ಬಿಗ್​ ಬಾಸ್​ ಮನೆ ಒಳಗೆ ಹೋಗಲಿದ್ದಾರೆ ಸುಶಾಂತ್​ ಸಿಂಗ್​ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ?

ಬಿಗ್​ ಬಾಸ್​ ಮನೆ ಒಳಗೆ ಹೋಗಲಿದ್ದಾರೆ ಸುಶಾಂತ್​ ಸಿಂಗ್​ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ?
ರಿಯಾ ಮತ್ತು ಸುಶಾಂತ್

ಸುಶಾಂತ್​ ಸಿಂಗ್ ಸಾವಿನ ನಂತರದಲ್ಲಿ ರಿಯಾ ಚಕ್ರವರ್ತಿ ಹೆಸರು ಮುನ್ನೆಲೆಗೆ ಬಂದಿತ್ತು. ರಿಯಾ ಹಾಗೂ ಸುಶಾಂತ್​ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇವರ ನಡುವಿನ ಪ್ರೀತಿ ಮುರಿದು ಬಿದ್ದಿತ್ತು

Rajesh Duggumane

|

May 31, 2021 | 10:17 PM

ಯಶಸ್ವಿಯಾಗಿ 14 ಸೀಸನ್​ಗಳನ್ನು ಪೂರ್ಣಗೊಳಿಸಿರುವ ಹಿಂದಿ ಬಿಗ್​ ಬಾಸ್​ ಈಗ 15ನೇ ಸೀಸನ್​ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೊವಿಡ್​ ನಿಯಂತ್ರಣಕ್ಕೆ ಬಂದ ಮೇಲೆ ಬಿಗ್​ ಬಾಸ್​ 15ನೇ ಸೀಸನ್​ ಆರಂಭಗೊಳ್ಳಲಿದೆಯಂತೆ. ಅಚ್ಚರಿ ವಿಚಾರ ಎಂದರೆ, ಸುಶಾಂತ್​ ಸಿಂಗ್ ಪ್ರೇಯಸಿ ಆಗಿದ್ದ ರಿಯಾ ಚಕ್ರವರ್ತಿ ಬಿಗ್​ ಬಾಸ್​ ಮನೆಗೆ ಹೋಗಲಿದ್ದಾರೆ ಎನ್ನುವ ಗುಲ್ಲು ಜೋರಾಗಿದೆ.

ಸುಶಾಂತ್​ ಸಿಂಗ್ ಸಾವಿನ ನಂತರದಲ್ಲಿ ರಿಯಾ ಚಕ್ರವರ್ತಿ ಹೆಸರು ಮುನ್ನೆಲೆಗೆ ಬಂದಿತ್ತು. ರಿಯಾ ಹಾಗೂ ಸುಶಾಂತ್​ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇವರ ನಡುವಿನ ಪ್ರೀತಿ ಮುರಿದು ಬಿದ್ದಿತ್ತು. ಸುಶಾಂತ್​ ಸಾವಿನ ಪ್ರಕರಣದ ತನಿಖೆ ವೇಳೆ ರಿಯಾ ವಿಚಾರಣೆ ಮಾಡಲಾಗಿತ್ತು. ನಂತರ ಅವರನ್ನು ಅರೆಸ್ಟ್​ ಕೂಡ ಮಾಡಲಾಗಿತ್ತು. ಈಗ ಅವರು, ಜೈಲಿನಿಂದ ಜಾಮೀನು ಪಡೆದು ಹೊರ ಬಂದಿದ್ದಾರೆ. ಬಿಗ್​ ಬಾಸ್ ತಂಡದವರು ರಿಯಾ ಅವರನ್ನು ಅಪ್ರೋಚ್​ ಮಾಡಿದ್ದಾರೆ ಎನ್ನಲಾಗಿದೆ.

