ಬಾಲಿವುಡ್​ ನಟಿ ಜಾಹ್ನವಿ ಕೇಳಿದ ಪ್ರಶ್ನೆಗೆ ನಿಮ್ಮಿಂದ ಉತ್ತರ ಕೊಡೋಕೆ ಸಾಧ್ಯವೇ?

ಕೊವಿಡ್​ ಎರಡನೇ ಅಲೆ ಜೋರಾಗಿ ಹಬ್ಬುತ್ತಿದೆ. ಸರ್ಕಾರ ಹೇರಿರುವ ಕಠಿಣ ಲಾಕ್​ಡೌನ್​ನಿಂದಾಗಿ ಚಿತ್ರರಂಗದ ಕೆಲಸ ಸಂಪೂರ್ಣವಾಗಿ ನಿಂತಿದೆ. ಹೀಗಾಗಿ, ಜಾಹ್ನವಿ ಕಪೂರ್​ ಮನೆಯಲ್ಲೇ ಇದ್ದಾರೆ.

ಬಾಲಿವುಡ್​ ನಟಿ ಜಾಹ್ನವಿ ಕೇಳಿದ ಪ್ರಶ್ನೆಗೆ ನಿಮ್ಮಿಂದ ಉತ್ತರ ಕೊಡೋಕೆ ಸಾಧ್ಯವೇ?
ಜಾನ್ಹವಿ
Follow us
ರಾಜೇಶ್ ದುಗ್ಗುಮನೆ
|

Updated on:May 30, 2021 | 9:05 PM

ಕೊವಿಡ್​ ಲಾಕ್​ಡೌನ್​ನಿಂದಾಗಿ ಎಲ್ಲಾ ಸ್ಟಾರ್ಸ್​ ಮನೆಯಲ್ಲೇ ಇದ್ದಾರೆ. ಹೀಗಾಗಿ ಟೈಮ್​ಪಾಸ್​ಗೆ ಸೆಲೆಬ್ರಿಟಿಗಳು ತಮ್ಮಿಷ್ಟದ ಕೆಲಸ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಇನ್ನು, ‘ಆಸ್ಕ್​ ಮಿ ಎನಿಥಿಂಗ್​’ ಚಾಲೆಂಜ್​ಗಳನ್ನೂ ಸೆಲೆಬ್ರಿಟಿಗಳು ಮಾಡುತ್ತಿದ್ದಾರೆ. ಈಗ ನಟಿ ಜಾಹ್ನವಿ ಕಪೂರ್ ಭಿನ್ನ ಪೋಸ್ಟ್​ ಒಂದನ್ನು ಮಾಡಿದ್ದಾರೆ. ಅಷ್ಟೇ ಅಲ್ಲ, ಅವರು ಅಭಿಮಾನಿಗಳಿಗೆ ಪ್ರಶ್ನೆಯನ್ನೂ ಕೇಳಿದ್ದಾರೆ.

ಕೊವಿಡ್​ ಎರಡನೇ ಅಲೆ ಜೋರಾಗಿ ಹಬ್ಬುತ್ತಿದೆ. ಸರ್ಕಾರ ಹೇರಿರುವ ಕಠಿಣ ಲಾಕ್​ಡೌನ್​ನಿಂದಾಗಿ ಚಿತ್ರರಂಗದ ಕೆಲಸ ಸಂಪೂರ್ಣವಾಗಿ ನಿಂತಿದೆ. ಹೀಗಾಗಿ, ಜಾಹ್ನವಿಕಪೂರ್​ ಮನೆಯಲ್ಲೇ ಇದ್ದಾರೆ. ಟೈಮ್​ಪಾಸ್​ಗೆ ಡಾನ್ಸ್​ ಮಾಡುತ್ತಿದ್ದ ಅವರು, ಈಗ ತಮ್ಮ ಕಲೆಯನ್ನು ಹೊರ ಹಾಕಿದ್ದಾರೆ.

ಅದ್ಭುತವಾಗಿ ಚಿತ್ರಗಳನ್ನು ಪೇಂಟ್​ ಮಾಡಿರುವ ಜಾಹ್ನವಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಯುವತಿಯೊಬ್ಬಳು ನದಿಯಲ್ಲಿ ಈಜುತ್ತಿರುವುದು, ಸಮುದ್ರದ ತೀರ ಮತ್ತಿತ್ಯಾದಿಗಳನ್ನು ಜಾಹ್ನವಿ ತಮ್ಮ ಕುಂಚದಿಂದ ಅರಳಿಸಿದ್ದಾರೆ. ಅಲ್ಲದೆ, ‘ನನ್ನನ್ನು ನಾನು ಈಗ ಪೇಂಟರ್​ ಎಂದು ಕರೆದುಕೊಳ್ಳಬಹುದೇ?’ ಎಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಅನೇಕರು ಕಮೆಂಟ್​ ಮಾಡಿದ್ದಾರೆ. ನೀವು ಬಿಡಿಸಿದ ಚಿತ್ರಗಳು ಅದ್ಭುತವಾಗಿದೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು, ನನಗೂ ಒಂದು ಪೇಂಟಿಂಗ್​ ಬಿಡಿಸಿಕೊಡಿ ಎನ್ನುವ ಬೇಡಿಕೆ ಇಟ್ಟಿದ್ದಾರೆ. ಹಲವರು, ನಿಮ್ಮನ್ನು ನೀವು ಪೇಂಟರ್​ ಎಂದು ಕರೆದುಕೊಳ್ಳಬಹುದು ಎಂದು ಮನಸ್ಫೂರ್ತಿಯಾಗಿ ಹೇಳಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಸ್ಟಾರ್​ ನಟಿಯ ಮಗಳಾದರೂ ಜಾಹ್ನವಿ ಕಪೂರ್​​ಗೆ ಅದೃಷ್ಟ ಕೈ ಕೊಡುತ್ತಿದೆ. ನಟಿಸಿದ ಯಾವ ಸಿನಿಮಾಗಳೂ ಕೈ ಹಿಡಿಯುತ್ತಿಲ್ಲ. ಮೊದಲ ಸಿನಿಮಾ ‘ಧಡಕ್​’ ಬಳಿಕ ಅವರಿಗೆ ಮತ್ತೆ ದೊಡ್ಡ​ ಗೆಲುವು ಸಿಗಲೇ ಇಲ್ಲ. ‘ಗುಂಜನ್​ ಸಕ್ಸೇನಾ’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇತ್ತಾದರೂ ಸಿನಿಪ್ರಿಯರು ಅದಕ್ಕೆ ಮೆಚ್ಚುಗೆ ಸೂಚಿಸಿಲ್ಲ. ಇತ್ತೀಚೆಗೆ ತೆರೆಕಂಡ ರೂಹಿ ಸಿನಿಮಾ ಮೊದಲ ದಿನವೇ ಪೈರಸಿ ಹಾವಳಿಗೆ ತುತ್ತಾಗಿ ನೆಲಕಚ್ಚಿತು.  ಸದ್ಯ ‘ದೋಸ್ತಾನಾ 2’ ಹಾಗೂ ‘ಗುಡ್​​ ಲಕ್​ ಜೆರ್ರಿ’ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ.

ಇದನ್ನೂ ಓದಿ: ಜಾಹ್ನವಿ ಕಪೂರ್ ಬೆಲ್ಲಿ ಡ್ಯಾನ್ಸ್​ಗೆ ಅಭಿಮಾನಿಗಳು ಫಿದಾ!

Published On - 8:44 pm, Sun, 30 May 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