AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂದು ರಿಜೆಕ್ಟ್​ ಆಗಿದ್ದ ಮ್ಯಾಗಜಿನ್​ನಲ್ಲೇ ಸೋನು ಸೂದ್ ಫೋಟೋ; ಇದಲ್ಲವೇ ಯಶಸ್ಸು?

1999ರಲ್ಲಿಯೇ ಚಿತ್ರರಂಗಕ್ಕೆ ಕಾಲಿಟ್ಟ ಸೋನು ಸೂದ್​ ಸಾಕಷ್ಟು ಸಿನಿಮಾಗಳಲ್ಲಿ ವಿಲನ್​ ಆಗಿ ನಟಿಸಿದ್ದಾರೆ. ಅವರು ಚಿತ್ರರಂಗಕ್ಕೆ ಬರುವುದಕ್ಕೂ ಮೊದಲು ಅವಕಾಶಕ್ಕಾಗಿ ಸಾಕಷ್ಟು ಕಷ್ಟಪಟ್ಟಿದ್ದರು.

ಅಂದು ರಿಜೆಕ್ಟ್​ ಆಗಿದ್ದ ಮ್ಯಾಗಜಿನ್​ನಲ್ಲೇ ಸೋನು ಸೂದ್ ಫೋಟೋ; ಇದಲ್ಲವೇ ಯಶಸ್ಸು?
ಸೋನು ಸೂದ್
ರಾಜೇಶ್ ದುಗ್ಗುಮನೆ
|

Updated on:May 30, 2021 | 4:37 PM

Share

ಜೀವನದಲ್ಲಿ ಯಶಸ್ಸು ಕಂಡ ಬಹುತೇಕರ ಹಿಂದೆ ಒಂದು ಏಳುಬೀಳಿನ ಕಥೆ ಇರುತ್ತದೆ. ಸಾಕಷ್ಟು ಬಾರಿ ರಿಜೆಕ್ಟ್​ ಆದೆವಲ್ಲ ಎಂಬ ಕೊರಗು ಇರುತ್ತದೆ. ಆದರೆ, ಯಶಸ್ಸು ಸಿಕ್ಕ ನಂತರ ನಮ್ಮನ್ನು ದೂರ ಇಟ್ಟವರೇ ಕರೆದು ಮಣೆ ಹಾಕುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಸೋನು ಸೂದ್​. ಅವರು ಜೀವನದಲ್ಲಿ ನಡೆದ ಘಟನೆಯೊಂದರ ಬಗ್ಗೆ ಹೇಳಿಕೊಂಡಿದ್ದು, ಸ್ಫೂರ್ತಿದಾಯಕವಾಗಿದೆ.

1999ರಲ್ಲಿಯೇ ಚಿತ್ರರಂಗಕ್ಕೆ ಕಾಲಿಟ್ಟ ಸೋನು ಸೂದ್​ ಸಾಕಷ್ಟು ಸಿನಿಮಾಗಳಲ್ಲಿ ವಿಲನ್​ ಆಗಿ ನಟಿಸಿದ್ದಾರೆ. ಅವರು ಚಿತ್ರರಂಗಕ್ಕೆ ಬರುವುದಕ್ಕೂ ಮೊದಲು ಅವಕಾಶಕ್ಕಾಗಿ ಸಾಕಷ್ಟು ಕಷ್ಟಪಟ್ಟಿದ್ದರು. ಪ್ರತಿಷ್ಠಿತ ‘ಸ್ಟಾರ್​ಡಸ್ಟ್’​ ಮ್ಯಾಗಜಿನ್​ ಒಂದಕ್ಕೆ ಆಡಿಷನ್​ ಕೊಡಲು ಫೋಟೋ ಕಳುಹಿಸಿದ್ದರು. ಆದರೆ, ಸೋನು ಅವರನ್ನು ಮ್ಯಾಗಜಿನ್​ ತಂಡ ರಿಜೆಕ್ಟ್​ ಮಾಡಿತ್ತು.

ಕೊವಿಡ್​ ಬಂದ ನಂತರದಲ್ಲಿ ಸೋನು ಸೂದ್ ಸಾರ್ವಜನಿಕರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಟ್ವೀಟ್​ ಮಾಡಿದ ಕೆಲವೇ ಸಮಯದಲ್ಲಿ ಕಷ್ಟ ಎಂದವರಿಗೆ ಸಹಾಯ ಸಿಗುತ್ತಿದೆ. ಸೋನು ಮಾಡುತ್ತಿರುವ ಕೆಲಸ ನೋಡಿ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅವರ ಅಭಿಮಾನಿಗಳಂತೂ ಸೋನು ಸೂದ್​ ನೋಡಿ ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಒಂದು ಕಾಲದಲ್ಲಿ ಇವರನ್ನು ರಿಜೆಕ್ಟ್​ ಮಾಡಿದ ಸ್ಟಾರ್​ಡಸ್ಟ್​ ಮ್ಯಾಗಜಿನ್​ ಅವರೇ ಇಂದು ಸೋನು ಸೂದ್​ ಅವರ ಫೋಟೋವನ್ನು ಏಪ್ರಿಲ್​ ತಿಂಗಳ ಸಂಚಿಕೆಯಲ್ಲಿ ಕವರ್ ಫೋಟೋವಾಗಿ ಮುದ್ರಿಸಿದ್ದಾರೆ. ಇದನ್ನು ನೋಡಿದ ಸೋನು ಸೂದ್​ಗೆ ಸಾಕಷ್ಟು ಆನಂದವಾಗಿದೆ.

