ಮಟನ್​ ಶಾಪ್​ಗೆ ಸೋನು ಸೂದ್​ ಹೆಸರು; ‘ನಾನು ಸಸ್ಯಾಹಾರಿ, ಹೀಗಾಗಿ ನಿಮಗೆ ತರಕಾರಿ ಅಂಗಡಿ ಇಟ್ಟುಕೊಡ್ತೀನಿ’ ಎಂದ ನಟ

ಸೋನು ಸೂದ್​ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಕೆಲವರಿಗೆ ಆಮ್ಲಜನಕ ನೀಡಿದರೆ, ಇನ್ನೂ ಕೆಲವರಿಗೆ ಬೆಡ್​ ವ್ಯವಸ್ಥೆ ಮಾಡಿದ್ದಾರೆ. ಸಾಕಷ್ಟು ಜನರ ಆಸ್ಪತ್ರೆ ಖರ್ಚನ್ನು ಸ್ವತಃ ಸೋನು ಸೂದ್​ ಅವರೇ ನೋಡಿಕೊಂಡಿದ್ದಾರೆ.

ಮಟನ್​ ಶಾಪ್​ಗೆ ಸೋನು ಸೂದ್​ ಹೆಸರು; ‘ನಾನು ಸಸ್ಯಾಹಾರಿ, ಹೀಗಾಗಿ ನಿಮಗೆ ತರಕಾರಿ ಅಂಗಡಿ ಇಟ್ಟುಕೊಡ್ತೀನಿ’ ಎಂದ ನಟ
ಸೋನು ಸೂದ್
Follow us
ರಾಜೇಶ್ ದುಗ್ಗುಮನೆ
|

Updated on: May 30, 2021 | 5:02 PM

ಕೊವಿಡ್​ ಮೊದಲನೇ ಅಲೆ ಕಾಣಿಸಿಕೊಂಡಾಗ ಸಹಾಯಕ್ಕೆ ಮುಂದಾಗಿದ್ದ ಸೋನು ಸೂದ್​ ಅದನ್ನು ಈವರೆಗೆ ನಿಲ್ಲಿಸಿಲ್ಲ. ಟ್ವೀಟ್​ ಮಾಡುತ್ತಿದ್ದಂತೆ, ಕಷ್ಟ ಎಂದವರಿಗೆ ಸಹಾಯ ಸಿಗುತ್ತಿದೆ. ಇದೇ ಕಾರಣಕ್ಕೆ ಅವರ ಅಭಿಮಾನಿ ಬಳಗ ದೊಡ್ಡದಾಗಿದೆ. ಸಾಕಷ್ಟು ಶಾಪ್​ಗಳಿಗೆ ಸೋನು ಸೂದ್​ ಹೆಸರಿಡಲಾಗುತ್ತಿದೆ. ಈಗ ಮಟನ್​ ಅಂಗಡಿಗೆ ಸೋನು ಸೂದ್ ಹೆಸರಿಡಲಾಗಿದೆ. ಸೋನು ಸೂದ್​ ಸಸ್ಯಾಹಾರಿ. ಈ ಕಾರಣಕ್ಕೆ ಅಂಗಡಿ ಮಾಲೀಕನಿಗೆ ತರಕಾರಿ ಅಂಗಡಿ ಇಟ್ಟುಕೊಡುವ ಆಲೋಚನೆ ಮಾಡಿದ್ದಾರೆ.

ಸೋನು ಸೂದ್​ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಕೆಲವರಿಗೆ ಆಮ್ಲಜನಕ ನೀಡಿದರೆ, ಇನ್ನೂ ಕೆಲವರಿಗೆ ಬೆಡ್​ ವ್ಯವಸ್ಥೆ ಮಾಡಿದ್ದಾರೆ. ಸಾಕಷ್ಟು ಜನರ ಆಸ್ಪತ್ರೆ ಖರ್ಚನ್ನು ಸ್ವತಃ ಸೋನು ಸೂದ್​ ಅವರೇ ನೋಡಿಕೊಂಡಿದ್ದಾರೆ. ಹೀಗಾಗಿ, ಜನರಿಗೆ ಸೋನು ಸೂದ್​ ಮೇಲೆ ಭಕ್ತಿ ಭಾವನೆ ಮೂಡಿದೆ. ಕೆಲವರು ಅವರನ್ನು ಪೂಜಿಸುತ್ತಿದ್ದಾರೆ.

