SSR Death Anniversary: ಸಾಯುವುದಕ್ಕೂ ಮೊದಲು ಎರಡು ಗಂಟೆಗಳ ಕಾಲ ತಮ್ಮ ಹೆಸರನ್ನೇ ಗೂಗಲ್​ ಮಾಡಿದ್ದ ಸುಶಾಂತ್​?

Rajesh Duggumane

Rajesh Duggumane | Edited By: TV9 SEO

Updated on: Jun 14, 2021 | 9:44 AM

Sushant Singh Rajput: ಸುಶಾಂತ್​ ಸಿಂಗ್​ ಸಾಯುವುದಕ್ಕೂ ಮುನ್ನ ಎರಡು ಗಂಟೆ ತಮ್ಮ ಹೆಸರನ್ನು ಸರ್ಚ್​ ಮಾಡಿದ್ದರಂತೆ. ಯಾವಯಾವ ವೆಬ್​ಸೈಟ್​ಗಳಲ್ಲಿ ತಮ್ಮ ಬಗ್ಗೆ ಯಾವ ರೀತಿಯ ಸುದ್ದಿ ಪ್ರಕಟಿಸಿದ್ದಾರೆ ಎಂಬುದನ್ನು ಅವರು ನೋಡಿದ್ದರಂತೆ.

SSR Death Anniversary: ಸಾಯುವುದಕ್ಕೂ ಮೊದಲು ಎರಡು ಗಂಟೆಗಳ ಕಾಲ ತಮ್ಮ ಹೆಸರನ್ನೇ ಗೂಗಲ್​ ಮಾಡಿದ್ದ ಸುಶಾಂತ್​?
ಸುಶಾಂತ್ ಸಿಂಗ್ ರಜಪೂತ್

ಸುಶಾಂತ್​ ಸಿಂಗ್​ ರಜಪೂತ್​ ನಮ್ಮನ್ನು ಅಗಲಿ ಇಂದಿಗೆ (ಜೂನ್​ 14) ಒಂದು ವರ್ಷ ಕಳೆದಿದೆ. ಲಕ್ಷಾಂತರ ಅಭಿಮಾನಿಗಳನ್ನು ಸುಶಾಂತ್​ ಬಿಟ್ಟು ಹೋಗಿದ್ದಾರೆ. ಅವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ತನಿಖೆ ಪ್ರಗತಿಯಲ್ಲಿದೆ. ಇನ್ನು, ಅವರು ಸಾವಿಗೂ ಮೊದಲು ತಮ್ಮ ಹೆಸರನ್ನೇ ತಾವು ಗೂಗಲ್​ ಮಾಡಿಕೊಂಡಿದ್ದರಂತೆ. ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಸುಶಾಂತ್​ ಸಿಂಗ್ ಅವರ ಶವ ಬಾಂದ್ರಾ ಅಪಾರ್ಟ್​ಮೆಂಟ್​ನಲ್ಲಿ ಜೂನ್​ 14ರಂದು ಪತ್ತೆ ಆಗಿತ್ತು. ಅವರು ಮೃತಪಟ್ಟ ನಂತರದಲ್ಲಿ ಸಾಮಾಜಿಕ ಜಾಲತಾಣದಲ್ಲಿ, ಸುದ್ದಿ ವಾಹಿನಿಗಳಲ್ಲಿ ಸಾಕಷ್ಟು ವಿಚಾರಗಳು ಹರಿದಾಡಿದ್ದವು. ಇದರಲ್ಲಿ ಸುಶಾಂತ್​ ಜೂನ್​ 13ರ ರಾತ್ರಿ ತಮ್ಮ ಹೆಸರನ್ನು ಸರ್ಚ್​ ಮಾಡಿದ್ದರು ಎಂಬುದು ಕೂಡ ಒಂದಾಗಿತ್ತು.

ಸುಶಾಂತ್​ ಸಿಂಗ್​ ಸಾಯುವುದಕ್ಕೂ ಮುನ್ನ ಎರಡು ಗಂಟೆ ತಮ್ಮ ಹೆಸರನ್ನು ಸರ್ಚ್​ ಮಾಡಿದ್ದರಂತೆ. ಯಾವಯಾವ ವೆಬ್​ಸೈಟ್​ಗಳಲ್ಲಿ ತಮ್ಮ ಬಗ್ಗೆ ಯಾವ ರೀತಿಯ ಸುದ್ದಿ ಪ್ರಕಟಿಸಿದ್ದಾರೆ ಎಂಬುದನ್ನು ಅವರು ನೋಡಿದ್ದರಂತೆ. ಹೀಗೊಂದು ವಿಚಾರ ವೈರಲ್​ ಆಗಿತ್ತು. ಆದರೆ, ನಂತರ ಆಗಿದ್ದೇ ಬೇರೆ.

ಸುಶಾಂತ್​ ಸಿಂಗ್​ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವರದ್ದು ಕೊಲೆ ಎನ್ನುವ ಬಗ್ಗೆ ಚರ್ಚೆ ಜೋರಾಯಿತು. ಸುಶಾಂತ್​ ಸಾವಿಗೆ ಬಾಲಿವುಡ್​ ದಿಗ್ಗಜರೇ ಕಾರಣ ಎನ್ನುವ ಮಾತು ಕೇಳಿ ಬಂತು. ಆರಂಭದಲ್ಲಿ ಈ ಪ್ರಕರಣವನ್ನು ಮುಂಬೈ ಪೊಲೀಸರು ತೆಗೆದುಕೊಂಡಿದ್ದರು. ಸದ್ಯ, ಸಿಬಿಐ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.

ಸುಶಾಂತ್​ ಸಿಂಗ್ ರಜಪೂತ್​ ಅವರನ್ನು ಇಂದು ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ನೆನೆಯುತ್ತಿದ್ದಾರೆ. ಅವರ ಫೋಟೋ, ಸಿನಿಮಾದ ಡೈಲಾಗ್​, ಅವರ ನಟನೆಯ ಚಿತ್ರದ ಕ್ಲಿಪ್​ಗಳನ್ನು ಹಂಚಿಕೊಂಡು ಸುಶಾಂತ್​ ಅವರ ನೆನಪನ್ನು ಮಾಡಿಕೊಳ್ಳುತ್ತಿದ್ದಾರೆ. ಸುಶಾಂತ್​ ನಮ್ಮನ್ನು ಬಿಟ್ಟು ಹೋದರೂ, ಅವರ ಒಳ್ಳೆತನ ನಮ್ಮನ್ನೊಂದಿಗೆ ಇರುತ್ತದೆ ಅನ್ನೋದು ಅನೇಕರ ಭಾವನೆ.

ಇದನ್ನೂ ಓದಿ:

ಬಾಲಿವುಡ್​ನಲ್ಲಿ ಸ್ಟಾರ್​ ಆದಮೇಲೂ ಸುಶಾಂತ್​ ಧಾರಾವಾಹಿಯಲ್ಲಿ ನಟಿಸಬೇಕಾಯಿತು; ಕಾರಣ ಏನು?

SSR Case: ಸುಶಾಂತ್​ ಸಿಂಗ್​ ರಜಪೂತ್​ ನಿಧನರಾಗಿ ಒಂದು ವರ್ಷ ಕಳೆಯುವುದರೊಳಗೆ ಆದ 30 ಪ್ರಮುಖ ಘಟನೆಗಳೇನು?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada