AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಪರ್ಸನಲ್​ ಮೆಸೇಜ್​ ಬೇರೆ ಯಾರೂ ಓದಬಾರದು ಎಂದರೆ ಏನು ಮಾಡ್ಬೇಕು? ಇಲ್ಲಿದೆ ಸನ್ನಿ ಲಿಯೋನ್​ ಉಪಾಯ

Sunny Leone: ತೀರಾ ಖಾಸಗಿಯಾಗಿ ಮೆಸೇಜ್​ಗಳನ್ನು ಮಾಡುವಾಗ ಅದು ಬೇರೆಯವರಿಗೆ ಕಾಣದಂತೆ ಹೇಗೆ ಎಚ್ಚರಿಗೆ ವಹಿಸಬೇಕು ಎಂದು ಸನ್ನಿ ಲಿಯೋನ್​ ಐಡಿಯಾ ಹೇಳಿಕೊಟ್ಟಿದ್ದಾರೆ. ಇದನ್ನು ಬಳಸಿಕೊಳ್ಳುವುದು ಬಿಡುವುದು ಅವರ ಅಭಿಮಾನಿಗಳ ಆಯ್ಕೆಗೆ ಬಿಟ್ಟ ವಿಚಾರ.

ನಿಮ್ಮ ಪರ್ಸನಲ್​ ಮೆಸೇಜ್​ ಬೇರೆ ಯಾರೂ ಓದಬಾರದು ಎಂದರೆ ಏನು ಮಾಡ್ಬೇಕು? ಇಲ್ಲಿದೆ ಸನ್ನಿ ಲಿಯೋನ್​ ಉಪಾಯ
ಸನ್ನಿ ಲಿಯೋನ್
ಮದನ್​ ಕುಮಾರ್​
|

Updated on: Jun 01, 2021 | 8:06 AM

Share

ಇದು ಸ್ಮಾರ್ಟ್​ಫೋನ್​ ಯುಗ. ಮೊಬೈಲ್​​ ಒಳಗೆ ಎಲ್ಲರೂ ಮುಳುಗಿರುತ್ತಾರೆ. ಸದಾ ಕಾಲ ಮೆಸೇಜ್​ ಮಾಡುತ್ತ ಕುಳಿತುಕೊಳ್ಳುವವರೇ ಹೆಚ್ಚು. ತಮ್ಮ ಆಪ್ತರಿಗೆ ಕಳಿಸಿದ ಸೀಕ್ರೆಟ್​​ ಸಂದೇಶಗಳು ಯಾರ ಕಣ್ಣಿಗೂ ಕಾಣದಿರಲಿ ಎಂದು ನಾನಾ ಬಗೆಯ ಸೆಕ್ಯೂರಿಟಿ ಪಾಸ್​ವರ್ಡ್​ಗಳನ್ನು ಬಳಸಲಾಗುತ್ತದೆ. ಆದರೂ ಕೂಡ ಕೆಲವೊಮ್ಮೆ ನಮ್ಮ ಖಾಸಗಿ ಮೆಸೇಜ್​ಗಳನ್ನು ಬೇರೆಯವರು ಎಲ್ಲಿ ಕದ್ದು ಓದುತ್ತಾರೋ ಎಂಬ ಭಯ ಇದ್ದೇ ಇರುತ್ತದೆ. ಅಂಥವರಿಗಾಗಿ ನಟಿ ಸನ್ನಿ ಲಿಯೋನ್​ ಒಂದು ಉಪಾಯ ಹೇಳಿದ್ದಾರೆ.

ಬಾಲಿವುಡ್​ ಮಾತ್ರವಲ್ಲದೆ ಭಾರತದ ಇತರೆ ಭಾಷೆಗಳ ಚಿತ್ರರಂಗದಿಂದಲೂ ಸನ್ನಿ ಲಿಯೋನ್​ಗೆ ಅವಕಾಶಗಳಿಗೆ. ಈ ಮಾಜಿ ನೀಲಿ ತಾರೆ ಸೋಶಿಯಲ್​ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆ್ಯಕ್ಟೀವ್​ ಆಗಿರುತ್ತಾರೆ. ಪ್ರತಿ ದಿನ ಏನಾದರೊಂದು ಪೋಸ್ಟ್​ ಮಾಡುವ ಮೂಲಕ ಅಭಿಮಾನಿಗಳ ಜೊತೆ ಅವರು ಸಂಪರ್ಕದಲ್ಲಿ ಇರಲು ಬಯಸುತ್ತಾರೆ. ಇತ್ತೀಚೆಗೆ ಅವರು ಪರ್ಸನಲ್​​ ಮೆಸೇಜ್​ಗಳ ಪ್ರೈವೆಸಿ ಬಗ್ಗೆ ಒಂದು ವಿಚಾರ ಹಂಚಿಕೊಂಡಿದ್ದಾರೆ.

