ರಶ್ಮಿಕಾ ಸಿನಿಮಾ ರಿಲೀಸ್​ಗೂ ಮುನ್ನವೇ ವಿದೇಶದಲ್ಲಿ ಜಾಕ್​ಪಾಟ್​; ಕೊಡಗಿನ ಕುವರಿ ಮುಟ್ಟಿದ್ದೆಲ್ಲ ಚಿನ್ನ

ರಶ್ಮಿಕಾ ಸಿನಿಮಾ ರಿಲೀಸ್​ಗೂ ಮುನ್ನವೇ ವಿದೇಶದಲ್ಲಿ ಜಾಕ್​ಪಾಟ್​; ಕೊಡಗಿನ ಕುವರಿ ಮುಟ್ಟಿದ್ದೆಲ್ಲ ಚಿನ್ನ
ರಶ್ಮಿಕಾ ಮಂದಣ್ಣ

Pushpa: ‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್​ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಇದರಲ್ಲಿ ಅವರ ಪಾತ್ರ ತುಂಬ ಡಿಫರೆಂಟ್​ ಆಗಿದೆ. ಅಲ್ಲು ಅರ್ಜುನ್​ ಕೂಡ ರಗಡ್ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ.

Madan Kumar

|

May 31, 2021 | 9:13 AM

ನಟಿ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಕನ್ನಡದಿಂದ ಬಣ್ಣದ ಬದುಕು ಆರಂಭಿಸಿದ ಈ ಬೆಡಗಿ ಈಗ ತಮಿಳು, ತೆಲುಗು ಮಾತ್ರವಲ್ಲದೆ ಹಿಂದಿಯಲ್ಲೂ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಅವರ ಕಾಲ್​ಶೀಟ್​ಗಾಗಿ ದೊಡ್ಡ ದೊಡ್ಡ ಪ್ರೊಡಕ್ಷನ್​ ಕಂಪನಿಗಳು ನಾಮುಂದು ತಾಮುಂದು ಎಂದು ಹಪಹಪಿಸುತ್ತಿವೆ. ರಶ್ಮಿಕಾ ಅವರ ಈ ಯಶಸ್ಸಿನ ಓಟ ದಿನದಿನದಿಂದ ವೇಗ ಹೆಚ್ಚಿಸಿಕೊಳ್ಳುತ್ತಿದೆ. ಪ್ರತಿ ಸಿನಿಮಾದಿಂದಲೂ ಅವರ ಚಾರ್ಮ್​ ಹೆಚ್ಚುತ್ತಿದೆ. ಅವರು ಮುಟ್ಟಿದ್ದೆಲ್ಲವೂ ಚಿನ್ನ ಎಂಬಂತಾಗಿದೆ. ಈಗ ‘ಪುಷ್ಪ’ ಸಿನಿಮಾ ಬಗ್ಗೆ ಒಂದು ಬಿಗ್​ ನ್ಯೂಸ್​ ಕೇಳಿಬಂದಿದೆ.

‘ಪುಷ್ಪ’ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಲು ಕಾರಣ ಹಲವು. ಈ ಚಿತ್ರದಲ್ಲಿ ಅಲ್ಲು ಅರ್ಜುನ್​ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಇದರಲ್ಲಿ ಅವರ ಪಾತ್ರ ತುಂಬ ಡಿಫರೆಂಟ್​ ಆಗಿದೆ. ಅಲ್ಲು ಅರ್ಜುನ್​ ಕೂಡ ರಗಡ್ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ಸುಕುಮಾರ್​ ಅವರ ಬತ್ತಳಿಕೆಯಿಂದ ಈ ಸಿನಿಮಾ ಮೂಡಿಬರುತ್ತಿದ್ದು, ರಿಲೀಸ್​ಗೂ ಮುನ್ನವೇ ದೊಡ್ಡ ಡೀಲ್​ಗಳನ್ನು ಕುದುರಿಸುತ್ತಿದೆ. ಈ ಚಿತ್ರವನ್ನು ವಿದೇಶದಲ್ಲಿ ರಿಲೀಸ್ ಮಾಡಲು ಅನೇಕರು ಮುಂದೆ ಬರುತ್ತಿದ್ದಾರೆ. ದೊಡ್ಡ ಮೊತ್ತವನ್ನೇ ನಿರ್ಮಾಪಕರಿಗೆ ನೀಡಲು ವಿತರಕರು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

