ಇಂಡಿಯನ್ ಐಡಲ್ ಫೇಕ್ ಎಂದು ಹೊರ ಬಂದ ಜಡ್ಜ್ ಬಿಚ್ಚಿಟ್ರು ಅಸಲಿ ವಿಚಾರ
‘ಇಂಡಿಯನ್ ಐಡಲ್ 12’ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಶೋನಲ್ಲಿ ನಕಲಿ ಲವ್ ಸ್ಟೋರಿಗಳನ್ನು ಹುಟ್ಟಿಸಿ ಜನರ ಸೆಳೆಯುವ ತಂತ್ರ ಮಾಡಲಾಗುತ್ತಿದೆ ಎನ್ನಲಾಗಿದೆ.
ಇಂಡಿಯನ್ ಐಡಲ್ ಇತ್ತೀಚೆಗೆ ಸಾಕಷ್ಟು ವಿವಾದದಲ್ಲಿದೆ. ಬಡತನ, ಫೇಕ್ ಲವ್ ಸ್ಟೋರಿಗಳೇ ರಿಯಾಲಿಟಿ ಶೋಗಳ ಬಂಡವಾಳ ಎಂದು ಸ್ವತಃ ಇಂಡಿಯನ್ ಐಡಲ್ ವಿನ್ನರ್ ಆರೋಪಿಸಿದ್ದರು. ಈಗ ಈ ಶೋನ ಜಡ್ಜ್ ಕೂಡ ಇದೇ ರೀತಿಯ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ, ಶೋ ನಿಂದ ಹೊರ ಬರೋಕೆ ಕಾರಣ ನೀಡಿದ್ದಾರೆ.
ಇಂಡಿಯನ್ ಐಡಲ್ ಐದು ಹಾಗೂ ಆರನೇ ಸೀಸನ್ ಜಡ್ಜ್ ಆಗಿದ್ದ ಸುನಿಧಿ ಚೌಹಾಣ್ ನಂತರ ರಿಯಾಲಿಟಿ ಶೋನಿಂದ ಹೊರ ಬಂದಿದ್ದರು. ಅಲ್ಲದೆ, ಈ ಶೋ ಸ್ಕ್ರಿಪ್ಟೆಡ್ ರೂಪದಲ್ಲಿ ನಡೆಯುತ್ತಿದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
‘ಸ್ಪರ್ಧಿಗಳು ಹೇಗೆ ಹಾಡಿದರೂ ಮೆಚ್ಚುಗೆ ವ್ಯಕ್ತಪಡಿಸಬೇಕು ಎಂದು ಮೇಕರ್ಗಳು ನಮಗೆ ಹೇಳುತ್ತಿದ್ದರು. ಅದು ನಿಜಕ್ಕೂ ದೊಡ್ಡ ವಿಚಾರ. ಹೀಗಾಗಿ, ನನಗೆ ಜಡ್ಜ್ ಆಗಿ ಮುಂದುವರಿಯೋಕೆ ಸಾಧ್ಯವಾಗುತ್ತಿಲ್ಲ. ಅವರಿಗೆ ಹೇಗೆ ಬೇಕೋ ಹಾಗೆ ಇರೋಕೆ ಸಾಧ್ಯವಿಲ್ಲ. ಹೀಗಾಗಿ, ನಾನು ಹೊರ ಬಂದೆ. ನಾನು ಯಾವುದೇ ಶೋಗಳಿಗೂ ಈಗ ಜಡ್ಜ್ ಆಗಿ ಹೋಗುತ್ತಿಲ್ಲ ಎಂದಿದ್ದಾರೆ ಸುನಿಧಿ.
ಈ ಕೆಲಸವನ್ನು ವಾಹಿನಿಯವರು ಏಕೆ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಸುನಿಧಿ ಉತ್ತರಿಸಿದ್ದಾರೆ. ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಬೇಕು ಎನ್ನುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ ಎಂದು ನನಗನ್ನಿಸುತ್ತದೆ. ಎಲ್ಲವೂ ಜನರ ಗಮನ ಸೆಳೆಯಲಷ್ಟೇ ಎಂದು ಸುನಿಧಿ ಎಲ್ಲವನ್ನೂ ಮುಕ್ತವಾಗಿ ಮಾತನಾಡುವ ಮೂಲಕ ಇಂಡಿಯನ್ ಐಡಲ್ ರಿಯಾಲಿಟಿ ಶೋ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
‘ಇಂಡಿಯನ್ ಐಡಲ್ 12’ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಶೋನಲ್ಲಿ ನಕಲಿ ಲವ್ ಸ್ಟೋರಿಗಳನ್ನು ಹುಟ್ಟಿಸಿ ಜನರ ಸೆಳೆಯುವ ತಂತ್ರ ಮಾಡಲಾಗುತ್ತಿದೆ ಎನ್ನಲಾಗಿದೆ. ಇಂಡಿಯನ್ ಐಡಲ್ ಮೊದಲ ಸೀಸನ್ನ ವಿನ್ನರ್ ಅಭಿಜೀತ್ ಸಾವಂತ್ ಕೂಡ ಈ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು.
ಇದನ್ನೂ ಓದಿ: ಬಡತನ, ಫೇಕ್ ಲವ್ ಸ್ಟೋರಿಗಳೇ ರಿಯಾಲಿಟಿ ಶೋಗಳ ಬಂಡವಾಳ; ಇಂಡಿಯನ್ ಐಡಲ್ ವಿನ್ನರ್ ಆರೋಪ