AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಂತಾಜನಕ ಸ್ಥಿತಿಯಲ್ಲಿ ‘ಸೂರ್ಯವಂಶ’ ನಟಿ ವಿಜಯಲಕ್ಷ್ಮೀ ಸಹೋದರಿ; ಸಹಾಯಕ್ಕಾಗಿ ಶಿವಣ್ಣನಿಗೆ ಮನವಿ

Vijayalakshmi: ಖ್ಯಾತ ನಟಿ ವಿಜಯಲಕ್ಷ್ಮೀ ಅವರ ಸಹೋದರಿ ಉಷಾ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ದಿನದಿಂದ ದಿನಕ್ಕೆ ಅವರ ಸ್ಥಿತಿ ಚಿಂತಾಜನಕ ಆಗುತ್ತಿದ್ದು, ಸಹಾಯಕ್ಕಾಗಿ ವಿಜಯಲಕ್ಷ್ಮೀ ಅಂಗಲಾಚಿದ್ದಾರೆ.

ಚಿಂತಾಜನಕ ಸ್ಥಿತಿಯಲ್ಲಿ ‘ಸೂರ್ಯವಂಶ’ ನಟಿ ವಿಜಯಲಕ್ಷ್ಮೀ ಸಹೋದರಿ; ಸಹಾಯಕ್ಕಾಗಿ ಶಿವಣ್ಣನಿಗೆ ಮನವಿ
ಶಿವರಾಜ್​ಕುಮಾರ್​, ಉಷಾ, ವಿಜಯಲಕ್ಷ್ಮೀ
ಮದನ್​ ಕುಮಾರ್​
| Edited By: |

Updated on: May 30, 2021 | 3:45 PM

Share

ನಾಗಮಂಡಲ, ಸೂರ್ಯವಂಶ ಮುಂತಾದ ಸಿನಿಮಾಗಳಲ್ಲಿ ನಟಿಸಿ ಕರುನಾಡಿನಲ್ಲಿ ಜನಪ್ರಿಯವಾದ ನಟಿ ವಿಜಯಲಕ್ಷ್ಮೀ ಅವರು ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಅವರ ಸಹೋದರಿ ಉಷಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಚೆನ್ನೈನಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೂ ಉಷಾ ಆರೋಗ್ಯ ಚಿಂತಾಜನಕ ಆಗಿದೆ. ಈ ಕಷ್ಟದ ಸಂದರ್ಭದಲ್ಲಿ ತಮಗೆ ಸಹಾಯ ಮಾಡುವಂತೆ ಅವರು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಈ ಕಷ್ಟವನ್ನು ಶಿವರಾಜ್​ಕುಮಾರ್​ ಅವರ ಗಮನಕ್ಕೆ ತನ್ನಿ ಎಂದು ವಿಜಯಲಕ್ಷ್ಮೀ ಅಳಲು ತೋಡಿಕೊಂಡಿದ್ದಾರೆ.

‘ಉಷಾ ಆರೋಗ್ಯದ ಬಗ್ಗೆ ಆತಂಕದಲ್ಲಿ ಇದ್ದೇನೆ. ಅವರ ಪರಿಸ್ಥಿತಿ ಕ್ರಿಟಿಕಲ್​ ಆಗಿದೆ. ಗರ್ಭಕೋಶದಲ್ಲಿ​ ಮೂರು ದೊಡ್ಡ ಗಡ್ಡೆಗಳು​ ಆಗಿದ್ದವು. ಅವು ದೊಡ್ಡದಾಗಿದ್ದರಿಂದ ಗರ್ಭಕೋಶ ತೆಗೆಯಬೇಕಾಯಿತು. ಕಳೆದ ತಿಂಗಳು 14ರಂದು ವೈದ್ಯರು ಸರ್ಜರಿ ಮಾಡಿದರು. ಆ ಬಳಿಕ ಅವರು ತುಂಬ ವೀಕ್​ ಆಗಿದ್ದರು. ನೀರು ಕೂಡ ಕುಡಿಯೋಕೆ ಆಗುತ್ತಿರಲಿಲ್ಲ. ಊಟ ಮಾಡಲು ಕಷ್ಟ ಆಗಿತ್ತು. ಆ ಆಸ್ಪತ್ರೆಯಲ್ಲಿ ಕೊವಿಡ್​ ಸೋಂಕಿತರು ಇದ್ದಿದ್ದರಿಂದ ಉಷಾ ಅಲ್ಲಿರುವುದು ಬೇಡ ಎಂದು ಡಾಕ್ಟರ್​ ಹೇಳಿದರು. ಮನೆಗೆ ಕರೆದುಕೊಂಡು ಬಂದ ಬಳಿಕ ಅವರಿಗೆ ಏನೇ ತಿಂದರೂ ಬ್ಲೀಡಿಂಗ್​ ಶುರು ಆಯಿತು. ನಂತರ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಕೊವಿಡ್​ ಇರುವುದರಿಂದ ಇಲ್ಲಿಗೆ ಬರಬೇಡಿ ಅಂತ ಹೇಳಿದರು’ ಎಂದು ವಿಡಿಯೋದಲ್ಲಿ ವಿಜಯಲಕ್ಷ್ಮಿ ವಿವರಿಸಿದ್ದಾರೆ.

