ಮತ್ತೊಂದು ಸಿಡಿ ಪ್ರಕರಣ; ನಟಿ ಜತೆ ಮಾಜಿ ಸಚಿವನ ಲಿವ್ ಇನ್ ರಿಲೇಶನ್ಶಿಪ್, ಠಾಣೆ ಮೆಟ್ಟಿಲೇರಿದ ಕೇಸ್
ನನ್ನನ್ನು ಮದುವೆಯಾಗಬೇಕೆಂದು ನಾನು ಮಣಿಕಂದನ್ ಅವರನ್ನು ಒತ್ತಾಯಿಸುತ್ತಿದ್ದೇನೆ. ನನ್ನ ಜತೆ ಸಂಬಂಧದಲ್ಲಿದ್ದಾಗ ಅವರು ನನ್ನ ಖಾಸಗಿ ಭಾಗದ ಫೋಟಗಳು ಹಾಗೂ ವಿಡಿಯೋಗಳನ್ನು ತೆಗೆದುಕೊಂಡಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.
ತಮಿಳು ನಟಿ ಚಾಂದಿನಿ ಅವರು ಈಗ ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ. ಎಡಿಎಂಕೆ ಮಾಜಿ ಸಚಿವ ಮಣಿಕಂದನ್ ಜತೆ ನಾನು ಐದು ವರ್ಷ ಲೀವ್ ಇನ್ ರಿಲೇಶನ್ಶಿಪ್ನಲ್ಲಿದ್ದೆ. ಆದರೆ, ಈಗ ಅವರು ಮದುವೆ ಆಗಲು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿ ದೂರು ದಾಖಲು ಮಾಡಿದ್ದಾರೆ. ಸದ್ಯ, ಈ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿದೆ.
ನನ್ನನ್ನು ಮದುವೆಯಾಗಬೇಕೆಂದು ನಾನು ಮಣಿಕಂದನ್ ಅವರನ್ನು ಒತ್ತಾಯಿಸುತ್ತಿದ್ದೇನೆ. ನನ್ನ ಜತೆ ಸಂಬಂಧದಲ್ಲಿದ್ದಾಗ ಅವರು ನನ್ನ ಖಾಸಗಿ ಭಾಗದ ಫೋಟಗಳು ಹಾಗೂ ವಿಡಿಯೋಗಳನ್ನು ತೆಗೆದುಕೊಂಡಿದ್ದಾರೆ. ಇವುಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ ಹೆದರಿಸುತ್ತಿದ್ದಾರೆ. ನನ್ನನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಂದು ಪೊಲೀಸರ ಬಳಿ ಮನವಿ ಮಾಡಿದ್ದಾರೆ.
ತಮಿಳುನಾಡಿನಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಎಐಎಡಿಎಂಕೆ ಸರ್ಕಾರದಲ್ಲಿ ಮಣಿಕಂದನ್ ರಾಜಕೀಯದ ಆಟ ಆಡಿದ್ದರು. 18 ಇತರ ಶಾಸಕರೊಂದಿಗೆ ಶಶಿಕಲಾರ ಸೋದರ ಸಂಬಂಧಿ ಟಿಟಿವಿ ದಿನಕರನ್ ಪರ ಗುರುತಿಸಿಕೊಂಡಿದ್ದರು. ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧ ತಿರುಗಿಬಿದ್ದಿದ್ದ ಟಿಟಿವಿ ದಿನಕರನ್ ಸಚಿವ ಸ್ಥಾನ ಕಳೆದುಕೊಂಡಿದ್ದರು.
ಚಾಂದಿನಿ ಮಲೇಷಿಯಾ ಮೂಲದವರು. ಭಾರತಕ್ಕೆ ಬಂದು ತಮಿಳಿನ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಪಬ್ಜಿ’ ಹೆಸರಿನ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಈ ಚಿತ್ರದ ಕೆಲಸಗಳು ಸದ್ಯ ನಡೆಯುತ್ತಿವೆ. ಮಣಿಕಂದನ್ ಜತೆ ರಿಲೇಶನ್ಶಿಪ್ನಲ್ಲಿ ಇದ್ದಿರುವ ಬಗ್ಗೆ ಚಾಂದಿನಿ ಫೋಟೋಗಳನ್ನು ಪೊಲೀಸರಿಗೆ ನೀಡಿದ್ದಾರೆ. ಪೊಲೀಸರು ಮಣಿಕಂದನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಖಾಸಗಿ ಭಾಗದ ಸೈಜ್ ಹೇಳೆಂದ ಅಭಿಮಾನಿಗೆ ನಟಿ ಕೊಟ್ಟ ಉತ್ತರವೇನು?
Mia Khalifa: ಮಿಯಾ ಖಲೀಫಾಗೆ ಪಾಕ್ ಶಾಕ್; ಮಾಜಿ ನೀಲಿ ತಾರೆ ಉತ್ತರ ಸಖತ್ ಖಡಕ್
Published On - 6:00 pm, Fri, 28 May 21