ಎಸ್ಪಿಬಿ ಜನ್ಮದಿನದ ವಿಶೇಷ; ಸ್ಟಾರ್ ಸಿಂಗರ್ಗಳಿಂದ 12 ಗಂಟೆ ನಾನ್ ಸ್ಟಾಪ್ ಹಾಡು, ನೀವು ಕೇಳಬಹುದು
ಎಸ್ಪಿ ಬಾಲಸುಬ್ರಹ್ಮಣ್ಯಮ್ ಅವರ ಜನ್ಮದಿನದ ಪ್ರಯುಕ್ತ ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಹಲವು ನಿರ್ದೇಶಕರು, ನಟರು, ನಿರ್ಮಾಪಕರು, ಸಂಗೀತ ನಿರ್ದೇಶಕರು, ಬರಹಗಾರರು ಪಾಲ್ಗೊಳ್ಳುತ್ತಿದ್ದಾರೆ.
ಜೂನ್ 4 ಅಪ್ರತಿಮ ಹಾಡುಗಾರ ಎಸ್ಪಿ ಬಾಲಸುಬ್ರಹ್ಮಣ್ಯಮ್ ಅವರ ಜನ್ಮದಿನ. ಸುಮಧುರ ಕಂಠದ ಮೂಲಕ ಕನ್ನಡ ಸೇರಿದಂತೆ ನಾನಾ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ ಎಸ್ಪಿಬಿ ಇಲ್ಲದೆ ಅಭಿಮಾನಿಗಳು ಇದೇ ಮೊದಲ ಬಾರಿ ಅವರ ಜನ್ಮದಿನವನ್ನು ಆಚರಣೆ ಮಾಡುತ್ತಿದ್ದಾರೆ. ಈ ವಿಶೇಷ ದಿನದಂದು ನಾನಾ ಗಾಯಕರು ಸತತ 12 ಗಂಟೆಗಳ ಕಾಲ ಎಸ್ಪಿಬಿ ಹಾಡನ್ನು ಹಾಡಲಿದ್ದಾರೆ.
ಕೊವಿಡ್ 19 ಎರಡನೇ ಅಲೆ ಜೋರಾಗಿಲ್ಲದೆ ಹೋಗಿದ್ದರೆ ಬಹುಶಃ ಅಭಿಮಾನಿಗಳು ಅಥವಾ ಬಾಲಸುಬ್ರಹ್ಮಣ್ಯಮ್ ಶಿಶ್ಯಂದಿರು ಕಾರ್ಯಕ್ರಮ ಆಯೋಜನೆ ಮಾಡಿ, ನಾನಾ ಗಾಯಕರ ಮೂಲಕ ಹಾಡುಗಳನ್ನು ಹಾಡಿಸುತ್ತಿದ್ದರೇನೋ. ಆದರೆ, ಈಗ ಅದು ಸಾಧ್ಯವಾಗುತ್ತಿಲ್ಲ. ಕೊವಿಡ್ 19 ಇರುವ ಕಾರಣಕ್ಕೆ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ಹೀಗಾಗಿ, ಜನರು ಆನ್ಲೈನ್ ಮೊರೆ ಹೋಗಿದ್ದಾರೆ.
ತೆಲುಗಿನ ಖ್ಯಾತ ಸಂಗೀತ ಸಂಯೋಜಕ ಆರ್ಪಿ ಪಟ್ನಾಯಕ್ ಅವರು ಈಗ 12 ಗಂಟೆಗಳ ಕಾರ್ಯಕ್ರಮ ಒಂದನ್ನು ಆಯೋಜನೆ ಮಾಡಿದ್ದಾರೆ. ಜೂನ್ ನಾಲ್ಕರಂದು ಮುಂಜಾನೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಎಸ್ಪಿಬಿ ಹಾಡುಗಳನ್ನು ಹಾಡಲಾಗುತ್ತಿದೆ. ಫಿಲ್ಮ್ ಇಂಡಸ್ಟ್ರಿಯ ಅನೇಕರು ಇವರಿಗೆ ಸಹಕಾರ ನೀಡುತ್ತಿದ್ದಾರೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಹಲವು ನಿರ್ದೇಶಕರು, ನಟರು, ನಿರ್ಮಾಪಕರು, ಸಂಗೀತ ನಿರ್ದೇಶಕರು, ಬರಹಗಾರರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಂದಹಾಗೆ, ಶೀಘ್ರದಲ್ಲೇ ಅವರು ಯೂಟ್ಯೂಬ್ ಲಿಂಕ್ ಅನ್ನು ತಮ್ಮ ಸಾಮಾಜಿಕ ಖಾತೆಯಲ್ಲಿ ಶೇರ್ ಮಾಡಲಿದ್ದಾರೆ.
ಎಸ್ಪಿಬಿ ಅವರಿಗೆ ಕಳೆದ ಆಗಸ್ಟ್ನಲ್ಲಿ ಕೊವಿಡ್ ಕಾಣಿಸಿಕೊಂಡಿತ್ತು. ಹೀಗಾಗಿ, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರು ಒಂದು ತಿಂಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲೇ ಇದ್ದರು. ಅವರಿಗೆ ಚಿಕಿತ್ಸೆ ನೀಡಿದರೂ ಯಶಸ್ಸಿಯಾಗಿರಲಿಲ್ಲ. ಸೆಪ್ಟೆಂಬರ್ 25ರಂದು ಅವರು ನಿಧನರಾದರು.
ಇದನ್ನೂ ಓದಿ: National Film Awards 2019: ‘ಅಕ್ಷಿ’ ಸಿನಿಮಾದಲ್ಲಿ ಎಸ್ಪಿಬಿ ಹಾಡಿದ ಕೊನೇ ಹಾಡು; ಇದು ಅಂತಿಂಥ ಸಾಂಗ್ ಅಲ್ಲವೇ ಅಲ್ಲ!