ರಿಯಾ ಚಕ್ರವರ್ತಿ ವೈಯಕ್ತಿಕ ಜೀವನದ ಬಗ್ಗೆ ಜನರಿಗೆ ಆಸಕ್ತಿ ಇದೆ. ಸುಶಾಂತ್ ಸಿಂಗ್​ ಜತೆ ಅವರು ಹೇಗಿದ್ದರು ಎನ್ನುವ ಬಗ್ಗೆಯೂ ಅನೇಕರಿಗೆ ಕುತೂಹಲವಿದೆ. ಒಂದೊಮ್ಮೆ ರಿಯಾ ಬಿಗ್​ ಬಾಸ್​ ಮನೆ ಒಳಗೆ ಹೋದರೆ ಒಂದಷ್ಟು ವಿಚಾರಗಳು ಹೊರ ಬರಲಿವೆ. ಕುತೂಹಲದಿಂದ ಜನರು ಕೂಡ ಶೋ ವೀಕ್ಷಣೆ ಮಾಡುವ ಸಾಧ್ಯತೆ ಹೆಚ್ಚು. ಈ ಕಾರಣಕ್ಕೆ ರಿಯಾ ಅವರಿಗೆ ಮೊದಲ ಪ್ರಿಫರೆನ್ಸ್​ ನೀಡಲಾಗುತ್ತಿದೆ.

ಇನ್ನು, ರಿಯಾ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನುವ ಕುತೂಹಲ ಕೂಡ ಇದೆ. ಅವರು ಜೈಲಿಗೆ ಹೋಗಿ ಬಂದ ನಂತರದಲ್ಲಿ ಸ್ವಲ್ಪ ಕುಗ್ಗಿದಂತೆ ಕಾಣುತ್ತಿದ್ದಾರೆ. ಹೀಗಾಗಿ, ಮಾಧ್ಯಮಗಳ ಎದುರು ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಈ ಕಾರಣಕ್ಕೆ ಅವರು ಆಫರ್​ ರಿಜೆಕ್ಟ್​ ಮಾಡಬಹುದು ಅಥವಾ ಬಿಗ್​ ಬಾಸ್​ ಮನೆ ಒಳಗೆ ತೆರಳಿ ತಾವು ಯಾರು ಎಂಬುದನ್ನು ಸಾಬೀತು ಮಾಡಿಕೊಳ್ಳಲು ಶೋನಲ್ಲಿ ಭಾಗವಹಿಸೋಕೆ ಒಪ್ಪಿಕೊಳ್ಳಬಹುದು.

ರಿಯಾ ಮಾತ್ರವಲ್ಲದೆ, ಸಾಕಷ್ಟು ಜನರ ಹೆಸರು ಕೇಳಿ ಬರುತ್ತಿದೆ. ಇವರಲ್ಲಿ ಯಾರ್ಯಾರು ಬಿಗ್​ ಬಾಸ್​ ಮನೆ ಒಳಗೆ ಹೋಗುತ್ತಾರೆ ಎನ್ನುವ ಕುತೂಹಲ ಸದ್ಯದ್ದು. ಬಿಗ್​ ಬಾಸ್​ 14ನೇ ಸೀಸನ್​ ಈ ವರ್ಷದ ಆರಂಭದಲ್ಲಿ ಕೊನೆಯಾಗಿತ್ತು. ಹಿಂದಿ ಸೀಸನ್​ 15 ಅಕ್ಟೋಬರ್​ನಲ್ಲಿ ಆರಂಭವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಸುಶಾಂತ್ ಸಿಂಗ್ ಸಾವಿನ ಬಳಿಕವೂ ಪ್ರೀತಿ ಮೇಲಿನ ನಂಬಿಕೆ ಕಡಿಮೆಯಾಗಿಲ್ಲ; ಅಚ್ಚರಿಯ ಹೇಳಿಕೆ ನೀಡಿದ ರಿಯಾ ಚಕ್ರವರ್ತಿ

Follow us on

Related Stories

Most Read Stories

Click on your DTH Provider to Add TV9 Kannada