ಈ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿರುವ ಸೋನು ಸೂದ್, ಸ್ಟಾರ್​ಡಸ್ಟ್​ ಆಡಿಷನ್​ಗಾಗಿ ನಾನು ಪಂಜಾಬ್​ನಿಂದ ನನ್ನ ಫೋಟೋ ಕಳುಹಿಸಿ, ಅದು ರಿಜೆಕ್ಟ್​ ಆಗುತ್ತಿದ್ದ ದಿನಗಳಿದ್ದವು. ಆದರೆ, ಈಗ ಅದೆ ಸ್ಟಾರ್​ಡಸ್ಟ್​ ಮ್ಯಾಗಜಿನ್​ನಲ್ಲಿ ಇಷ್ಟೊಂದು ಅದ್ಭುತವಾಗಿ ನನ್ನ ಕವರ್​ ಫೋಟೋ ಹಾಕಿರುವುದಕ್ಕೆ ಧನ್ಯವಾದ ಅರ್ಪಿಸುತ್ತಿದ್ದೇನೆ ಎಂದು ಸೋನು ಸೂದ್ ಬರೆದುಕೊಂಡಿದ್ದಾರೆ. ಈ ಘಟನೆಯನ್ನು ಕೇಳಿದ ಅವರ ಅಭಿಮಾನಿಗಳು ಸ್ಫೂರ್ತಿ ಪಡೆದುಕೊಂಡಿದ್ದಾರೆ. ಅಲ್ಲದೆ, ಸೋನು ಸೂದ್​ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸೋನು ಸೂದ್​ ಅವರು ಮಾಡುತ್ತಿರುವ ಸಹಾಯದಿಂದ ಅನೇಕರ ಪ್ರಾಣ ಉಳಿದಿದೆ. ಹೀಗಾಗಿ, ಸಾಕಷ್ಟು ಮಂದಿ ಸೋನು ಸೂದ್​ ಅವರನ್ನು ದೇವರ ರೀತಿಯಲ್ಲಿ ಕಾಣುತ್ತಿದ್ದಾರೆ. ಕೆಲವರು ಸೋನು ಸೂದ್​ ಫೋಟೋಗೆ ಹಾಲಿನ ಅಭಿಷೇಕ ಮಾಡಿದರೆ, ಇನ್ನೂ ಕೆಲವರು ಅವರ ಫೋಟೋವನ್ನು ದೇವರ ಮನೆಯಲ್ಲಿ ಇಟ್ಟು ಪೂಜಿಸುತ್ತಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಸೋನು ಸೂದ್​ ಧನ್ಯವಾದ ಹೇಳಿದ್ದರು.

ಇದನ್ನೂ ಓದಿ: ಸೋನು ಸೂದ್​ ಮಾತ್ರವಲ್ಲ, ಕರುನಾಡಿಗೆ ಕೊವಿಡ್ ಕಷ್ಟದಲ್ಲಿ ನೆರವಾದ ಇನ್ನಿಬ್ಬರು ಬಾಲಿವುಡ್​ ಸ್ಟಾರ್​ಗಳು

Published On - 4:34 pm, Sun, 30 May 21

ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ
ಏರೋಸ್ಪೇಸ್ ಯೋಜನೆ ಬಗ್ಗೆ ಸಿಎಂ ಹೇಳಿಕೆ ಗೊಂದಲಮಯ: ವಿಜಯೇಂದ್ರ
ಏರೋಸ್ಪೇಸ್ ಯೋಜನೆ ಬಗ್ಗೆ ಸಿಎಂ ಹೇಳಿಕೆ ಗೊಂದಲಮಯ: ವಿಜಯೇಂದ್ರ
ಮನೆ ಕಟ್ಟಿಸಿಕೊಟ್ಟಿಲ್ಲ: KGF​ ಬಾಬು ಮನೆ ಮುಂದೆ ಜನರ ಪ್ರತಿಭಟನೆ
ಮನೆ ಕಟ್ಟಿಸಿಕೊಟ್ಟಿಲ್ಲ: KGF​ ಬಾಬು ಮನೆ ಮುಂದೆ ಜನರ ಪ್ರತಿಭಟನೆ
ಬೀಗರನ್ನು ಒಮ್ಮೆ ನಂಬಿ ಮೋಸ ಹೋಗಿದ್ದೇನೆ, ಪುನಃ ನಂಬಲಾರೆ: ಕೆಜಿಎಫ್ ಬಾಬು
ಬೀಗರನ್ನು ಒಮ್ಮೆ ನಂಬಿ ಮೋಸ ಹೋಗಿದ್ದೇನೆ, ಪುನಃ ನಂಬಲಾರೆ: ಕೆಜಿಎಫ್ ಬಾಬು