Sunny Leone: ಕೇವಲ ಹ್ಯಾಟ್ ಮೂಲಕ ದೇಹ ಮುಚ್ಚಿಕೊಂಡ ಸನ್ನಿ ಲಿಯೋನ್; ವೈರಲ್ ಆಯ್ತು ನಟಿಯ ಹೊಸ ಫೋಟೋ
Dabboo Ratnani's Calendar 2021 : ಈ ಮೊದಲು ಅಭಿಷೇಕ್ ಬಚ್ಚನ್, ವಿದ್ಯಾ ಬಾಲನ್ ಮತ್ತು ವಿಕ್ಕಿ ಕೌಶಲ್ 2021ರ ಕ್ಯಾಲೆಂಡರ್ನ ಭಾಗವಾಗಿದ್ದರು. ಈಗ ಸನ್ನಿ ಲಿಯೋನ್ ಭಾನುವಾರ ಈ ಕ್ಲಬ್ ಸೇರಿಕೊಂಡಿದ್ದು, ಫೋಟೋ ಹಾಕಿ ಸಂಭ್ರಮಿಸಿದ್ದಾರೆ.
ಸೆಲೆಬ್ರಿಟಿಗಳು ಖ್ಯಾತಿ ಹೆಚ್ಚಿಸಿಕೊಳ್ಳೋಕೆ ಹಾಗೂ ಎಲ್ಲರ ಗಮನ ತಮ್ಮೆಡೆ ಸೆಳೆಯೋಕೆ ನಾನಾ ರೀತಿಯ ಫೋಟೋಶೂಟ್ ಮಾಡಿಸುತ್ತಾರೆ. ಕೆಲವೊಂದು ಫೋಟೋಗಳು ಟ್ರೋಲ್ ಆದರೆ, ಇನ್ನೂ ಕೆಲ ಫೋಟೋಗಳು ಮೆಚ್ಚುಗೆ ಗಳಿಸಿಕೊಳ್ಳುತ್ತವೆ. ಈಗ ನಟಿ ಸನ್ನಿ ಲಿಯೋನ್ ಹೊಸ ಫೋಟೋಶೂಟ್ ಒಂದನ್ನು ಮಾಡಿಸಿದ್ದು ಸಾಕಷ್ಟು ವೈರಲ್ ಆಗಿದೆ. ಅಷ್ಟೇ ಅಲ್ಲ, ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ.
ಖ್ಯಾತ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಅವರ 2021ರ ಕ್ಯಾಲೆಂಡರ್ ಶೂಟ್ಗೆ ಸನ್ನಿ ಪೋಸ್ ಕೊಟ್ಟಿದ್ದಾರೆ. ಕಾಲಲ್ಲಿ ಒಂದು ಹೈ ಹೀಲ್ಸ್, ದೇಹ ಮುಚ್ಚಿಕೊಳ್ಳೋಕೆ ಒಂದು ಹ್ಯಾಟ್ ಬಿಟ್ಟರೆ ಬೇರೇ ಯಾವುದೇ ಉಡುಗೆ ಅವರ ದೇಹದ ಮೇಲಿಲ್ಲ. ಈ ಫೋಟೋವನ್ನು ಅವರು ಹಂಚಿಕೊಂಡಿದ್ದು, ಸಾಕಷ್ಟು ವೈರಲ್ ಆಗಿದೆ.
ಈ ಮೊದಲು ಅಭಿಷೇಕ್ ಬಚ್ಚನ್, ವಿದ್ಯಾ ಬಾಲನ್ ಮತ್ತು ವಿಕ್ಕಿ ಕೌಶಲ್ 2021ರ ಕ್ಯಾಲೆಂಡರ್ನ ಭಾಗವಾಗಿದ್ದರು. ಈಗ ಸನ್ನಿ ಲಿಯೋನ್ ಭಾನುವಾರ ಈ ಕ್ಲಬ್ ಸೇರಿಕೊಂಡಿದ್ದು, ಫೋಟೋ ಹಾಕಿ ಸಂಭ್ರಮಿಸಿದ್ದಾರೆ.
‘ಸಮ್ಮರ್ ಬಂತು’ ಎಂದು ಸನ್ನಿ ಬರೆದುಕೊಂಡಿದ್ದಾರೆ. ಇನ್ನು, ಡಬ್ಬೂ ಕೂಡ ಈ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೂ ಮೊದಲು ಡಬ್ಬು ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ, ಸೂರ್ಯನ ಬೆಳಕಿನ ಜತೆ ಸನ್ನಿ ಶೂಟ್ ಎಂದು ಹೇಳಿಕೊಂಡಿದ್ದರು.
ಡಬ್ಬೂ ರತ್ನಾನಿ ಕ್ಯಾಲೆಂಡರ್ನಲ್ಲಿ ಸನ್ನಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲಲ್ಲ. 2020ರಲ್ಲಿಯೂ ಸನ್ನಿ ಡಬ್ಬು ರತ್ನಾನಿ ಕ್ಯಾಲೆಂಡರ್ನಲ್ಲಿ ಕಾಣಿಸಿಕೊಂಡಿದ್ದರು. ಆ ಫೋಟೋ ಕೂಡ ಸಾಕಷ್ಟು ವೈರಲ್ ಆಗಿತ್ತು.
ಇದನ್ನೂ ಓದಿ: ಸನ್ನಿ ಲಿಯೋನ್ ಹುಟ್ಟುಹಬ್ಬ ಆಚರಿಸಿದ ಯುವಕರ ತಂಡ; ಮಂಡ್ಯದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಮಾಜಿ ನೀಲಿ ತಾರೆ
ನಿಮ್ಮ ಪರ್ಸನಲ್ ಮೆಸೇಜ್ ಬೇರೆ ಯಾರೂ ಓದಬಾರದು ಎಂದರೆ ಏನು ಮಾಡ್ಬೇಕು? ಇಲ್ಲಿದೆ ಸನ್ನಿ ಲಿಯೋನ್ ಉಪಾಯ
Published On - 9:52 pm, Sun, 13 June 21