ಕಾಲಿಗೆ ಬಿದ್ದರೂ ಸರಿಯೇ ನಾನು ಸಲ್ಮಾನ್​ ಸಿನಿಮಾ ವಿಮರ್ಶೆ ಮಾಡಿಯೇ ತೀರುತ್ತೇನೆ; ಜಿದ್ದಿಗೆ ಬಿದ್ದ ಕಮಾಲ್​ ಖಾನ್​

ಮಾನನಷ್ಟ ಮೊಕದ್ದಮೆ ಹಾಕಿರುರುವ ವಿಚಾರವನ್ನು ಕಮಾಲ್​ ತಮ್ಮ ಜಾಹೀರಾತಿಗೂ ಬಳಕೆ ಮಾಡಿಕೊಂಡಿದ್ದಾರೆ! ಈ ವಿಚಾರ ಅಭಿಮಾನಿಗಳಿಗೆ ಸಾಕಷ್ಟು ಅಚ್ಚರಿ ಮೂಡಿಸಿದೆ.

ಕಾಲಿಗೆ ಬಿದ್ದರೂ ಸರಿಯೇ ನಾನು ಸಲ್ಮಾನ್​ ಸಿನಿಮಾ ವಿಮರ್ಶೆ ಮಾಡಿಯೇ ತೀರುತ್ತೇನೆ; ಜಿದ್ದಿಗೆ ಬಿದ್ದ ಕಮಾಲ್​ ಖಾನ್​
ಸಲ್ಮಾನ್​ ಖಾನ್​-ಕಮಾಲ್​ ಖಾನ್
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: May 28, 2021 | 4:09 PM

ನಟ ಸಲ್ಮಾನ್​ ಖಾನ್​ ಮತ್ತು ಕಮಾಲ್​ ಆರ್​. ಖಾನ್​ ನಡುವೆ ಕಿತ್ತಾಟ​ ಆರಂಭವಾಗಿದೆ. ‘ರಾಧೆ: ಯುವರ್​ ಮೋಸ್ಟ್​ ವಾಂಟೆಡ್​ ಭಾಯ್​’ ಚಿತ್ರದ ಬಗ್ಗೆ ಉತ್ತಮ ವಿಮರ್ಶೆ ನೀಡಿಲ್ಲ ಎನ್ನುವ ಕಾರಣಕ್ಕೆ ಸಲ್ಮಾನ್​ ಖಾನ್​ ಅವರು ಕಮಾಲ್​ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಬೇಸರಗೊಂಡಿದ್ದ ಕಮಾಲ್​, ನಾನು ಮುಂದೆಂದೂ ಸಲ್ಲು ಚಿತ್ರಗಳನ್ನು ವಿಮರ್ಶೆ ಮಾಡುವುದಿಲ್ಲ ಎಂದಿದ್ದರು. ಆದರೆ, ಈಗ ಅವರು ತಮ್ಮ ವರಸೆ ಬದಲಿಸಿದ್ದಾರೆ. ಸಲ್ಮಾನ್​ ಖಾನ್ ನನ್ನ ಕಾಲಿಗೆ ಬಿದ್ದರೂ ಸರಿಯೇ ನಾನು ಅವರ ಸಿನಿಮಾ ವಿಮರ್ಶೆ ಮಾಡಿಯೇ ತೀರುತ್ತೇನೆ ಎಂದಿದ್ದಾರೆ.

‘ಒಂದೊಮ್ಮೆ ನಿರ್ಮಾಪಕರು ಹಾಗೂ ನಟರು ತಮ್ಮ ಸಿನಿಮಾಗಳ ವಿಮರ್ಶೆ ಮಾಡಬೇಡಿ ಎಂದು ಹೇಳಿದರೆ ಅಂಥ ಸಿನಿಮಾವನ್ನು ನಾನೆಂದೂ ವಿಮರ್ಶೆ ಮಾಡಿಲ್ಲ. ಈಗ ಸಲ್ಮಾನ್​ ಖಾನ್​ ನನ್ನ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ. ನಾನು ಅವರ ಸಿನಿಮಾಗಳನ್ನು ಇನ್ಮುಂದೆ ವಿಮರ್ಶೆ ಮಾಡುವುದಿಲ್ಲ’ ಎಂದು ಕಮಾಲ್​ ಹೇಳಿದ್ದರು. ಆದರೆ, ಇಂದು ಮಾಡಿರುವ ಹೊಸ ಟ್ವೀಟ್​ ಅವರ ಮೊದಲ ಹೇಳಿಕೆಗೆ ಸಂಪೂರ್ಣ ವಿರುದ್ಧವಾಗಿದೆ.

