‘ಪದ್ಮಾವತ್ ಸಿನಿಮಾಗಾದ ಗತಿಯೇ ನಿಮಗೂ ಆಗುತ್ತದೆ’; ಚಿತ್ರದ ಟೈಟಲ್ ಬದಲಿಸಲು ಅಕ್ಷಯ್ ಕುಮಾರ್ಗೆ ಬಂತು ಬೆದರಿಕೆ
ಪೃಥ್ವಿರಾಜ್ ಚೌಹಾಣ್ ಅವರ ಜೀವನ ಆಧರಿಸಿ ಯಶ್ ರಾಜ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಸಿನಿಮಾ ಮಾಡುತ್ತಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಪೃಥ್ವಿರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಸಿನಿಮಾ ತೆರೆಕಾಣವುದಕ್ಕೆ ಕರಣಿ ಸೇನಾದವರು ಸಾಕಷ್ಟು ಅಡಚಣೆ ಉಂಟು ಮಾಡಿದ್ದರು. ಸಿನಿಮಾದಲ್ಲಿ ಇಲ್ಲ ಸಲ್ಲದ್ದನ್ನು ತೋರಿಸಲಾಗಿದೆ ಎಂದು ಆರೋಪಿಸಿ ‘ಪದ್ಮವತಿ’ ಎಂದಿದ್ದ ಸಿನಿಮಾ ಹೆಸರನ್ನು ‘ಪದ್ಮಾವತ್’ ಎಂದು ಬದಲಾಯಿಸಿದ್ದರು. ಅಷ್ಟೇ ಅಲ್ಲ, ನಾಲ್ಕೈದು ರಾಜ್ಯಗಳಲ್ಲಿ ಸಿನಿಮಾ ತೆರೆಕಾಣದೆ ಇರಲು ಕಾರಣರಾಗಿದ್ದರು. ಈಗ ಅಕ್ಷಯ್ ಕುಮಾರ್ ನಟನೆಯ ‘ಪೃಥ್ವಿರಾಜ್’ ಸಿನಿಮಾದ ಮೇಲೆ ಕರಣಿ ಸೇನಾ ಕಣ್ಣು ಬಿದ್ದಿದೆ. ಷರತ್ತಿಗೆ ಒಪ್ಪದಿದ್ದರೆ ‘ಪದ್ಮಾವತ್’ ಸಿನಿಮಾಗಾದ ಗತಿಯೇ ನಿಮಗೂ ಆಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.
ಪೃಥ್ವಿರಾಜ್ ಚೌಹಾಣ್ ಅವರ ಜೀವನ ಆಧರಿಸಿ ಯಶ್ ರಾಜ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಸಿನಿಮಾ ಮಾಡುತ್ತಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಪೃಥ್ವಿರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾಡೆಲ್ ಮಾನುಷಿ ಚಿಲ್ಲರ್ ಅವರು ಸನ್ಯೋಗಿತಾ ಪಾತ್ರ ನಿರ್ವಹಿಸುತ್ತಿದ್ದು, ಈ ಚಿತ್ರದ ಮೂಲಕ ಅವರು ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. ಈಗ ಸಿನಿಮಾ ಟೈಟಲ್ ಬದಲಿಸುವಂತೆ ಕರಣಿ ಸೇನಾದವರು ಪಟ್ಟು ಹಿಡಿದಿದ್ದಾರೆ. ಮೂರು ಷರತ್ತುಗಳನ್ನು ವಿಧಿಸಿರುವ ಅವರು, ಇದಕ್ಕೆ ಒಪ್ಪಲೇ ಬೇಕು ಎಂದು ಹೇಳಿದ್ದಾರೆ.
ಸಿನಿಮಾ ಬಗ್ಗೆ ಇರುವ ಷರತ್ತುಗಳೇನು ಎಂಬುದನ್ನು ಕರಣಿ ಸೇನಾ ಸ್ಪಷ್ಟವಾಗಿ ಹೇಳಿದೆ. ಷರತ್ತು ಒಂದು, ಈ ಚಿತ್ರ ತೆರೆಕಾಣುವುದಕ್ಕೂ ಮೊದಲು ಅದನ್ನು ನಮಗೆ ತೋರಿಸಬೇಕು. ಎರಡು, ಈ ಸಿನಿಮಾವನ್ನು ರಜಪೂತ್ ಸಮಾಜದವರಿಗೂ ಪ್ರದರ್ಶಿಸಬೇಕು. ಮೂರನೇ ಷರತ್ತು, ಸಿನಿಮಾದ ಶೀರ್ಷಿಕೆಯನ್ನು, ‘ವೀರ ಯೋಧ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್’ ಎಂಬುದಾಗಿ ಬದಲಾಯಿಸಬೇಕು ಎನ್ನುವ ಆಗ್ರಹ ಇಟ್ಟಿದ್ದಾರೆ.
View this post on Instagram
2019ರಲ್ಲಿ ಅಕ್ಷಯ್ ಕುಮಾರ್ ಈ ಸಿನಿಮಾವನ್ನು ಘೋಷಿಸಿದ್ದರು. 2020ರ ದೀಪಾವಳಿಗೆ ಸಿನಿಮಾ ತೆರೆಕಾಣಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಚಿತ್ರದ ಕೆಲಸಗಳು ವಿಳಂಬವಾಗಿದ್ದವು. ಸಿನಿಮಾದ ರಿಲೀಸ್ ದಿನಾಂಕವನ್ನು ಚಿತ್ರತಂಡ ಇನ್ನಷ್ಟೇ ಘೋಷಣೆ ಮಾಡಬೇಕಿದೆ.
ಇದನ್ನೂ ಓದಿ: Akshay Kumar: ಅಕ್ಷಯ್ ಕುಮಾರ್ ಕಡೆಯಿಂದ ದೊರಕಿತು ಮತ್ತೊಂದು ದೊಡ್ಡ ಸಹಾಯ
Published On - 9:03 pm, Mon, 31 May 21