ಬಗೆಬಗೆಯ ಲಾಕ್​ ಹಾಕಿರುವಾಗ ಯಾರೂ ಕೂಡ ನಿಮ್ಮ ಮೊಬೈಲ್​ನಲ್ಲಿ ಇರುವ ಖಾಸಗಿ ಮೆಸೇಜ್​ಗಳನ್ನು ಓದುಲು ಸಾಧ್ಯವಿಲ್ಲ. ಆದರೆ, ಮೆಸೇಜ್​ ಟೈಪ್​ ಮಾಡುತ್ತಿರುವಾಗಲೇ ಯಾರಾದರೂ ನಿಮ್ಮ ಪಕ್ಕದಲ್ಲಿ ಕುಳಿತಿದ್ದರೆ ಅವರು ಇಣುಕಿ ನೋಡಿದಾಗ ಖಂಡಿತವಾಗಿಯೂ ನೀವು ಮಾಡುತ್ತಿರುವ ಮೆಸೇಜ್​ ಏನು ಮತ್ತು ಯಾರಿಗೆ ಎಂಬುದು ಗೊತ್ತಾಗುತ್ತದೆ. ಇಂಥ ಸಂದರ್ಭದಲ್ಲಿ ಏನು ಮಾಡಬೇಕು. ಮರ ಹತ್ತಿ ಕುಳಿತುಕೊಳ್ಳಬೇಕು! ಹೌದು, ಸದ್ಯಕ್ಕೆ ಸನ್ನಿ ಲಿಯೋನ್​ ಕಂಡುಕೊಂಡಿರುವ ಉಪಾಯ ಇದು.

ಸನ್ನಿ ಲಿಯೋನ್​ ಸುತ್ತಮುತ್ತ ಸದಾ ಕಾಲ ಜನರು ಇದ್ದೇ ಇರುತ್ತಾರೆ. ಸಹಾಯಕರು, ಮೇಕಪ್​​ ಕಲಾವಿರು, ಕೇಶವಿನ್ಯಾಸರು ಪಕ್ಕದಲ್ಲೇ ಇರುತ್ತಾರೆ. ಪತಿ ಡೇನಿಯಲ್ ವೆಬರ್​ ಕೂಡ ಇರುತ್ತಾರೆ. ಇಂಥ ಸಂದರ್ಭದಲ್ಲಿ ಮೊಬೈಲ್​ನಲ್ಲಿ ಗುಟ್ಟಾದ ಮೆಸೇಜ್​ ಟೈಪ್​ ಮಾಡುತ್ತಿದರೆ ಖಂಡಿತವಾಗಿಯೂ ಪಕ್ಕದಲ್ಲಿ ಇರುವವರಿಗೆ ಕಾಣುತ್ತದೆ. ಅದಕ್ಕಾಗಿ ಸನ್ನಿ ಲಿಯೋನ್​ ಮರವೇರಿ ಕುಳಿತು ಮೆಸೇಜ್​ ಮಾಡುತ್ತಾರಂತೆ!

View this post on Instagram

A post shared by Sunny Leone (@sunnyleone)

ಆ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸನ್ನಿ ಲಿಯೋನ್​ ಟಿಪ್ಸ್​ ನೀಡಿದ್ದಾರೆ. ‘ಮೆಸೇಜ್​ನಲ್ಲಿ ನೀವು ಮಾಡುವ ಮಾತುಕತೆ ಬೇರೆಯವರಿಗೆ ಗೊತ್ತಾಗಬಾರದು ಎಂದು ಎಲ್ಲ ಪ್ರಯತ್ನಗಳನ್ನು ಮಾಡಿದಾಗ ಹೀಗಾಗುತ್ತದೆ’ ಎಂದು ಅವರು ಈ ಫೋಟೋಗೆ ಕ್ಯಾಪ್ಷನ್​ ನೀಡಿದ್ದಾರೆ. ಸನ್ನಿ ಕೊಟ್ಟ ಐಡಿಯಾವನ್ನು ಬಳಸಿಕೊಳ್ಳುವುದು ಬಿಡುವುದು ಅವರ ಅಭಿಮಾನಿಗಳ ಆಯ್ಕೆಗೆ ಬಿಟ್ಟ ವಿಚಾರ.

ಇದನ್ನೂ ಓದಿ:

Sunny Leone: ಸನ್ನಿ ಲಿಯೋನ್​ಗೆ ಬಟ್ಟೆ ತೊಡಿಸಲು ಕಷ್ಟಪಟ್ಟ ಆರ್ಮಿ; ವಿಡಿಯೋ ವೈರಲ್​

ಸನ್ನಿ ಲಿಯೋನ್​ ಸಂಸಾರಕ್ಕೆ 10 ವರ್ಷ; ದಾಂಪತ್ಯದ 5 ಸೀಕ್ರೆಟ್​ ತೆರೆದಿಟ್ಟ ಮಾದಕ ನಟಿ

ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಜನರ ಆತಂಕ
ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಜನರ ಆತಂಕ
ಕ್ರಾಂತಿವೀರ ದಂಥ ಬಿರುದುಗಳೆಲ್ಲ ನನಗೆ ಬೇಡ ಎಂದು ನಗುತ್ತಾ ಹೇಳಿದ ರಾಜಣ್ಣ
ಕ್ರಾಂತಿವೀರ ದಂಥ ಬಿರುದುಗಳೆಲ್ಲ ನನಗೆ ಬೇಡ ಎಂದು ನಗುತ್ತಾ ಹೇಳಿದ ರಾಜಣ್ಣ
ಕರ್ನಾಟಕದ ಎಲ್ಲ ಸಂಸದರಿಗೆ ಇದು ಸ್ವಾಭಿಮಾನದ ಪ್ರಶ್ನೆ: ಶಿವಕುಮಾರ್
ಕರ್ನಾಟಕದ ಎಲ್ಲ ಸಂಸದರಿಗೆ ಇದು ಸ್ವಾಭಿಮಾನದ ಪ್ರಶ್ನೆ: ಶಿವಕುಮಾರ್