ಅಲ್ಲು ಅರ್ಜುನ್​ಗೆ ವಿಶ್ವಾದ್ಯಂತ ಫ್ಯಾನ್ಸ್​ ಇದ್ದಾರೆ. ಹಾಗಾಗಿ ಅವರ ಚಿತ್ರಗಳು ವಿದೇಶದಲ್ಲೂ ರಿಲೀಸ್​ ಆಗಿ ಒಳ್ಳೆಯ ಕಮಾಯಿ ಮಾಡುತ್ತವೆ. ಕೊರೊನಾ ವೈರಸ್​ ಹಾವಳಿ ಕಡಿಮೆ ಆದ ಬಳಿಕ ಚಿತ್ರ ಬಿಡುಗಡೆ ಆಗಲಿದೆ. ಚಿತ್ರದ ವಿತರಣೆ ಹಕ್ಕುಗಳನ್ನು ಕೊಂಡುಕೊಳ್ಳಲು ವಿತರಕರು ಮುಗಿಬಿದ್ದಿದ್ದು, ಭಾರಿ ದೊಡ್ಡ ಮೊತ್ತಕ್ಕೆ ವ್ಯವಹಾರ ಕುದುರುವ ಸಾಧ್ಯತೆ ಇದೆ. ಇದು ಅಲ್ಲು ಅರ್ಜುನ್​ ವೃತ್ತಿಜೀವನದಲ್ಲೇ ಸಿಗುತ್ತಿರುವ ದೊಡ್ಡ ಮೊತ್ತ ಎನ್ನಲಾಗುತ್ತಿದೆ. ಪಕ್ಕಾ ಸಂಖ್ಯೆಯ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

ರಿಲೀಸ್​ಗೂ ಮುನ್ನವೇ ‘ಪುಷ್ಪ’ ಚಿತ್ರ ಈ ಮಟ್ಟಕ್ಕೆ ಹವಾ ಸೃಷ್ಟಿಸುತ್ತಿದೆ. ಈ ಮೂಲಕ ರಶ್ಮಿಕಾ ಮಂದಣ್ಣ ಅವರ ಸಿನಿಖಾತೆಯಲ್ಲಿ ಇನ್ನೊಂದು ಸೂಪರ್​ ಹಿಟ್​ ದಾಖಲಾಗುವುದರಲ್ಲಿ ಅನುಮಾನವೇ ಇಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಈ ಸಿನಿಮಾ ಎರಡು ಪಾರ್ಟ್​ಗಳಲ್ಲಿ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಕೂಡ ಇದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತವಾಗಿ ಘೋಷಣೆ ಆಗಬೇಕಿದೆ. ಎರಡನೇ ಪಾರ್ಟ್​ಗೆ ಬೇರೆ ಶೀರ್ಷಿಕೆ ಇಡುವ ಬಗ್ಗೆಯೂ ಚಿತ್ರತಂಡದಲ್ಲಿ ಚರ್ಚೆಗಳು ಆಗುತ್ತಿವೆ ಎನ್ನಲಾಗಿದೆ.

ಬಾಲಿವುಡ್​ಗೂ ಕಾಲಿಟ್ಟಿರುವ ರಶ್ಮಿಕಾ ಮಂದಣ್ಣ ಅಮಿತಾಭ್​ ಬಚ್ಚನ್​ ಜೊತೆ ‘ಗುಡ್​ ಬೈ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘ಮಿಷನ್​ ಮಜ್ನು’ ಸಿನಿಮಾದಲ್ಲಿ ಸಿದ್ದಾರ್ಥ್​ ಮಲ್ಹೋತ್ರಾ ಜೊತೆ ತೆರೆಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ:

ನಟಿ ರಶ್ಮಿಕಾ ಮಂದಣ್ಣ ಕಾಲೇಜ್​ ದಿನಗಳ ಫೋಟೋ ವೈರಲ್​; ಹೇಗಿದ್ರು ನೋಡಿ ನ್ಯಾಷನಲ್​ ಕ್ರಶ್

‘ಕಿರಿಕ್​ ಪಾರ್ಟಿ ಹಿಂದಿ ರಿಮೇಕ್​ನಲ್ಲಿ ನಾನು ನಟಿಸಲ್ಲ’; ರಶ್ಮಿಕಾ ಖಡಕ್​ ನಿರ್ಧಾರಕ್ಕಿದೆ ಬಲವಾದ ಕಾರಣ

Follow us on

Related Stories

Most Read Stories

Click on your DTH Provider to Add TV9 Kannada