೆಯಲ್ಲಿ ಬಂದಿದ್ದರೆ ಬೆನ್ನು ತಟ್ಟಿ, ಚಪ್ಪಾಳೆ ಹೊಡೆದು, ದುಡ್ಡು ಕೊಟ್ಟು ಕಳಿಸುತ್ತೇವೆ. ನಿಜವಾಗಿಯೂ ಅಸಹ್ಯ ಎನಿಸುತ್ತದೆ. ಅಕ್ಕಪಕ್ಕದವರನ್ನು ಚೆನ್ನಾಗಿ ನೋಡಿಕೊಂಡು ನಮ್ಮವರನ್ನು ನಾವು ಬಿಟ್ಟುಬಿಡುತ್ತೇವೆ. ತಮಿಳಲ್ಲಿ ಅದು ನೋಡಿದೆ, ತೆಲುಗುನಲ್ಲಿ ಇದು ನೋಡಿದೆ ಎನ್ನುತ್ತಾರೆ ನಮ್ಮ ಜನ. ಕನ್ನಡದಲ್ಲಿ ಬಂದ ಇಂಥ ಒಳ್ಳೆಯ ಸಿನಿಮಾಗಳನ್ನೂ ನೋಡ್ರಯ್ಯ’ ಎಂದು ದರ್ಶನ್​ ಹೇಳಿದ್ದರು.

ಬಿ.ಎಸ್​. ಲಿಂಗದೇವರು ನಿರ್ದೇಶನದ ‘ನಾನು ಅವನಲ್ಲ ಅವಳು’ ಚಿತ್ರದ ನಟನೆಗಾಗಿ ಸಂಚಾರಿ ವಿಜಯ್​ ಅವರಿಗೆ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಅದರಲ್ಲಿ ಅವರು ಮಂಗಳಮುಖಿ ಪಾತ್ರವನ್ನು ತುಂಬ ಅದ್ಭುತವಾಗಿ ನಿಭಾಯಿಸಿದ್ದರು. ಆದರೆ ಆ ಚಿತ್ರ ಹೆಚ್ಚು ಜನರನ್ನು ತಲುಪಲಿಲ್ಲ ಎಂಬ ಬಗ್ಗೆ ಸ್ವತಃ ಸಂಚಾರಿ ವಿಜಯ್​ ಅವರಿಗೂ ಬೇಸರವಿತ್ತು. ಅದನ್ನು ಅವರು ಇತ್ತೀಚೆಗೆ ಫೇಸ್​ಬುಕ್​ ಲೈವ್​ನಲ್ಲಿಯೂ ಹೇಳಿಕೊಂಡಿದ್ದರು.

ಇದನ್ನೂ ಓದಿ:

Sanchari Vijay: ನಟ ಸಂಚಾರಿ ವಿಜಯ್​ಗೆ ಶ್ರದ್ಧಾಂಜಲಿ ಅರ್ಪಿಸಿದ ಸಿಎಂ ಯಡಿಯೂರಪ್ಪ ಮತ್ತು ಸುದೀಪ್​

ಸಂಚಾರಿ ವಿಜಯ್​ ಮಾಡಿದ ಆ ಒಂದು ತಪ್ಪು ನಿರ್ಧಾರ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಯ್ತು

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