Fact Check | ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ ಪಾಕ್ ಪಿಎಂ ಇಮ್ರಾನ್ ಖಾನ್ ; ವೈರಲ್ ವಿಡಿಯೊದಲ್ಲೇನಿದೆ?
ಪಾಕ್ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನಕ್ಕೆ ಈಗ ಪ್ರಬಲವಾದ ಸೈನ್ಯಬೇಕು. ಯಾಕೆ? ಯಾಕೆಂದರೆ ನಮ್ಮ ನೆರೆಯ ರಾಷ್ಟ್ರದಲ್ಲಿ 73 ವರ್ಷಗಳಿಂದ ಈ ರೀತಿಯ ಸರ್ಕಾರವನ್ನು ಕಂಡಿಲ್ಲ ಎಂದು ಹೇಳಿರುವ ವಿಡಿಯೊದ ಸತ್ಯಾಸತ್ಯತೆ ಏನು?
ಜನವರಿ 10ರಂದು ಪಾಕಿಸ್ತಾನದ ಹೋರಾಟಗಾರ ಆರಿಫ್ ಅಜಕಿಯಾ 26 ಸೆಕೆಂಡ್ ಅವಧಿಯ ವಿಡಿಯೊವೊಂದನ್ನು ಟ್ವೀಟ್ ಮಾಡಿದ್ದರು. ಈ ವಿಡಿಯೊದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನಕ್ಕೆ ಈಗ ಪ್ರಬಲವಾದ ಸೈನ್ಯಬೇಕು. ಯಾಕೆ? ಯಾಕೆಂದರೆ ನಮ್ಮ ನೆರೆಯ ರಾಷ್ಟ್ರದಲ್ಲಿ 73 ವರ್ಷಗಳಿಂದ ಈ ರೀತಿಯ ಸರ್ಕಾರವನ್ನು ಕಂಡಿಲ್ಲ ಎಂದು ಹೇಳುತ್ತಿದ್ದಾರೆ. ಅಲ್ಪ ಕ್ಷಣದಲ್ಲಿ ಟಿವಿ ನಿರೂಪಕಿಯ ವಾಯ್ಸ್ ಓವರ್ ಕೇಳಿಸುತ್ತಿದ್ದು ಅದರಲ್ಲಿ ಇಮ್ರಾನ್ ಖಾನ್ ಅವರ ಮಾತೇ ಪುನರುಚ್ಚಾರಣೆಯಾಗಿದೆ.
ಈ ವಿಡಿಯೊದಲ್ಲಿ 92 News ಎಂಬ ಲೋಗೊ ಇದೆ. ಜನವರಿ 11ರಂದು ಅಂಕಣಕಾರ್ತಿ ಶೆಫಾಲಿ ವೈದ್ಯ ಇದೇ ವಿಡಿಯೊವನ್ನು ಪೋಸ್ಟ್ ಮಾಡಿ ನರೇಂದ್ರ ಮೋದಿ ಸರ್ಕಾರಕ್ಕೆ ಇದಕ್ಕಿಂತ ದೊಡ್ಡ ಮಟ್ಟದ ಪ್ರಚಾರ ಸಿಗುವುದಿಲ್ಲ. ನಿಮ್ಮ ಬದ್ಧ ವೈರಿ 73 ವರ್ಷಗಳಲ್ಲಿ ಈ ರೀತಿಯ ಸರ್ಕಾರ ಭಾರತದಲ್ಲಿ ನೋಡಿಲ್ಲ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ ಎಂದು ಬರೆದುಕೊಂಡಿದ್ದರು.
Here he comes with a truth, its rare bcoz @ImranKhanPTI hardly spills truth..1st time, there is a government in India that Pakistan fears, otherwise, there was always a friendly government in Bhaarat, that continued apeasement despite all terrorism from Pakistan in Bhaarat. pic.twitter.com/52OmUaJhkg
— Arif Aajakia (@arifaajakia) January 10, 2021
You cannot have a more ringing endorsement of @narendramodi govt than this. Your sworn enemy publicly admitting that in 73 years India had never had a government as strong and iron-willed as this! pic.twitter.com/ajRvG0y0mR
— Shefali Vaidya. (@ShefVaidya) January 11, 2021
ವೈರಲ್ ಆಗಿರುವ ವಿಡಿಯೊದ ಫ್ಯಾಕ್ಟ್ ಚೆಕ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊವನ್ನು ಆಲ್ಟ್ ನ್ಯೂಸ್ ಫ್ಯಾಕ್ಟ್ಚೆಕ್ ಮಾಡಿದೆ. ಯೂಟ್ಯೂಬ್ ನಲ್ಲಿ 92 News ಎಂದು ಸರ್ಚ್ ಮಾಡಿದಾಗ ಪಾಕಿಸ್ತಾನ ಮೂಲದ ಸುದ್ದಿವಾಹಿನಿ ಇದು ಎಂದು ತಿಳಿದುಬಂದಿದೆ. ಈ ಸುದ್ದಿವಾಹಿನಿಯಲ್ಲಿ ಇಮ್ರಾನ್ ಖಾನ್ ಭಾಷಣದ 20 ಸೆಕೆಂಡ್ಗಳನ್ನು ಮಾತ್ರ ಹೆಡ್ಲೈನ್ನಲ್ಲಿ ತೋರಿಸಲಾಗಿದೆ.
