Sanchari Vijay: ಸಂಚಾರಿ ವಿಜಯ್ ದೇಹದಿಂದ ಲಿವರ್, 2 ಕಿಡ್ನಿ, 2 ಕಣ್ಣು, ಹೃದಯದ ವಾಲ್ವ್ ಪಡೆಯುತ್ತಿದ್ದೇವೆ; ವೈದ್ಯರ ಮಾಹಿತಿ
ಶನಿವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಂಚಾರಿ ವಿಜಯ್ ತಲೆಗೆ ಏಟು ಬಿದ್ದಿತ್ತು. ತೀವ್ರವಾಗಿ ಏಟು ಬಿದ್ದ ಹಿನ್ನೆಲೆಯಲ್ಲಿ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು.
ವಿಜಯ್ ಅವರ ಮಿದುಳು ಕೆಲಸ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಇದು ಪರೀಕ್ಷೆಯ ಮೂಲಕ ದೃಢಪಟ್ಟಿದ್ದು, ರಾತ್ರಿ 9:30ಕ್ಕೆ ಅಂಗಾಂಗ ಬೇರ್ಪಡಿಸುವ ಕಾರ್ಯ ಆರಂಭವಾಗಲಿದೆ. ಇದು ಬೆಳಗ್ಗೆವರೆಗೂ ನಡೆಯಲಿದೆ ಎಂದು ಅಪೋಲೋ ಆಸ್ಪತ್ರೆ ವೈದ್ಯ ಡಾ.ಅರುಣ್ ನಾಯ್ಕ್ ಮಾಹಿತಿ ನೀಡಿದ್ದಾರೆ.
ಶನಿವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಂಚಾರಿ ವಿಜಯ್ ತಲೆಗೆ ಏಟು ಬಿದ್ದಿತ್ತು. ತೀವ್ರವಾಗಿ ಏಟು ಬಿದ್ದ ಹಿನ್ನೆಲೆಯಲ್ಲಿ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಹೀಗಾಗಿ, ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಅವರ ಮಿದುಳು ಸಂಪೂರ್ಣವಾಗಿ ಕೆಲಸ ನಿಲ್ಲಿಸಿದೆ. ಈ ಮೂಲಕ ಅವರು ಮೃತಪಟ್ಟಿರುವುದು ಬಹುತೇಕ ಖಚಿತವಾದಂತಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಡಾ.ಅರುಣ್ ನಾಯ್ಕ್, ‘ಸಂಚಾರಿ ವಿಜಯ್ ಬ್ರೈನ್ ಟೆಸ್ಟ್ ಮುಕ್ತಾಯವಾಗಿದೆ. ಎರಡು ಅಪ್ನಿಯಾ ಟೆಸ್ಟ್ನಲ್ಲೂ ಪಾಸಿಟಿವ್ ಬಂದಿವೆ. ಕುಟುಂಬಸ್ಥರ ಬಳಿ ಅಂಗಾಂಗ ದಾನ ಪತ್ರಕ್ಕೆ ಸಹಿ ಪಡೆದಿದ್ದೇವೆ. ರಾತ್ರಿ 9.30ರ ಸುಮಾರಿಗೆ ಅಂಗಾಂಗ ಬೇರ್ಪಡಿಸುವ ಕಾರ್ಯ ಆರಂಭವಾಗಲಿದೆ. ಆನಂತರ ಅಂಗಾಂಗ ಕಸಿ ಮಾಡುವ ಕೆಲಸ ನಡೆಯಲಿದೆ. ಅಂಗಾಂಗ ಕಸಿ ಕಾರ್ಯ ನಾಳೆ ಬೆಳಗ್ಗೆವರೆಗೂ ನಡೆಯಲಿದೆ’ ಎಂದಿದ್ದಾರೆ.
’ಸಂಚಾರಿ ವಿಜಯ್ರವರ ಎಲ್ಲ ಅಂಗಾಂಗ ಸಮರ್ಪಕವಾಗಿದೆ. 1 ಲಿವರ್, 2 ಕಿಡ್ನಿ, 2 ಕಣ್ಣು, ಹೃದಯದ ವಾಲ್ವ್ ಪಡೆಯುತ್ತಿದ್ದೇವೆ. ಮುಂದಿನ ಹೆಲ್ತ್ ಬುಲೆಟಿನ್ನಲ್ಲಿ ಅಪ್ಡೇಟ್ ಮಾಡುತ್ತೇವೆ. ಅಂಗಾಂಗ ಕಸಿ ಮಾಡುವ ಪ್ರಕ್ರಿಯೆ ಬೆಳಗ್ಗೆವರೆಗೆ ನಡೆಯಲಿದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಂಚಾರಿ ವಿಜಯ್ ಬದುಕುಳಿಯುವ ಸಾಧ್ಯತೆ ಕಡಿಮೆ, ಆತನ ಅಂಗಾಂಗ ದಾನ ಮಾಡುತ್ತೇವೆ: ಸಹೋದರ ಸಿದ್ದೇಶ್ ಗದ್ಗದಿತ