World No Tobacco Day: ಅಜಯ್​ ದೇವಗನ್​, ಹೃತಿಕ್​, ಸಲ್ಮಾನ್, ಸೈಫ್​​ ಸಿಗರೇಟ್ ಚಟ​ ಬಿಡಲು ಕಾರಣ ಆಗಿದ್ದು ಏನು?

World No Tobacco Day: ಬಾಲಿವುಡ್​ ನಟರಾದ ಅಜಯ್ ದೇವಗನ್​, ಸಲ್ಮಾನ್​ ಖಾನ್​, ಹೃತಿಕ್​ ರೋಷನ್​, ಸೈಫ್​ ಅಲಿ ಖಾನ್​ ಮುಂತಾದವರು ಸಿಗರೇಟ್​ನ ದಾಸರಾಗಿದ್ದರು. ಅವರ ಒತ್ತಡ ಜೀವನದಲ್ಲಿ ಸಿಗರೇಟ್​ ಕೂಡ ಒಂದು ಭಾಗವಾಗಿತ್ತು.

World No Tobacco Day: ಅಜಯ್​ ದೇವಗನ್​, ಹೃತಿಕ್​, ಸಲ್ಮಾನ್, ಸೈಫ್​​ ಸಿಗರೇಟ್ ಚಟ​ ಬಿಡಲು ಕಾರಣ ಆಗಿದ್ದು ಏನು?
ಧೂಮಪಾನ ತ್ಯಜಿಸಿದ ಬಾಲಿವುಡ್​ ಸ್ಟಾರ್​ ನಟರು
Follow us
ಮದನ್​ ಕುಮಾರ್​
|

Updated on: May 31, 2021 | 11:39 AM

ಜಗತ್ತಿನಾದ್ಯಂತ ಇಂದು ‘ವಿಶ್ವ ತಂಬಾಕು ರಹಿತ ದಿನ’ ಆಚರಿಸಲಾಗುತ್ತಿದೆ. ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಜನಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಕೋಟ್ಯಂತರ ಜನರು ತಂಬಾಕು ಸೇವನೆಯಿಂದ ಆರೋಗ್ಯ ಕೆಡಿಸಿಕೊಂಡಿದ್ದಾರೆ. ಬೀಡಿ, ಸಿಗರೇಟ್​ ಸೇದುವುದರಿಂದ ದೀರ್ಘಾವಧಿಯಲ್ಲಿ ಪ್ರಾಣಕ್ಕೂ ಅಪಾಯ ಸಂಭವಿಸುತ್ತದೆ. ಹಲವು ಸ್ಟಾರ್​ ನಟರು ಒಂದು ಕಾಲದಲ್ಲಿ ಚೈನ್​ ಸ್ಮೋಕರ್​ಗಳಾಗಿದ್ದರು. ಆದರೆ ನಂತರದಲ್ಲಿ ಅವರಿಗೆ ತಮ್ಮ ತಪ್ಪಿನ ಅರಿವಾಗಿ ಆ ಚಟದಿಂದ ದೂರಬಂದರು.

ಬಾಲಿವುಡ್​ನಲ್ಲಿ ನಟರಾದ ಅಜಯ್ ದೇವಗನ್​, ಸಲ್ಮಾನ್​ ಖಾನ್​, ಹೃತಿಕ್​ ರೋಷನ್​, ಸೈಫ್​ ಅಲಿ ಖಾನ್​ ಮುಂತಾದವರು ಸಿಗರೇಟ್​ನ ದಾಸರಾಗಿದ್ದರು. ಅವರ ಒತ್ತಡ ಜೀವನದಲ್ಲಿ ಸಿಗರೇಟ್​ ಕೂಡ ಒಂದು ಭಾಗವಾಗಿತ್ತು. ಆದರೆ ನಂತರದ ದಿನಗಳಲ್ಲಿ ಅವರು ಆ ದುಷ್ಚಟದಿಂದ ಹೊರಬಂದರು. ಅಷ್ಟಕ್ಕೂ ಅವರು ಸಿಗರೇಟ್​ ಬಿಡಲು ಕಾರಣ ಆಗಿದ್ದೇನು? ಮೊದಲ ಕಾರಣ ಆರೋಗ್ಯ ಸಮಸ್ಯೆ.