ಇಡೀ ಭಾಷಣದ ಒಂದು ತುಣುಕು ಅಂದರೆ 0:56 ರಿಂದ 1:16 ಅವಧಿಯ ಭಾಷಣವೇ ವೈರಲ್ ಆಗಿರುವುದು. 1.16 ನಿಮಿಷದ ನಂತರ ಖಾನ್ ಅವರು ಭಾರತದಲ್ಲಿ ಫೇಕ್ ವೆಬ್ಸೈಟ್ಗಳ ಬಗ್ಗೆ ಇಯು ಡಿಸ್ಇನ್ಫೋಲ್ಯಾಬ್ ವರದಿಯನ್ನು ಉಲ್ಲೇಖಿಸಿ ಮಾತನಾಡಿದ್ದಾರೆ. ಭಾರತದಲ್ಲಿ ಸುಳ್ಳು ಸುದ್ದಿಗಳು ಯಾವ ರೀತಿ ವ್ಯಾಪಿಸುತ್ತಿವೆ ಎಂದು ಈ ವರದಿ ಹೇಳಿತ್ತು. ಇಮ್ರಾನ್ ಖಾನ್ ಭಾಷಣದಲ್ಲೇನಿದೆ? ಡಿಸೆಂಬರ್ 26ರಂದು ಚಕ್ವಾಲ್ನಲ್ಲಿ ಇಮ್ರಾನ್ ಖಾನ್ ಭಾಷಣ ಮಾಡಿದ್ದಾರೆ. ಈ ಬಗ್ಗೆ 92 News HD ಸುದ್ದಿವಾಹಿನಿ ಸೇರಿದಂತೆ ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಭಾಷಣದ ಪೂರ್ತಿ ವಿಡಿಯೊ ನೋಡಿದರೆ 2.11 ನಿಮಿಷಕ್ಕೆ ತಲುಪುವಾಗ ಖಾನ್ ಇಯು ಡಿಸ್ಇನ್ಫೋಲ್ಯಾಬ್ ( EU DisinforLab) ವರದಿಯನ್ನು ಉಲ್ಲೇಖಿಸಿದ್ದಾರೆ. ವೈರಲ್ ಆಗಿರುವ ವಿಡಿಯೊ 5:57 ರಿಂದ 6:11 ನಡುವೆ ಇರುವುದಾಗಿದೆ.
5:57 ರ ನಂತರ ಖಾನ್ ಮಾತು ಹೀಗಿದೆ – ‘ಪಾಕಿಸ್ತಾನಕ್ಕೆ ಬಲವಾದ ಸೈನ್ಯ ಬೇಕು, ಅದು ಇಂದು. ಮತ್ತು ಏಕೆ? ಯಾಕೆಂದರೆ ನಮ್ಮ ನೆರೆ ರಾಷ್ಟ್ರವಾದ ಭಾರತದಲ್ಲಿ 73 ವರ್ಷಗಳಲ್ಲಿ ಈ ರೀತಿಯ ಸರ್ವಾಧಿಕಾರಿ, ವರ್ಣಭೇದ ನೀತಿ, ಮುಸ್ಲಿಂ ವಿರೋಧಿ, ಇಸ್ಲಾಂ ವಿರೋಧಿ, ಪಾಕಿಸ್ತಾನ ವಿರೋಧಿ ಮತ್ತು ಕಾಶ್ಮೀರದ ಮೇಲಿನ ವರ್ತನೆಯನ್ನು ನೋಡಿಲ್ಲ’ . ಅಂದರೆ ಇಮ್ರಾನ್ ಖಾನ್ , ಮೋದಿಯವರನ್ನು ಹೊಗಳಿಲ್ಲ ಎಂಬುದು ಇಲ್ಲಿ ಸ್ಪಷ್ಟ.
Fact Check | ಸ್ಟ್ಯಾಂಡ್ಅಪ್ ಕಾಮಿಡಿಯನ್ ಮುನಾವರ್ಗೆ ಥಳಿತ; ವೈರಲ್ ವಿಡಿಯೊದ ಸತ್ಯಾಸತ್ಯತೆ ಏನು?
Published On - 9:07 pm, Thu, 14 January 21