Mia Khalifa: ಮಿಯಾ ಖಲೀಫಾಗೆ ಪಾಕ್ ಶಾಕ್; ಮಾಜಿ ನೀಲಿ ತಾರೆ ಉತ್ತರ ಸಖತ್ ಖಡಕ್
ಮೌಲ್ಯವಿಲ್ಲದ ಹಾಗೂ ನೈತಿಕವಲ್ಲದ ಪೋಸ್ಟ್ಗಳನ್ನು ಮಿಯಾ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪಾಕಿಸ್ತಾನ ಈ ಮೊದಲು ಅವರ ಟಿಕ್ ಟಾಕ್ ಖಾತೆಯನ್ನು ಬ್ಯಾನ್ ಮಾಡಿತ್ತು. ಏಪ್ರಿಲ್ ತಿಂಗಳಲ್ಲಿ ಈ ನಿಷೇಧವನ್ನು ಹಿಂಪಡೆಯಲಾಗಿತ್ತು.
ಮಾಜಿ ನೀಲಿ ತಾರೆ ಮಿಯಾ ಖಲೀಫಾ ಟಿಕ್ ಟಾಕ್ನಲ್ಲಿ ಲಕ್ಷಾಂತರ ಹಿಂಬಾಲಕರನ್ನು ಹೊಂದಿದ್ದಾರೆ. ಅವರು ಹಾಕುವ ಪೋಸ್ಟ್ಗಳನ್ನು ನೋಡೋಕೆ ಪಡ್ಡೆ ಹುಡುಗರು ಕಾಯುತ್ತಿರುತ್ತಾರೆ. ಈಗ ಪಾಕಿಸ್ತಾನ ಅವರಿಗೆ ಟಿಕ್ ಟಾಕ್ ಖಾತೆಯನ್ನು ಬ್ಯಾನ್ ಮಾಡುವ ಮೂಲಕ ಶಾಕ್ ನೀಡಿದೆ. ಹಾಗಂತ ಮಿಯಾ ಕೈಕಟ್ಟಿ ಕೂತಿಲ್ಲ. ಅವರು ಖಡಕ್ ಆಗಿಯೇ ಇದಕ್ಕೆ ಉತ್ತರಿಸಿದ್ದಾರೆ.
ಮೌಲ್ಯವಿಲ್ಲದ ಹಾಗೂ ನೈತಿಕವಲ್ಲದ ಪೋಸ್ಟ್ಗಳನ್ನು ಮಿಯಾ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪಾಕಿಸ್ತಾನ ಈ ಮೊದಲು ಅವರ ಟಿಕ್ ಟಾಕ್ ಖಾತೆಯನ್ನು ಬ್ಯಾನ್ ಮಾಡಿತ್ತು. ಏಪ್ರಿಲ್ ತಿಂಗಳಲ್ಲಿ ಈ ನಿಷೇಧವನ್ನು ಹಿಂಪಡೆಯಲಾಗಿತ್ತು. ಆದರೆ, ಮಿಯಾ ಮೊದಲಿನ ರೀತಿಯಲ್ಲೇ ಪೋಸ್ಟ್ಗಳನ್ನು ಮಾಡಲು ಆರಂಭಿಸಿದ್ದಾರೆ. ಹೀಗಾಗಿ, ಮತ್ತೆ ಅವರ ಟಿಕ್ ಟಾಕ್ ಖಾತೆ ಬ್ಯಾನ್ ಆಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಿಯಾ, ಟಿಕ್ಟಾಕ್ ಖಾತೆ ಬ್ಯಾನ್ ಮಾಡಿದ ಪಾಕಿಸ್ತಾನಕ್ಕೆ ನನ್ನ ಶೌಟೌಟ್. ಫ್ಯಾಸಿಸಂನಿಂದ ದೂರ ಉಳಿಯ ಬಯಸುವ ಪಾಕಿಸ್ತಾನಿ ಫ್ಯಾನ್ಸ್ಗಾಗಿ ನಾನು ನನ್ನ ಟಿಕ್ಟಾಕ್ ವಿಡಿಯೋಗಳನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡುತ್ತೇನೆ ಎಂದಿದ್ದಾರೆ. ಮಿಯಾ ಟಿಕ್ಟಾಕ್ನಲ್ಲಿ 2.2 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. ಅಲ್ಲದೆ, 27 ಕೋಟಿ ಲೈಕ್ಸ್ ಇದೆ.
Shoutout to Pakistan for banning my tiktok account from the country. I’ll be re-posting all my tiktoks on Twitter from now on for my Pakistani fans who want to circumvent fascism ?
— Mia K. (@miakhalifa) May 22, 2021
ಮಿಯಾ ಐದು ವರ್ಷ ಪೋರ್ನ್ ಇಂಡಸ್ಟ್ರಿಯಲ್ಲಿ ಮಿಯಾ ಕೆಲಸ ಮಾಡಿದ್ದರು. ನೀಲಿ ಚಿತ್ರಗಳಲ್ಲಿ ನಟನೆ ನಿಲ್ಲಿಸಿದ್ದ ಮಿಯಾ ಇತ್ತೀಚೆಗೆ ಹೋರಾಟಗಳಲ್ಲಿ ಸಕ್ರಿಯವಾಗಿದ್ದಾರೆ. ಮಿಯಾ ಖಲೀಫಾ ಫೆಬ್ರವರಿಯಲ್ಲಿ ಕೃಷಿ ಕಾಯ್ದೆ ವಿರೋಧಿಸಿ ಭಾರತದ ರೈತರು ನಡೆಸುತ್ತಿದ್ದ ಪ್ರತಿಭಟನೆ ಬೆಂಬಲಿಸಿ ಸುದ್ದಿಯಾಗಿದ್ದರು.
ಇದನ್ನೂ ಓದಿ: Fact Check | ಮಿಯಾ ಖಲೀಫಾ ಪೋಸ್ಟರ್ಗೆ ಕೇಕ್ ತಿನಿಸಿದ ಕಾಂಗ್ರೆಸ್ ಕಾರ್ಯಕರ್ತರು: ಫೋಟೊಶಾಪ್ ಚಿತ್ರ ವೈರಲ್