ಸೋನು ಸೂದ್​ ಅವರಿಂದ ಸಹಾಯ ಪಡೆದ ಅನೇಕರು ಋಣ ಹೇಗೆ ತೀರಿಸಬೇಕು ಎಂಬುದು ತಿಳಿಯದೇ ತಮ್ಮ ಮಕ್ಕಳಿಗೆ ಅವರದೇ ಹೆಸರಿಟ್ಟಿದ್ದಾರೆ. ಇನ್ನೂ ಕೆಲವರು ಅಂಗಡಿ ಹೆಸರನ್ನು ಬದಲಾಯಿಸಿದ್ದಾರೆ. ಅದೇ ರೀತಿ ತೆಲಂಗಾಣದ ಕರೀಮ್ ​ನಗರದಲ್ಲಿ ಮಟನ್​ ಶಾಪ್​ಗೆ ಸೋನು ಸೂದ್​ ಹೆಸರಿಡಲಾಗಿದೆ. ಇದು ಸೋನು ಸೂದ್​ ಗಮನಕ್ಕೆ ಬಂದಿದೆ. ಈ ಬಗ್ಗೆ ಅವರು ಅಚ್ಚರಿಯ ಟ್ವೀಟ್ ಒಂದನ್ನು ಮಾಡಿದ್ದಾರೆ.

ಸೋನು ಸೂದ್ ಸಸ್ಯಾಹಾರಿ. ಪ್ರಾಣಿಗಳನ್ನು ಕಡಿದು ತಿನ್ನುವುದನ್ನು ಅವರು ವಿರೋಧಿಸುತ್ತಾರೆ. ಬಾಲಿವುಡ್​ನ ಸಾಕಷ್ಟು ಸ್ಟಾರ್​ಗಳು ಇದೇ ಹಾದಿ ಹಿಡಿದಿದ್ದಾರೆ. ಹೀಗಾಗಿ ಮಟನ್​ ಶಾಪ್​ಗೆ ತಮ್ಮ ಹೆಸರು ಇಟ್ಟಿರೋದು ಸೋನು ಸೂದ್​ಗೆ ಅಷ್ಟಾಗಿ ಹಿಡಿಸಿದಂತೆ ಕಾಣಿಸಿಲ್ಲ. ಹೀಗಾಗಿ, ಅವರು ಇದಕ್ಕೆ ಉತ್ತರ ನೀಡಿದ್ದಾರೆ.

ನಾನು ಸಸ್ಯಾಹಾರಿ. ಹೀಗಿರುವಾಗ ನನ್ನ ಹೆಸರಲ್ಲಿ ಮಟನ್​ ಶಾಪ್​​? ಸಸ್ಯಾಹಾರಕ್ಕೆ ಸಂಬಂಧಿಸಿದ ಅಂಗಡಿ ತೆರೆಯಲು ನಾನು ಅವರಿಗೆ ಸಹಾಯ ಮಾಡಲೇ ಎಂದು ಪ್ರಶ್ನೆ ಮಾಡಿದ್ದಾರೆ. ಈ ಟ್ವೀಟ್ ಸಾಕಷ್ಟು ವೈರಲ್​​ ಆಗಿದೆ.

 ಇದನ್ನೂ ಓದಿ: ಸೋನು ಸೂದ್​ ಮಾತ್ರವಲ್ಲ, ಕರುನಾಡಿಗೆ ಕೊವಿಡ್ ಕಷ್ಟದಲ್ಲಿ ನೆರವಾದ ಇನ್ನಿಬ್ಬರು ಬಾಲಿವುಡ್​ ಸ್ಟಾರ್​ಗಳು

ಅಂದು ರಿಜೆಕ್ಟ್​ ಆಗಿದ್ದ ಮ್ಯಾಗಜಿನ್​ನಲ್ಲೇ ಸೋನು ಸೂದ್ ಫೋಟೋ; ಇದಲ್ಲವೇ ಯಶಸ್ಸು?

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್