ರಾಧೆ ತೆರೆಕಂಡ ಬೆನ್ನಲ್ಲೇ ಒಟಿಟಿಗೆ ಗುಡ್ ಬೈ ಹೇಳಿದ ಸಲ್ಮಾನ್ ಖಾನ್
ಈದ್ ಹಬ್ಬದ ಪ್ರಯುಕ್ತ ಮೇ 13ರಂದು ರಾಧೆ ತೆರೆಗೆ ಬಂದಿತ್ತು. ಒಟಿಟಿಯಲ್ಲಿ ರಿಲೀಸ್ ಆದ ಕಾರಣಕ್ಕೆ ಸಿನಿಮಾದ ಎಚ್ಡಿ ಪ್ರತಿಯೇ ಆನ್ಲೈನ್ನಲ್ಲಿ ಸೋರಿಕೆ ಆಗಿತ್ತು.
ಸಲ್ಮಾನ್ ಖಾನ್ ನಟನೆಯ ‘ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಚಿತ್ರ ಸಾಕಷ್ಟು ವಿಚಾರಗಳಿಂದ ಚರ್ಚೆಗೆ ಕಾರಣವಾಗಿತ್ತು. ಸಿನಿಮಾ ವಿಮರ್ಶೆಯಲ್ಲಿ ಸೋತಿದ್ದು ಒಂದು ಕಡೆಯಾದರೆ, ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಚಿತ್ರದ ಪೈರಸಿ ಕಾಪಿ ಹೊರ ಬಂದಿತ್ತು. ಇದು ಸಿನಿಮಾಗೆ ದೊಡ್ಡ ಹೊಡೆತ ನೀಡಿತ್ತು. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಲ್ಮಾನ್ ಖಾನ್ ಒಟಿಟಿಗೆ ಗುಡ್ ಬೈ ಹೇಳುವ ನಿರ್ಧಾರಕ್ಕೆ ಬಂದಿದ್ದಾರೆ.
ಈದ್ ಹಬ್ಬದ ಪ್ರಯುಕ್ತ ಮೇ 13ರಂದು ರಾಧೆ ತೆರೆಗೆ ಬಂದಿತ್ತು. ಜೀ5ನ ಜೀ ಪ್ಲೆಕ್ಸ್ನಲ್ಲಿ ಜನರು ಸಿನಿಮಾ ನೋಡಿ ಸಾಕಷ್ಟು ಟ್ರೋಲ್ ಮಾಡಿದ್ದರು. ಅಲ್ಲದೆ, ಒಟಿಟಿಯಲ್ಲಿ ರಿಲೀಸ್ ಆದ ಕಾರಣಕ್ಕೆ ಸಿನಿಮಾದ ಎಚ್ಡಿ ಪ್ರತಿಯೇ ಆನ್ಲೈನ್ನಲ್ಲಿ ಸೋರಿಕೆ ಆಗಿತ್ತು. ಹೀಗಾಗಿ, ಜನರು ದುಡ್ಡುಕೊಟ್ಟು ನೋಡುವುದನ್ನು ಬಿಟ್ಟು ಕಾಳಸಂತೆಯಲ್ಲಿ ಸಿಗುವ ಪೈರಸಿ ಕಾಪಿಯನ್ನೇ ತೆಗೆದುಕೊಂಡು ನೋಡಿದ್ದರು.
ಚಿತ್ರಮಂದಿರದಲ್ಲಿ ರಿಲೀಸ್ ಆದ ಮಾತ್ರಕ್ಕೆ ಸಿನಿಮಾ ಪೈರಸಿ ಆಗುವುದಿಲ್ಲ ಎಂದಲ್ಲ. ಸಿನಿಮಾ ಪೈರಸಿ ಆದರೂ ಮೊದಲ ದಿನ ಎಚ್ಡಿ ಪ್ರಿಂಟ್ ಸಿಗುವುದಿಲ್ಲ. ಹೀಗಾಗಿ, ಸಿನಿಮಾ ಲೀಕ್ ಆದ ಹೊರತಾಗಿಯೂ ಒಂದಷ್ಟು ಮಂದಿಯಾದರೂ ಚಿತ್ರಮಂದಿರದತ್ತ ಹೆಜ್ಜೆ ಹಾಕಿ ಸಿನಿಮಾ ನೋಡುತ್ತಾರೆ. ಹೀಗಾಗಿ, ಒಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡಿ ತಪ್ಪು ನಿರ್ಧಾರ ಮಾಡಿದೆ ಎನ್ನುವ ಭಾವನೆ ಸಲ್ಲುಗೆ ಕಾಡಿದೆ.