‘ಒಂದೊಮ್ಮೆ ನಿರ್ಮಾಪಕರು ಹಾಗೂ ನಟರು ತಮ್ಮ ಸಿನಿಮಾಗಳ ವಿಮರ್ಶೆ ಮಾಡಬೇಡಿ ಎಂದು ಹೇಳಿದರೆ ಅಂಥ ಸಿನಿಮಾವನ್ನು ನಾನೆಂದೂ ವಿಮರ್ಶೆ ಮಾಡಿಲ್ಲ. ಆದರೆ, ಇಂದಿನಿಂದ ಈ ವ್ಯಕ್ತಿ ನನ್ನನ್ನು ಕೇಳಿ ಕೊಳ್ಳಲಿ ಅಥವಾ ಕಾಲಿಗೇ ಬೀಳಲಿ. ನಾನು ಅವರ ಸಿನಿಮಾ ವಿಮರ್ಶೆ ಮಾಡಿಯೇ ಮಾಡುತ್ತೇನೆ’ ಎಂದಿದ್ದಾರೆ. ಈ ಮೂಲಕ ಸಲ್ಲು ವಿರುದ್ಧ ಕಮಾಲ್​ ಜಿದ್ದಿಗೆ ಬಿದ್ದಿದ್ದಾರೆ.

ಇನ್ನು, ಮಾನನಷ್ಟ ಮೊಕದ್ದಮೆ ಹಾಕಿರುರುವ ವಿಚಾರವನ್ನು ಕಮಾಲ್​ ತಮ್ಮ ಜಾಹೀರಾತಿಗೂ ಬಳಕೆ ಮಾಡಿಕೊಂಡಿದ್ದಾರೆ! ’ಯೂಟ್ಯೂಬ್​ನಲ್ಲಿ ರಾಧೆ ಬಗ್ಗೆ ಸಾಕಷ್ಟು ಕೆಟ್ಟ ವಿಮರ್ಶೆಗಳು ಸಿಗುತ್ತವೆ. ಆದರೆ, #TheBrandKRK ಹೊರತು ಪಡಿಸಿ ಇನ್ನಾರ ಬಗ್ಗೆಯೂ ಸಲ್ಲುಗೆ ಯಾವುದೇ ತೊಂದರೆ ಇಲ್ಲ. ಇದರಿಂದ ನಾನು ನಂಬರ್​ 1 ವಿಮರ್ಶಕ ಎಂಬುದು ಸಾಬೀತಾಗಿದೆ’ ಎಂದಿದ್ದಾರೆ ಕಮಾಲ್​.

ಕಮಾಲ್​ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಿನಿಮಾ ವಿಮರ್ಶೆ ಮಾತ್ರ ಕಾರಣ ಅಲ್ಲ ಎನ್ನಲಾಗಿದೆ. ಸಲ್ಮಾನ್ ಖಾನ್ ಹಾಗೂ ಬೀಯಿಂಗ್​ ಹ್ಯೂಮನ್​ ಬ್ಡ್ಯಾಂಡ್​ ವಿರುದ್ಧ ಕಮಾಲ್​ ಇಲ್ಲಸಲ್ಲದ ಆರೋಪ ಮಾಡಿದ್ದರು ಎನ್ನಲಾಗಿದೆ.  ಹೀಗಾಗಿ, ಕಮಾಲ್​ ವಿರುದ್ಧ ಕೇಸ್​ ದಾಖಲು ಮಾಡಲಾಗಿದೆ ಎಂದು ಸಲ್ಲು ಪರ ವಕೀಲರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ಕಮಾಲ್​ ಖಾನ್​ ಮೇಲೆ ಸಲ್ಲು ಮಾನನಷ್ಟ ಮೊಕದ್ದಮೆ ಹಾಕಲು ರಾಧೆ ವಿಮರ್ಶೆ ಕಾರಣವಲ್ಲ; ಮತ್ತೇನು?

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್