ರಾಜಮೌಳಿ ತಂದೆ ಮೊಬೈಲ್​ ವಾಲ್​ಪೇಪರ್​ನಲ್ಲಿ ನಿರ್ದೇಶಕ ಪುರಿ ಜಗನ್ನಾಥ್ ಫೋಟೋ; ಕಾರಣ ಏನು?

ವಿಜಯೇಂದ್ರ ಪ್ರಸಾದ್​ ಅವರು ಹೇಳಿರುವ ಮಾತು ಸಾಕಷ್ಟು ವೈರಲ್​ ಆಗಿದೆ. ಅಲ್ಲದೆ, ಪುರಿ ಜಗನ್ನಾಥ್​ ಅಭಿಮಾನಿಗಳು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ರಾಜಮೌಳಿ ತಂದೆ ಮೊಬೈಲ್​ ವಾಲ್​ಪೇಪರ್​ನಲ್ಲಿ ನಿರ್ದೇಶಕ ಪುರಿ ಜಗನ್ನಾಥ್ ಫೋಟೋ; ಕಾರಣ ಏನು?
ವಿಜಯೇಂದ್ರ ಪ್ರಸಾದ್
Follow us
| Updated By: ಮದನ್​ ಕುಮಾರ್​

Updated on: May 28, 2021 | 7:21 AM

ಎಸ್​.ಎಸ್​. ರಾಜಮೌಳಿ ತಂದೆ ಕೆ.ವಿ. ವಿಜಯೇಂದ್ರ ಪ್ರಸಾದ್​ ಹಿರಿಯ ಸಿನಿಮಾ ಕಥೆ ಬರಹಗಾರರು. ಬಾಹುಬಲಿ ಸಿನಿಮಾ ಕಲ್ಪನೆ ಮೂಡಿ ಬಂದಿದ್ದು ಅವರಿಂದಲೇ. ಅಚ್ಚರಿ ಎಂದರೆ ವಿಜಯೇಂದ್ರ ಪ್ರಸಾದ್​ ಅವರ ಮೊಬೈಲ್​ ವಾಲ್​ಪೇಪರ್​ನಲ್ಲಿ ಅವರ ಫೋಟೋ ಹಾಕಿಕೊಂಡಿಲ್ಲ. ಬದಲಿಗೆ ಟಾಲಿವುಡ್​ ನಿರ್ದೇಶಕ ಪುರಿ ಜಗನ್ನಾಥ್​ ಅವರ ಫೋಟೋ ಇದೆ.

ವಿಜಯೇಂದ್ರ ಪ್ರಸಾದ್ ಇತ್ತೀಚೆಗೆ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನವೊಂದನ್ನು ನೀಡಿದ್ದರು. ಆಗ ಅವರಿಗೆ ರಾಜಮೌಳಿ ಹೊರತುಪಡಿಸಿ ನಿಮ್ಮ ಫೇವರಿಟ್​ ನಿರ್ದೇಶಕರು ಯಾರು ಎಂದು ಪ್ರಶ್ನೆ ಮಾಡಲಾಗಿದೆ. ಈ ವೇಳೆ ಅವರು ಮೊಬೈಲ್​ ವಾಲ್​ಪೇಪರ್​ ಬಗ್ಗೆ ಮಾತನಾಡಿದ್ದಾರೆ. ನನಗೆ ಪುರಿ ಜಗನ್ನಾಥ್​ ಇಷ್ಟ. ಅವರ ಬಗ್ಗೆ ನಾನು ಅಸೂಯೆಪಟ್ಟುಕೊಳ್ಳುತ್ತೇನೆ. ಅವರಿಂದ ನಾನು ಸ್ಪೂರ್ತಿ ಪಡೆದುಕೊಂಡಿದ್ದೇನೆ. ಹೀಗಾಗಿ, ನನ್ನ ಮೊಬೈಲ್​ ವಾಲ್​ಪೇಪರ್​ನಲ್ಲಿ ಅವರ ಫೋಟೋ ಇದೆ ಎಂದಿದ್ದಾರೆ ರಾಜಮೌಳಿ.

ರಾಜಮೌಳಿ ಕುಟುಂಬ ಅನೇಕ ಬಾರಿ ಪುರಿ ಅವರನನ್ನು ಹೊಗಳಿದೆ. ರಾಜಮೌಳಿ ಸಿನಿಮಾಗಳನ್ನು ಮಾಡೋಕೆ ತುಂಬಾ ಸಮಯ ತೆಗೆದುಕೊಳ್ಳುತ್ತಾರೆ. ಆ ರೀತಿ ಮಾಡದೇ ವೇಗವಾಗಿ ಸಿನಿಮಾ ಮಾಡೋದು ಹೇಗೆ ಎಂಬುದನ್ನು ಪುರಿಯಿಂದ ಕಲಿಯುವಂತೆ ರಾಜಮೌಳಿ ಹೆಂಡತಿ, ಕಾಸ್ಟ್ಯೂಮ್​ ಡಿಸೈನರ್​ ರಮಾ ಅವರು ರಾಜಮೌಳಿಗೆ ಹೇಳಿದ್ದರಂತೆ.

ವಿಜಯೇಂದ್ರ ಪ್ರಸಾದ್​ ಅವರು ಹೇಳಿರುವ ಮಾತು ಸಾಕಷ್ಟು ವೈರಲ್​ ಆಗಿದೆ. ಅಲ್ಲದೆ, ಪುರಿ ಜಗನ್ನಾಥ್​ ಅಭಿಮಾನಿಗಳು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ರಾಜಮೌಳಿ ಸದ್ಯ ಆರ್​ಆರ್​ಆರ್​ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊವಿಡ್​ ಕಾರಣದಿಂದ ಸಿನಿಮಾ ಕೆಲಸಗಳು ನಿಂತಿವೆ. ಈ ಸಿನಿಮಾದ ಕತೆ ಹೆಣೆದಿದ್ದು ವಿಜಯೇಂದ್ರ ಪ್ರಸಾದ್​ ಅವರೇ. ಇನ್ನು ಪುರಿ ಜಗನ್ನಾಥ್​ ವಿಜಯ್​ ದೇವರಕೊಂಡ ನಟನೆಯ ಲೈಗರ್​ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ: RRR ಫೈಟಿಂಗ್​ ದೃಶ್ಯದಲ್ಲಿ ರಾಜಮೌಳಿ ಹೊಸ ಪ್ರಯೋಗ; ತಂದೆಯಿಂದಲೇ ಬಯಲಾದ ಸೀಕ್ರೆಟ್​ ಏನು?

RRR Ott Rights: 325 ಕೋಟಿ ರೂ.ಗೆ ಸೇಲ್​ ಆಯ್ತು ಆರ್​ಆರ್​ಆರ್ ಚಿತ್ರ; ಯಾವ ಓಟಿಟಿಯಲ್ಲಿ ಪ್ರಸಾರ?

'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