ಸೋನು ಸೂದ್​ ಪ್ರಧಾನಮಂತ್ರಿ ಅಭ್ಯರ್ಥಿ? ಮುಂದಿನ ಚುನಾವಣೆ ಬಗ್ಗೆ ಮಾತನಾಡಿದ ಸ್ಟಾರ್​ ನಟಿ

ಸೋನು ಸೂದ್​ ಪ್ರಧಾನಮಂತ್ರಿ ಅಭ್ಯರ್ಥಿ? ಮುಂದಿನ ಚುನಾವಣೆ ಬಗ್ಗೆ ಮಾತನಾಡಿದ ಸ್ಟಾರ್​ ನಟಿ
ಸೋನು ಸೂದ್​ - ಹುಮಾ ಖುರೇಶಿ

Prime Minister: ಕಳೆದ ವರ್ಷ ಕೊರೊನಾ ವೈರಸ್​ ಕಾಟ ಶುರುವಾದಾಗಿನಿಂದಲೂ ಸೋನು ಸೂದ್​ ಅವರು ಜನರ ಸಹಾಯಕ್ಕೆ ನಿಂತಿದ್ದಾರೆ. ಇಂದಿಗೂ ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ. ಯಾವುದೇ ರಾಜಕಾರಣಿಯೂ ಮಾಡದಂತಹ ಸೇವೆಯನ್ನು ಅವರು ಮಾಡುತ್ತಿದ್ದಾರೆ.

Madan Kumar

|

Jun 01, 2021 | 8:43 AM

ನಟ ಸೋನು ಸೂದ್​ ಮಾಡುತ್ತಿರುವ ಜನಪರ ಕೆಲಸಗಳ ಪಟ್ಟಿ ತುಂಬ ದೊಡ್ಡದಿದೆ. ಸಿನಿಮಾಗಳಿಗಿಂತಲೂ ಹೆಚ್ಚಾಗಿ ಅವರೀಗ ಸಮಾಜಸೇವೆಯಿಂದಲೇ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರಿಂದ ಸಹಾಯ ಪಡೆದ ಅನೇಕರು ಅವರನ್ನು ದೇವರ ರೀತಿ ನೋಡುತ್ತಿದ್ದಾರೆ. ಹಾಗಾಗಿ ಜನರ ಮನಸ್ಸಿನಲ್ಲಿ ಸೋನು ಸೂದ್​ಗೆ ದೊಡ್ಡ ಸ್ಥಾನ ಸಿಕ್ಕಿದೆ. ಈ ಜನಬಲದ ಆಧಾರದ ಮೇಲೆ ಅವರೇನಾದರೂ ಚುನಾವಣೆಗೆ ಸ್ಪರ್ಧಿಸಿದರೆ ಏನಾಗಬಹುದು? ಈ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು. ಅದಕ್ಕೂ ಮುನ್ನವೇ ಅವರು ಪ್ರಧಾನಮಂತ್ರಿ ಅಭ್ಯರ್ಥಿ ಆಗಬೇಕು ಎಂದು ಬಾಲಿವುಡ್​ ನಟಿ ಹುಮಾ ಖುರೇಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್​ನ​ ಅನೇಕ ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆಗಿರುವ ಹುಮಾ ಖುರೇಶಿ ಅವರು ಇತ್ತೀಚೆಗೆ ಒಂದು ಮಾಧ್ಯಮಕ್ಕೆ ಸಂದರ್ಶನ ನೀಡಿದ್ದಾರೆ. ಆಗ ಅವರಿಗೆ ಒಂದು ಪ್ರಶ್ನೆ ಎದುರಾಯಿತು. ಬಾಲಿವುಡ್​ನ ಯಾವ ಕಲಾವಿದರು ರಾಜಕೀಯಕ್ಕೆ ಎಂಟ್ರಿ ನೀಡಬೇಕು ಎಂದು ಕೇಳಿದ ಪ್ರಶ್ನೆಗೆ ಹುಮಾ ಖುರೇಶಿ ಅವರು ಒಂದು ಕ್ಷಣವೂ ಯೋಚಿಸದೇ ಸೋನು ಸೂದ್​ ಹೆಸರು ಹೇಳಿದರು. ಅಲ್ಲದೇ, ಸೋನು ಸೂದ್​ ಬಗ್ಗೆ ತಮಗೆ ಇರುವ ಅಭಿಪ್ರಾಯವನ್ನು ಅವರು ಹಂಚಿಕೊಂಡರು.

‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಟ ಸೋನು ಸೂದ್​ ಅವರು ಚುನಾವಣೆಗೆ ನಿಲ್ಲಬೇಕು. ನಾವೆಲ್ಲರೂ ವೋಟ್​ ಹಾಕುತ್ತೇವೆ. ಅದರಲ್ಲೂ ನಾನು ಖಂಡಿತವಾಗಿ ಅವರಿಗೆ ವೋಟ್​ ಹಾಕುತ್ತೇನೆ. ಸೋನು ಸೂದ್​ ನಮ್ಮ ದೇಶದ ಪ್ರಧಾನ ಮಂತ್ರಿ ಆಗಬೇಕು’ ಎಂದು ಹುಮಾ ಖುರೇಶಿ ಹಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪರ-ವಿರೋಧದ ಚರ್ಚೆ ಕೂಡ ಈಗತಾನೇ ಶುರು ಆಗಿದೆ.

ಕಳೆದ ವರ್ಷ ಕೊರೊನಾ ವೈರಸ್​ ಕಾಟ ಶುರುವಾದಾಗಿನಿಂದಲೂ ಸೋನು ಸೂದ್​ ಅವರು ಜನರ ಸಹಾಯಕ್ಕೆ ನಿಂತಿದ್ದಾರೆ. ಇಂದಿಗೂ ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ. ಯಾವುದೇ ರಾಜಕಾರಣಿಯೂ ಮಾಡದಂತಹ ಸೇವೆಯನ್ನು ಅವರು ಮಾಡುತ್ತಿದ್ದಾರೆ. ಎಷ್ಟೋ ಜನರಿಗೆ ಆಸ್ಪತ್ರೆಯಲ್ಲಿ ಬೆಡ್​ ವ್ಯವಸ್ಥೆ ಮಾಡಿಸಿದ್ದಾರೆ. ಅಗತ್ಯ ಇರುವವರಿಗೆ ಆಕ್ಸಿಜನ್​ ಸಿಲಿಂಡರ್​ ತಲುಪಿಸಿದ್ದಾರೆ. ಕಷ್ಟದಲ್ಲಿರುವ ಎಷ್ಟೋ ಜನರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಅವರ ಸೂದ್​ ಚಾರಿಟಿ ಫೌಂಡೇಶನ್​ ಮೂಲಕ ಪ್ರತಿದಿನ ಸಾವಿರಾರು ಜನರಿಗೆ ಉಚಿತವಾಗಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಇಷ್ಟೆಲ್ಲ ಕೆಲಸ ಮಾಡುತ್ತಿರುವ ಅವರು ಪೂರ್ಣಾವಧಿ ರಾಜಕೀಯಕ್ಕೆ ಬಂದರೆ ನಿಜಕ್ಕೂ ಜನರಿಗೆ ಒಳಿತಾಗುತ್ತದೆ ಎಂಬುದು ಹಲವರು ಅಭಿಪ್ರಾಯ.

ಇದನ್ನೂ ಓದಿ:

ಕೊವಿಡ್​ನಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳ ಸಹಾಯಕ್ಕೆ ಮುಂದಾದ ಸೋನು ಸೂದ್

ಮಟನ್​ ಶಾಪ್​ಗೆ ಸೋನು ಸೂದ್​ ಹೆಸರು; ‘ನಾನು ಸಸ್ಯಾಹಾರಿ, ಹೀಗಾಗಿ ನಿಮಗೆ ತರಕಾರಿ ಅಂಗಡಿ ಇಟ್ಟುಕೊಡ್ತೀನಿ’ ಎಂದ ನಟ

Follow us on

Related Stories

Most Read Stories

Click on your DTH Provider to Add TV9 Kannada