ಇಷ್ಟಕ್ಕೆ ನಿಂತಿಲ್ಲ. ರಾಧೆ ಸಿನಿಮಾದ ಸಾಕಷ್ಟು ಕ್ಲಿಪ್ಗಳು ಹಾಗೂ ಸ್ಕ್ರಿನ್ ಶಾಟ್ಗಳು ಆನ್ಲೈನ್ನಲ್ಲಿ ಹರಿದಾಡಿದ್ದವು. ಇದು ಟ್ರೋಲ್ ಮಾಡುವವರಿಗೆ ಹೆಚ್ಚಿನ ಮಟೀರಿಯಲ್ ಒದಗಿಸಿಕೊಟ್ಟಂತಾಗಿತ್ತು. ಇನ್ನು, ಸಲ್ಲು ಚಿತ್ರಗಳಲ್ಲಿ ಆ್ಯಕ್ಷನ್ ಭರಪೂರವಾಗಿರುತ್ತದೆ. ಅವುಗಳನ್ನು ಮೊಬೈಲ್, ಕಂಪ್ಯೂಟರ್ಗಿಂತ ದೊಡ್ಡ ಪರದೆಯಲ್ಲಿ ನೋಡಿದರೆ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಈ ಎಲ್ಲಾ ಕಾರಣಕ್ಕೆ ಸಲ್ಮಾನ್ ಖಾನ್ಗೆ ಒಟಿಟಿ ಬಗ್ಗೆ ಬೇಸರ ತರಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ತಡವಾದರೂ ಸಿನಿಮಾವನ್ನು ಚಿತ್ರಮಂದಿರದಲ್ಲೇ ರಿಲೀಸ್ ಮಾಡಬೇಕು ಎನ್ನುವ ನಿರ್ಧಾರವನ್ನು ಸಲ್ಲು ತೆಗೆದುಕೊಂಡಿದ್ದಾರೆ.
2017ರಲ್ಲಿ ತೆರೆಕಂಡಿದ್ದ ‘ಟೈಗರ್ ಜಿಂದಾ ಹೇ’ ಚಿತ್ರವೇ ಕೊನೆ. ಅದಾದ ನಂತರದಲ್ಲಿ ಸಲ್ಲುಗೆ ಅಂಥ ಯಶಸ್ಸು ಸಿಕ್ಕಿಲ್ಲ. ‘ರೇಸ್-3’, ‘ಭಾರತ್’, ‘ದಬಾಂಗ್ 3’ ಚಿತ್ರಗಳು ಸೋಲು ಕಂಡಿದ್ದವು. ಈಗ ರಾಧೆ ಸಿನಿಮಾ ಕೂಡ ಮಕಾಡೆ ಮಲಗಿತ್ತು. ಹೀಗಾಗಿ, ಸಲ್ಲು ತೆಲುಗು ಸಿನಿಮಾ ರಿಮೇಕ್ ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
ಇದನ್ನೂ ಓದಿ:ರಾಧೆ ನೋಡಿದ ಅಭಿಮಾನಿಗಳಿಗೆ ನಿರಾಸೆ; ತೆಲುಗು ಸಿನಿಮಾ ರಿಮೇಕ್ ಮಾಡೋಕೆ ಮುಂದಾದ ಸಲ್ಲು
ಕಾಲಿಗೆ ಬಿದ್ದರೂ ಸರಿಯೇ ನಾನು ಸಲ್ಮಾನ್ ಸಿನಿಮಾ ವಿಮರ್ಶೆ ಮಾಡಿಯೇ ತೀರುತ್ತೇನೆ; ಜಿದ್ದಿಗೆ ಬಿದ್ದ ಕಮಾಲ್ ಖಾನ್