Fact Check | ಮಿಯಾ ಖಲೀಫಾ ಪೋಸ್ಟರ್ಗೆ ಕೇಕ್ ತಿನಿಸಿದ ಕಾಂಗ್ರೆಸ್ ಕಾರ್ಯಕರ್ತರು: ಫೋಟೊಶಾಪ್ ಚಿತ್ರ ವೈರಲ್
Fact Check ರಾಹುಲ್ ಗಾಂಧಿ ಅವರ 37ನೇ ಹುಟ್ಟುಹಬ್ಬ ಆಚರಿಸಿದ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಪೋಸ್ಟರ್ಗೆ ಕೇಕ್ ತಿನ್ನಿಸುವ ಫೋಟೊವನ್ನು ಫೋಟೊಶಾಪ್ನಲ್ಲಿ ಮಾರ್ಪಾಡು ಮಾಡಿ ಮಿಯಾ ಖಲೀಫಾ ಅವರ ಫೋಟೊ ಇರಿಸಲಾಗಿದೆ.
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ ನಂತರ ಮಿಯಾ ಖಲೀಫಾ ಸುದ್ದಿಯಲ್ಲಿದ್ದಾರೆ. ರೈತರ ಪರವಾಗಿ ಟ್ವೀಟ್ ಮಾಡಿದ್ದಕ್ಕಾಗಿ ಮಿಯಾ ಟ್ರೋಲಿಗೊಳಗಾಗಿದ್ದು ಮಾತ್ರವಲ್ಲದೆ ಅವರ ಫೋಟೊಶಾಪ್ ಫೋಟೊ ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಬಿಜೆಪಿ ಸದಸ್ಯ ಸುರೇಂದ್ರ ಪೂನಿಯಾ ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡಿ ಟ್ವೀಟ್ ಮಾಡಿದ್ದು ಅದರಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಿಯಾ ಖಲೀಫಾ ಅವರ ಪೋಸ್ಟರ್ ಗೆ ಕೇಕ್ ತಿನ್ನಿಸುವ ಫೋಟೊ ಶೇರ್ ಮಾಡಿ ಇದು ರಾಹುಲ್ ಗಾಂಧಿಯವರ ಕಾಂಗ್ರೆಸ್. ಆಮೇಲೆ ಇವಿಎಂ ಹ್ಯಾಕ್ ಆಯ್ತು ಅಂತಾರೆ ಎಂದು ಬರೆದಿದ್ದರು.
ಬಿಜೆಪಿ ಕಾರ್ಯಕರ್ತ ರಾಜ್ ಆನಂದ್ ಸಿಂಗ್, ಪಿಂಕೂ ಶುಕ್ಲಾ ಮೊದಲಾದವರು ಇದೇ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದರು.
@miakhalifa खालिस्तान आंदोलन के समर्थन मे किए ट्वीट के बाद कॉंग्रसी चमचे खुशी मनाते हुए वो भी देश के सबसे शिक्षित राज्य केरल मे.
इन चमचों को विदेशी नाचने और अंग प्रदर्शन करने वालीं ही क्यू पसंद आता है ?देशी @ReallySwara को कोई पूछ ही नहीं रहा इस बार और @khanumarfa खैर छोड़ों ? pic.twitter.com/14HqoKM4hx
— Raj Aanand singh?? (@rajanand_) February 6, 2021
ಫೋಟೊ ಶಾಪ್ ಮಾಡಿದ ಚಿತ್ರ ಕಾಂಗ್ರೆಸ್ ಕಾರ್ಯಕರ್ತರು ಮಿಯಾ ಖಲೀಫಾ ಪೋಸ್ಟರ್ ಗೆ ಕೇಕ್ ತಿನ್ನಿಸುವ ಫೋಟೊವನ್ನು ಗೂಗಲ್ ರಿವರ್ಸ್ ಸರ್ಚ್ ಮಾಡಿದರೆ ಈ ಫೋಟೊ ಫೋಟೊಶಾಪ್ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ರಾಹುಲ್ ಗಾಂಧಿ ಪೋಸ್ಟರ್ಗೆ ಕಾಂಗ್ರೆಸ್ ಕಾರ್ಯಕರ್ತರು ಕೇಕ್ ತಿನ್ನಿಸುವ ಫೋಟೊ ಇದಾಗಿತ್ತು.
ಈ ವೈರಲ್ ಫೋಟೊ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್ಚೆಕ್ ಮಾಡಿದ್ದು ರಾಹುಲ್ ಗಾಂಧಿ ಪೋಸ್ಟರ್ಗೆ ಕೇಕ್ ತಿನ್ನಿಸುತ್ತಿರುವ ಫೋಟೊ ಜೂನ್ 19, 2007ರಲ್ಲಿ ತೆಗೆದದ್ದಾಗಿದೆ. ರಾಹುಲ್ ಗಾಂಧಿ ಅವರ 37ನೇ ಹುಟ್ಟುಹಬ್ಬದ ಆಚರಿಸಿದ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ಗೆ ಕೇಕ್ ತಿನ್ನಿಸುವ ಫೋಟೊವನ್ನು ಫೋಟೊಗ್ರಾಫರ್ ರವೀಂದ್ರನ್ ಸೆರೆ ಹಿಡಿದಿದ್ದು ಗೆಟ್ಟಿ ಇಮೇಜೆಸ್ನಲ್ಲಿ ಈ ಫೋಟೊ ಇದೆ.
Fact Check | ಪಾಪ್ ತಾರೆ ರಿಹಾನ್ನಾ ಕೈಯಲ್ಲಿ ಪಾಕ್ ಧ್ವಜ; ಫೋಟೊಶಾಪ್ ಫೋಟೊ ವೈರಲ್