ಖಾಸಗಿ ಭಾಗದ ಸೈಜ್ ಹೇಳೆಂದ ಅಭಿಮಾನಿಗೆ ನಟಿ ಕೊಟ್ಟ ಉತ್ತರವೇನು?
Yashika Anand: 2016ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಯಶಿಕಾ ತಮಿಳು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಲಿವುಡ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಅಲ್ಲದೆ, ತಮಿಳು ಬಿಗ್ ಬಾಸ್ ಸೀಸನ್ 3ರಲ್ಲಿ ಅವರು ಸ್ಪರ್ಧಿಯಾಗಿ ಎಲ್ಲರ ಗಮನ ಸೆಳೆದಿದ್ದರು.
ಲಾಕ್ಡೌನ್ನಿಂದಾಗಿ ಸಿನಿಮಾ ಶೂಟಿಂಗ್ ಸಂಪೂರ್ಣವಾಗಿ ನಿಂತಿದೆ. ಈ ಕಾರಣಕ್ಕೆ ಮನೆಯಲ್ಲೇ ಇರುವ ಸೆಲೆಬ್ರಿಟಿಗಳು ಅಭಿಮಾನಿಗಳ ಜತೆ ಸಂವಾದ ನಡೆಸುವ ಕೆಲಸ ಮಾಡುತ್ತಿದ್ದಾರೆ. ತಮಿಳು ನಟಿ ಹಾಗೂ ತಮಿಳು ಬಿಗ್ ಬಾಸ್ ಸೀಸನ್ 3ರ ಸ್ಪರ್ಧಿ ಯಶಿಕಾ ಆನಂದ್ ಕೂಡ ಇದನ್ನೇ ಮಾಡುತ್ತಿದ್ದಾರೆ. ಆದರೆ, ಅವರಿಗೆ ಬಂದ ಪ್ರಶ್ನೆಯೊಂದು ಮುಜುಗರ ತರಿಸಿದೆ. ಅದಕ್ಕೆ ಅವರು ತಕ್ಕ ಉತ್ತರ ನೀಡಿದ್ದಾರೆ.
2016ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಯಶಿಕಾ ತಮಿಳು ಚಿತ್ರರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕಾಲಿವುಡ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಅಲ್ಲದೆ, ತಮಿಳು ಬಿಗ್ ಬಾಸ್ ಸೀಸನ್ 3ರಲ್ಲಿ ಅವರು ಸ್ಪರ್ಧಿಯಾಗಿ ಎಲ್ಲರ ಗಮನ ಸೆಳೆದಿದ್ದರು. ಸದ್ಯ, ಅವರ ಕೈಯಲ್ಲಿ ನಾಲ್ಕೈದು ಚಿತ್ರಗಳಿವೆ. ಕೊವಿಡ್ ಕಾರಣಕ್ಕೆ ಚಿತ್ರಗಳ ಶೂಟಿಂಗ್ ಮುಂದೂಡಲ್ಪಟ್ಟಿದೆ. ಹೀಗಾಗಿ, ಯಶಿಕಾ ಮನೆಯಲ್ಲೇ ಇದ್ದಾರೆ.
ಇನ್ಸ್ಟಾಗ್ರಾಂ ಸ್ಟೇಟಸ್ನಲ್ಲಿ ಯಶಿಕಾ ಏನು ಬೇಕಾದರೂ ಕೇಳಿ ಎನ್ನುವ ಪ್ರಶ್ನೆ ಹಾಕಿದ್ದಾರೆ. ಅಭಿಮಾನಿಗಳು ತಾವು ಯಾವ ಪ್ರಶ್ನೆ ಕೇಳಬೇಕೆಂದುಕೊಂಡಿದ್ದರೋ ಅದನ್ನು ಕೇಳಿದ್ದಾರೆ. ಕೆಲವರು, ನಿಮ್ಮಿಷ್ಟದ ಹೀರೋಯಿನ್ ಯಾರು ಎಂಬಿತ್ಯಾದಿ ಪ್ರಶ್ನೆ ಇಟ್ಟಿದ್ದಾರೆ. ಆದರೆ, ಓರ್ವ ಅಭಿಮಾನಿ ಮಾತ್ರ ಖಾಸಗಿ ಭಾಗದ ಸೈಜ್ ಕೇಳಿದ್ದಾನೆ.
ಸಾಮಾನ್ಯವಾಗಿ ಇಂಥ ಪ್ರಶ್ನೆ ಬಂದಾಗ ಹೀರೋಯಿನ್ಗಳು ಅದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಇನ್ನೂ ಕೆಲವರು, ಅಂಥವರನ್ನು ಟ್ಯಾಗ್ ಮಾಡಿ ಸಾರ್ವಜನಿಕವಾಗಿಯೇ ಮಾನ ಹರಾಜು ಹಾಕುತ್ತಾರೆ. ಅದರೆ, ಯಶಿಕಾ ಎರಡನ್ನೂ ಮಾಡಿಲ್ಲ. ಬದಲಿಗೆ ಪುರುಷರ ಖಾಸಗಿ ಭಾಗವನ್ನು ಉಲ್ಲೇಖಿಸಿ ತಿರುಗೇಟು ನೀಡಿದ್ದಾರೆ.
ಈ ಸ್ಟೇಟಸ್ ನೋಡಿದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಭಿಮಾನಿ ಕೇಳಿದ ಪ್ರಶ್ನೆಗೆ ಯಶಿಕಾ ಉತ್ತರ ನೀಡದೇ ಸುಮ್ಮನೆ ಇರಬಹುದಿತ್ತು. ಆದರೆ, ಯಶಿಕಾ ಆ ರೀತಿ ಮಾಡಲಿಲ್ಲ. ಮುಂದೆ ಈ ರೀತಿ ಪ್ರಶ್ನೆ ಕೇಳಬೇಕು ಎನ್ನುವ ಆಲೋಚನೆಯೂ ಬರದಂತೆ ನೋಡಿಕೊಳ್ಳಲು ಈ ರೀತಿ ಬೋಲ್ಡ್ ಆಗಿ ಉತ್ತರಿಸಿದ್ದಾರೆ ಎಂದು ಅಭಿಮಾನಿಗಳು ಹೇಳಿಕೊಳ್ಳುತ್ತಿದ್ದಾರೆ.
ಈ ಹಿಂದೆಯೂ ನಟಿಮಣಿಯರಿಗೆ ಈ ರೀತಿಯ ಅಸಭ್ಯ ಪ್ರಶ್ನೆಗಳು ಎದುರಾದ ಸಾಕಷ್ಟು ಉದಾಹರಣೆ ಇದೆ. ಕೆಲವರು ಇದನ್ನು ನಿರ್ಲಕ್ಷ್ಯ ಮಾಡಿದರೆ, ಇನ್ನೂ ಕೆಲವರು ಖಡಕ್ ರಿಪ್ಲೈ ನೀಡಿದ್ದಾರೆ. ಏನೇ ಮಾಡಿದರೂ ಈ ರೀತಿಯ ಪ್ರಶ್ನೆಗಳು ಎದುರಾಗುತ್ತಿರುವುದು ಮಾತ್ರ ಇನ್ನೂ ನಿಂತಿಲ್ಲ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ಖಾಸಗಿ ಭಾಗಕ್ಕೆ ಒದ್ದು ವಿಡಿಯೋ ವೈರಲ್ ಮಾಡಿದ ಕಾಮುಕರು ಅರೆಸ್ಟ್
Published On - 5:07 pm, Fri, 28 May 21