‘ಉಷಾ ತುಂಬಾ ವೀಕ್​​ ಆಗಿದ್ದಾರೆ. ಎರಡು ಮೂರು ದಿನದಿಂದ ನೆನಪು ಮಾಡಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಮಾತನಾಡೋಕೆ ಆಗುತ್ತಿಲ್ಲ. ಸರ್ಜರಿ ಆದ ನಂತರ ಇಷ್ಟೆಲ್ಲ ಆಗಿದೆ. ಡಾಕ್ಟರ್​ ಜೊತೆ ಮಾತಾಡಿ ನನಗೆ ಸಾಕಾಗಿದೆ. ಯಾರೂ ಕೂಡ ಅವರು ಮಾಡಿರುವ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ. ಈಗ ಉಷಾ ಅವರಿಗೆ ಬೇರೆ ಕಡೆ ಚಿಕಿತ್ಸೆ ಕೊಡಿಸೋಕೆ ನಮ್ಮ ಬಳಿ ದುಡ್ಡಿಲ್ಲ. ನಾವೀಗ ಬಹಳ ನೋವಿನಲ್ಲಿ ಇದ್ದೇವೆ. ದಯವಿಟ್ಟು ನಮಗೆ ಆರ್ಥಿಕವಾಗಿ ಸಹಾಯ ಮಾಡಿ’ ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ.

‘ಈ ಸಂದರ್ಭದಲ್ಲಿ ಎಲ್ಲರೂ ಕಷ್ಟದಲ್ಲಿ ಇದ್ದಾರೆ. ಹಾಗಾಗಿ ದುಡ್ಡು ಕೇಳೋಕೆ ನನಗೆ ಬೇಜಾರಾಗುತ್ತಿದೆ. ಕರ್ನಾಟಕದಲ್ಲಿರುವ ಜನರು, ಅಭಿಮಾನಿಗಳು ಮತ್ತು ಚಿತ್ರರಂಗದ ಹಿರಿಯ ನಟರು ನನಗೆ ಸಹಾಯ ಮಾಡಿ. ದಯವಿಟ್ಟು ಇದನ್ನು ಶಿವಣ್ಣ ಅವರ ಗಮನಕ್ಕೆ ತನ್ನಿ ಎಂದು ಕೇಳಿಕೊಳ್ಳುತ್ತೇನೆ. ಇಲ್ಲಿಯೂ ರಜನಿಕಾಂತ್​ ಮುಂತಾದ ದೊಡ್ಡ ನಟರು ಇದ್ದಾರೆ. ಅವರಿಗೆ ಕರ್ನಾಟಕದ ಹಿರಿಯರು ವಿಷಯ ತಿಳಿಸಿದರೆ ನಮಗೆ ಸಹಾಯ ಆಗುತ್ತದೆ. ನನಗೆ ಅದನ್ನು ಒಬ್ಬಳೇ ಹೇಗೆ ಮಾಡಬೇಕು ಎಂದು ಗೊತ್ತಾಗುತ್ತಿಲ್ಲ’ ಎಂದು ಅವರು ಅಸಹಾಯಕತೆ ತೋಡಿಕೊಂಡಿದ್ದಾರೆ.

ಇದನ್ನೂ ಓದಿ:

ಸಹಾಯಕ್ಕಾಗಿ ಅಂಗಲಾಚಿದ ಕೆಲವೇ ಗಂಟೆಗಳಲ್ಲಿ ಸ್ಟಾರ್​ ನಟಿ ಪಿಯಾ ಸಹೋದರ ಕೊರೊನಾದಿಂದ ನಿಧನ

ಗ್ಲೆನ್​ ಮ್ಯಾಕ್ಸ್​​ವೆಲ್​​ಗೆ ಗೊತ್ತು ಸೆಂಚುರಿ ಸ್ಟಾರ್​ ಶಿವರಾಜ್​ಕುಮಾರ್​; ಶಿವಣ್ಣನ ಬಗ್ಗೆ ಮ್ಯಾಕ್ಸಿ ಹೇಳಿದ್ದೇನು?

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