1. ಅರ್ಜುನ್​ ರಾಮ್​ಪಾಲ್

ಖ್ಯಾತ ನಟ ಅರ್ಜುನ್​ ರಾಮ್​ಪಾಲ್​ ಅವರು ಸಿಗರೇಟ್​ ವ್ಯಸನಿ ಆಗಿದ್ದರು. ಆದರೆ ಕಳೆದ ವರ್ಷ ಲಾಕ್​ಡೌನ್​ ಆರಂಭವಾದಾಗ ಅವರಿಗೆ ತಮ್ಮ ತಪ್ಪಿನ ಅರಿವಾಯಿತು. ಹಾಗಾಗಿ ಅವರು ಸಿಗರೇಟ್​ ತ್ಯಜಿಸಿದರು. ಕಳೆದೊಂದು ವರ್ಷದಿಂದ ಅವರು ಸಿಗರೇಟ್​ನಿಂದ ದೂರ ಇದ್ದಾರೆ.

2. ಸಲ್ಮಾನ್​ ಖಾನ್​

ಬಾಲಿವುಡ್​ನ ಬಹುಬೇಡಿಕೆಯ ಸ್ಟಾರ್​ ಕಲಾವಿದ ಸಲ್ಮಾನ್​ ಖಾನ್​ ಅವರು ಸಿಕ್ಕಾಪಟ್ಟೆ ಸಿಗರೇಟ್​ ಸೇದುತ್ತಿದ್ದರು. ಆದರೆ 2010ರಲ್ಲಿ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಯಿತು. ನಂತರ ಅವರು ಸಿಗರೇಟ್ ವ್ಯಸನ​ ಬಿಡುವ ನಿರ್ಧಾರ ತೆಗೆದುಕೊಂಡರು.

3. ಸೈಫ್​ ಅಲಿ ಖಾನ್​

ನಟ ಸೈಫ್​ ಅಲಿ ಖಾನ್​ ಅವರು ಫಿಟ್ನೆಸ್​ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಆದರೆ ಅವರಿಗೆ 36ನೇ ವಯಸ್ಸಿನಲ್ಲಿ ಹೃದಯಾಘಾತ ಸಂಭವಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ. 2007ರಲ್ಲಿ ಅವರಿಗೆ ಹಾರ್ಟ್​ ಅಟ್ಯಾಕ್​ ಆಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆ ಘಟನೆ ನಂತರ ಅವರು ಸಿಗರೇಟ್​ ತ್ಯಜಿಸುವ ನಿರ್ಧಾರ ಮಾಡಿದರು.

4. ಅಜಯ್​ ದೇವಗನ್​

ಅಜಯ್​ ದೇವಗನ್​ ಕೂಡ ಒಂದು ಕಾಲದಲ್ಲಿ ಚೈನ್​ ಸ್ಮೋಕರ್​ ಆಗಿದ್ದರು. ಸದಾ ಕಾಲ ಅವರ ಕೈಯಲ್ಲಿ ಸಿಗರೇಟ್​ ಇರುತ್ತಿತ್ತು. ಅವರ ಕುಟುಂಬದಲ್ಲಿ ಅನೇಕರಿಗೆ ಪದೇಪದೇ ಆರೋಗ್ಯ ಸಮಸ್ಯೆ ಉಂಟಾಗುತ್ತಿತ್ತು. ಅದನ್ನು ಮನಗಂಡ ಬಳಿಕ ಅವರು ಧೂಮಪಾನದಿಂದ ದೂರ ಉಳಿಯಲು ತೀರ್ಮಾನಿಸಿದರು.

5. ಹೃತಿಕ್​ ರೋಷನ್​

ಬೇರೆ ನಟರಂತೆ ಹೃತಿಕ್​ ರೋಷನ್​ ಸಹ ಧೂಮಪಾನದ ದಾಸರಾಗಿದ್ದರು. ಆದರೆ ಅವರನ್ನು ಬದಲಾಯಿಸಿದ್ದು ಒಂದು ಪುಸ್ತಕ. ಬ್ರಿಟಿಷ್​ ಲೇಖಕ ಅಲೆನ್​ ಕಾರ್​ ಅವರು ಬರೆದು ‘ಈಸಿ ವೇ ಟು ಸ್ಟಾಪ್​ ಸ್ಮೋಕಿಂಗ್​’ ಪುಸ್ತಕವನ್ನು ಓದಿದ ಬಳಿಕ ಹೃತಿಕ್​ ರೋಷನ್​ ಸಿಗರೇಟ್​ ಚಟ ಬಿಟ್ಟರು.

ಇದನ್ನೂ ಓದಿ:

World No Tobacco Day 2021: ಕೊರೊನಾ ಸೋಂಕಿನಿಂದ ಧೂಮಪಾನಿಗಳು ಹೆಚ್ಚಿನ ಅಪಾಯದಲ್ಲಿದ್ದಾರೆಯೇ?

‘ಧೂಮಪಾನ ಹಾನಿಕಾರಕ ಆದ್ರೆ ಸರ್ಕಾರದ ಬೊಕ್ಕಸಕ್ಕೆ.. ಲಾಭದಾಯಕ!’

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