Fact Check | ಪಾಪ್ ತಾರೆ ರಿಹಾನ್ನಾ ಕೈಯಲ್ಲಿ ಪಾಕ್ ಧ್ವಜ; ಫೋಟೊಶಾಪ್ ಫೋಟೊ ವೈರಲ್

ದೆಹಲಿ ಗಡಿಯಲ್ಲಿ ಪ್ರತಿಭಟನೆ ನಿರತ ರೈತರಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ ಅಮೆರಿಕದ ಖ್ಯಾತ ಪಾಪ್ ಗಾಯಕಿ ರಿಹಾನ್ನಾ ಅವರು ಪಾಕ್ ಧ್ವಜ ಹಿಡಿದಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರ ಸತ್ಯಾಸತ್ಯತೆ ಏನು?

Fact Check | ಪಾಪ್ ತಾರೆ ರಿಹಾನ್ನಾ ಕೈಯಲ್ಲಿ ಪಾಕ್ ಧ್ವಜ; ಫೋಟೊಶಾಪ್ ಫೋಟೊ ವೈರಲ್
ರಿಹಾನ್ನಾ ಅವರು ವೆಸ್ಟ್ ಇಂಡೀಸ್ ಧ್ವಜ ಹಿಡಿದಿರುವ ನಿಜ ಚಿತ್ರ ಮತ್ತು ಪಾಕ್ ಧ್ವಜ ಹಿಡಿದಿರುವ ಫೋಟೊಶಾಪ್ ಚಿತ್ರ
Follow us
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 05, 2021 | 6:38 PM

ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆ ನಾವೇಕೆ ಮಾತನಾಡುತ್ತಿಲ್ಲ ಎಂದು ಅಮೆರಿಕದ ಪಾಪ್ ತಾರೆ ರಿಹಾನ್ನಾ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆದಿತ್ತು. ಈ ವಿದ್ಯಮಾನಗಳ ನಡುವೆಯೇ ರಿಹಾನ್ನಾ ಸ್ಟೇಡಿಯಂವೊಂದರಲ್ಲಿ ಪಾಕಿಸ್ತಾನ ಧ್ವಜ ಹಿಡಿದಿರುವ ಫೋಟೊ ವೈರಲ್ ಆಗಿದೆ.

ಉತ್ತರ ಪ್ರದೇಶದ ಬಿಜೆಪಿಯ ಯುವಮೋರ್ಚಾ ಘಟಕದ ನಾಯಕ ಅಭಿಷೇಕ್ ಮಿಶ್ರಾ ಅವರು ರಿಹಾನ್ನಾ ಪಾಕ್ ಧ್ವಜ ಹಿಡಿದಿರುವ ಫೋಟೊ ಮತ್ತು ರಿಹಾನ್ನಾ ಅವರ ಹಳೇ ಟ್ವೀಟ್ ಗಳ ಸ್ಕ್ರೀನ್ ಶಾಟ್​ಗಳನ್ನು ಟ್ವೀಟ್ ಮಾಡಿ ಭಟ್ಟಂಗಿಗಳ ರಾಜಮಾತೆ ಎಂದಿದ್ದರು. ಇದೇ ಫೋಟೊವನ್ನು ಹಲವಾರು ನೆಟ್ಟಿಗರು ಫೇಸ್​ಬುಕ್ ಮತ್ತು ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ.

Tweet BJP

ಅಭಿಷೇಕ್ ಮಿಶ್ರಾ ಅವರ ಟ್ವೀಟ್

ಸೋಮ್​ವಂಶಿ  ಅಮೃತಾ ಅವರ ಟ್ವೀಟ್

ಫ್ಯಾಕ್ಟ್​ಚೆಕ್ ವೈರಲ್ ಚಿತ್ರದ ಫ್ಯಾಕ್ಟ್​ಚೆಕ್ ಮಾಡಿದ ಬೂಮ್ ಲೈವ್, ಇದು ಫೋಟೊಶಾಪ್ ಮಾಡಿದ ಚಿತ್ರ ಎಂದು ಹೇಳಿದೆ. 2019ರಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯದ ವೇಳೆ ರಿಹಾನ್ನಾ ವೆಸ್ಟ್ ಇಂಡೀಸ್ ಧ್ವಜವನ್ನು ಹಿಡಿರುವ ಫೋಟೊ ಇದು.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ರಿಹಾನ್ನಾಳ ಫೋಟೊದ ಹಿಂದಿನ ಸತ್ಯಾಸತ್ಯತೆ ತಿಳಿಯಲು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದರೆ ವೆಸ್ಟ್ ಇಂಡೀಸ್ ಧ್ವಜ ಹಿಡಿದಿರುವ ರಿಹಾನ್ನಾಳ ಫೋಟೊ ಸಿಗುತ್ತದೆ. ರಿಹಾನ್ನಾ ವೆಸ್ಟ್ ಇಂಡೀಸ್ ಧ್ವಜ ಹಿಡಿದಿರುವ ಫೋಟೊವನ್ನು 2019 ಜುಲೈ 1ರಂದು ಐಸಿಸಿ ಟ್ವೀಟ್ ಮಾಡಿತ್ತು.

ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ನಡುವಿನ ಪಂದ್ಯವನ್ನು ವೀಕ್ಷಿಸಲು ರಿಹಾನ್ನಾ ಬಂದಿದ್ದರು. ರಿಹಾನ್ನಾ ಸ್ಟೇಡಿಯಂನಲ್ಲಿರುವ ಫೋಟೊವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಟ್ವಿಟರ್ ಹ್ಯಾಂಡಲ್ ಕೂಡಾ ಶೇರ್ ಮಾಡಿತ್ತು.

Fact Check | ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ ಪಾಕ್ ಪಿಎಂ ಇಮ್ರಾನ್ ಖಾನ್ ; ವೈರಲ್ ವಿಡಿಯೊದಲ್ಲೇನಿದೆ?